ಸಂಗೀತ ನುಡಿದರೆ ಮೇಘರಾಜಾನು ಕೂಡ ಧರೆಗಿಳಿದು ಬರುತ್ತಾನೆ: ಗುಡದೂರ

ಸಂಗೀತ ನುಡಿದರೆ ಮೇಘರಾಜಾನು ಕೂಡ ಧರೆಗಿಳಿದು ಬರುತ್ತಾನೆ: ಗುಡದೂರ Even Megharaja comes down to earth when music is played: Guddoora

ಸಂಗೀತ ನುಡಿದರೆ ಮೇಘರಾಜಾನು ಕೂಡ ಧರೆಗಿಳಿದು ಬರುತ್ತಾನೆ: ಗುಡದೂರ 

ಭಾಗ್ಯನಗರ 04: ಸಂಗೀತ ನುಡಿದರೆ ಮೇಘರಾಜಾನು ಕೂಡ ಧರೆಗಿಳಿದು ಬರುತ್ತಾನೆ, ಸಂಗೀತ ಎಲ್ಲರಲ್ಲು ಇದೆ ಮಗುವಿನ ಅಳುವಿನೊಂದಿಗೆ ಶುರುವಾದ ಸಂಗೀತ ನಮ್ಮ ಕೊನೆಯುಸಿರು ಇರುವವವರೆಗೂ ಸಂಗೀತದ ಜೊತೆ ಎಲ್ಲರೂ ಬದುಕುತ್ತಾರೆ ಎಂದು ಉಪನ್ಯಾಸಕ ಎಸ್ ಎಸ್ ಗುಡದೂರರವರು ಹೇಳಿದರು. 

ಅವರು ಗುರುಕುಲ ಸಂಗೀತ ಕಲಾ ಸಂಸ್ಥೆಯ ವತಿಯಿಂದ ಆಯೋಜಿಸಿದ ತಾವರೆಗೆರೆಯ ಶಿಕ್ಷಕರ ತರಬೇತಿ ಕೇಂದ್ರದಲ್ಲಿ ಗುರು ಗಾನ ಲಹರಿ ಎಂಬ ಕಾರ್ಯಕ್ರಮವನ. ಉದ್ಘಾಟಿಸಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಆರ್ ಜಿ ಅಂಬಿಗೇರ ಮಾತನಾಡಿ ಸಂಗೀತದಿಂದ ಮನಸ್ಸಿಗೆ ತಟ್ಟುವಂತಿರಬೇಕು ಕೇಳುವ ಮನಸ್ಸುಗಳು ಅದರ ಆಳವನ್ನು ಅರಿತಾಗ ಮಾತ್ರ ಅದರ ಮಹತ್ವ ಅದರ ರಸಾನುಭವವಾಗುತ್ತದೆ ಎಂದರು.  


ಮುಖ್ಯ ಅತಿಥಿಗಳಾಗಿ ಉಪನ್ಯಾಸಕರಾದ ಶ್ಯಾಮಣ್ಣ ಹಾಗೂ ಪ್ರಕಾಶ ಜಿ, ಹಾಗೂ ಸಂಗೀತ ಶಿಕ್ಷಕ ಮಾರುತಿ ದೊಡ್ಡಮನಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಲತಾ ಮೇಟಿಯವರಿಂದ ಜನಪದ ಸಂಗೀತ, ನಾಗರಾಜ ಶ್ಯಾವಿಯವರಿಂದ ಬಾನ್ಸೂರಿ ವಾದನ, ವಿಜಯಲಕ್ಷ್ಮೀಯವರಿಂದ ಭಾವಗೀತೆಗಳು, ಅಲ್ಲಾಭಕ್ಷಿ ಭೀಮನೂರರಿಂದ ದಾಸವಾಣಿ, ಮಾರುತಿ ದೊಡ್ಡಮನಿಯವರಿಂದ ತಬಲಾ ಸೋಲೋ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಮನಸೊರೆಗೊಂಡವು. ವಾದ್ಯವೃಂದದ ಕೀಬೋರ್ಡನಲ್ಲಿ ರಾಮಚಂದ್ರ​‍್ಪ ಉಪ್ಪಾರ, ಕೊಳಲಿನಲ್ಲಿ ನಾಗರಾಜ ಶ್ಯಾವಿ, ತಬಲದಲ್ಲಿ ಮಾರುತಿ ದೊಡ್ಡಮನಿ, ರಿಧಮ್ ಪ್ಯಾಡನಲ್ಲಿ ಸಂಜನ್ ಬೆಲ್ಲದ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸುಜಾತ ಹಿರೇಮಠರವರು  ನಿರೂಪಿಸಿ ವಂದಿಸಿದರು.