ಪ್ರೌಢ ಶಾಲಾ ಮಕ್ಕಳಿಗಾಗಿ ಪ್ರಬಂಧ ಸ್ಪರ್ಧೆ
Essay competition for high school students
ಬೆಳಗಾವಿ 6: ನಗರದ ಬೆಳಗಾವಿ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನದವರು ಹುದಲಿ ಗ್ರಾಮದಲ್ಲಿ ಪ್ರೌಢಶಾಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗಾಗಿ ‘ನನ್ನ ಶಾಲಾ ದಿನಗಳು’ ಮತ್ತು ‘ನನ್ನ ಮೆಚ್ಚಿನ ಸಾಹಿತಿ’ ವಿಷಯಗಳ ಕುರಿತಂತೆ ಪ್ರಬಂಧ ಸ್ಪರ್ಧೆಯನ್ನು ಹಮ್ಮಿಕೊಂಡದ್ದರು. ಸ್ಪರ್ಧೆಯಲ್ಲಿ ಹುದಲಿಯ ಎಸ್. ಸಿ. ಮಾಳಗಿ ಪ್ರೌಢಶಾಲೆ ಮತ್ತು ಶಾರದಾ ಪ್ರೌಢಶಾಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.
ಸಾಹಿತ್ಯ ಪ್ರತಿಷ್ಠಾನದ ಅಧ್ಯಕ್ಷ ಎನ್. ಬಿ. ದೇಶಪಾಂಡೆ ಸ್ಪರ್ಧೆಯ ನಿಯಮಗಳನ್ನು ವಿವರಿಸಿ ಈ ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ, ತೃತೀಯ ಹೀಗೆ ಮೂರು ಬಹುಮಾನಗಳಿದ್ದು ಅವುಗಳನ್ನು ಡಿಸೆಂಬರ್‌ದಲ್ಲಿ ನಡೆಯುವ ಸಾಹಿತ್ಯ ಪ್ರತಿಷ್ಠಾನದ ವಾರ್ಷಿಕೋತ್ಸವ ಸಂದರ್ಭದಲ್ಲಿ ನೀಡಲಾಗುವುದು ಎಂದು ಹೇಳಿದರು.
. ಸ್ಪರ್ಧೆಯ ಸಂಯೋಜಕ ಚಿದಂಬರ ಮುನವಳ್ಳಿಯವರು ಮಾತನಾಡುತ್ತ ಬಹುಮಾನ, ಪ್ರಶಸ್ತಿಗಳು ಸಿಗುವುದು ಅಥವಾ ಸಿಗದೇ ಇರುವುದು ಮುಖ್ಯವಲ್ಲ. ಪ್ರಯತ್ನವೆನ್ನುವುದು ಮುಖ್ಯವಾದುದು. ಪ್ರಯತ್ನ ಯಶಸ್ಸಿನ ಮೆಟ್ಟಲು ಇದ್ದಂತೆ. ನೀವೆಲ್ಲ ಪ್ರಯತ್ನವಾದಿಗಳಾಗಿ ಜೀವನದಲ್ಲಿ ಯಶಸ್ಸನ್ನು ಪಡೆಯಿರಿ ಎಂದು ಹಾರೈಸಿದರು. ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಎಲ್ಲ ಮಕ್ಕಳಿಗೂ ಪ್ರಮಾಣ ಪತ್ರವನ್ನು ನೀಡಲಾಯಿತು.
ಭಾರತಿ ವಡವಿಯವರು ಕಾರ್ಯಕ್ರಮ ಯಶಸ್ವಿಯಾಗಲು ಕಾರಣರಾದ ಮುಖ್ಯೋಪಾದ್ಯಾಯ ಪದ್ಮವತಿ ಶ್ರೀನಿವಾಸ ಜೋಶಿ ಹಾಗೂ ಸಹಶಿಕ್ಷಕರು ಸಿಬ್ಬಂದಿ ವರ್ಗದ ಸಹಕಾರವನ್ನು ಕೊಂಡಾಡಿದರು. ಕಾರ‌್ಯದರ್ಶಿ ಗುಂಡೇನಟ್ಟಿ ಮಧುಕರ, ಸದಸ್ಯರಾದ ಡಾ. ಜಯಂತ ಕಿತ್ತೂರ ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 