ಭಾರತದಲ್ಲಿ ಜನರ ಶಕ್ತಿಯೊಂದಿಗೆ ಕ್ಷಯರೋಗ ನಿರ್ಮೂಲನೆ : ಡಾ.ಸತೀಶ

ಭಾರತದಲ್ಲಿ ಜನರ ಶಕ್ತಿಯೊಂದಿಗೆ ಕ್ಷಯರೋಗ ನಿರ್ಮೂಲನೆ : ಡಾ.ಸತೀಶ Eradicating tuberculosis in India with people power: Dr. Satish

ಶಿಗ್ಗಾವಿ 28 : ಭಾರತದ ದೇಶದಲ್ಲಿ ಜನರ ಶಕ್ತಿಯೊಂದಿಗೆ ನಾವು ಕ್ಷಯರೋಗವನ್ನು ನಿರ್ಮೂಲನೆ ಮಾಡಬಹುದು ಎಂದು ತಾಲೂಕ ಆರೋಗ್ಯಾಧಿಕಾರಿ ಡಾ. ಸತೀಶ್‌ ಹೇಳಿದರು.   ಪಟ್ಟಣದ ಹೊರವಲಯದಲ್ಲಿ ರುವ ಫಿನಿಕ್ಸ್‌ ಸಮೂಹ ಶಿಕ್ಷಣ ಸಂಸ್ಥೆ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾವೇರಿ ಇವರ ಆಶ್ರಯದಲ್ಲಿ ನಡೆದ ವಿಶ್ವ ಕ್ಷಯರೋಗ ದಿನಾಚರಣೆ ಕಾರ್ಯಕ್ರಮ ಉಧ್ಘಾಟಿಸಿ ಮಾತನಾಡಿದ ಅವರು ಕ್ಷಯರೋಗ ಮುಕ್ತ ಸಮಾಜ ನಿರ್ಮಾಣ ಮಾಡುವ ಸಂಕಲ್ಪದೊಂದಿಗೆ ನಾವು ಸಾರ್ವಜನಿಕರು ತಮ್ಮ ಆರೋಗ್ಯದ ಬಗ್ಗೆ ಕಾಳಜಿವಹಿಸದೇ ಅನೇಕ ರೋಗಗಳಿಗೆ ತುತ್ತಾಗುತ್ತಿದ್ದಾರೆ ಅದರಲ್ಲಿ ಮುಖ್ಯವಾಗಿ ಕ್ಷಯರೋಗದಿಂದ, ಗಾಳಿಯ ಮೂಲಕ ರೋಗ ನಿರೋಧಕ ಶಕ್ತಿ ಕಡಿಮೆ ಹೊಂದಿರುವ ಅರ್ಥಿಗಳಿಗೆ ಸೋಂಕು ತಗುಲುವ ಸಾಧ್ಯತೆ ಹೆಚ್ಚು ಇರುತ್ತದೆ ಆದ್ದರಿಂದ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿದ್ದೇವೆ ಎಂದರು. 

ಫಿನಿಕ್ಸ್‌ ಸಂಸ್ಥೆ ಕಾರ್ಯದರ್ಶಿ ಡಾ. ರಾಣಿ ತಿರ್ಲಾಪುರ ಕಾರ್ಯಕ್ರಮ ಅಧ್ಯಕ್ಷತೆವಹಿಸಿ ಮಾತನಾಡಿ ಕ್ಷಯರೋಗ ಮುಕ್ತ ದೇಶವನ್ನು ಮಾಡಲು ಸರಕಾರಿ ಹಾಗೂ ಸರಕಾರೇತರ ಸಂಘ ಸಂಸ್ಥೆಗಳ ಪಾತ್ರ ಬಹಳ ಮುಖ್ಯವಾಗಿದೆ. ವಿಧ್ಯಾರ್ಥಿಗಳಿಗೆ ಅರಿವು ಮೂಡಿಸುವ ದೃಷ್ಟಿಯಿಂದ ಕ್ಷಯರೋಗ ಕಾರ್ಯಕ್ರಮ ಆಯೋಜನೆ ಮಾಡಿದ್ದೇವೆ ಎಂದರು.? ಓಷಧ ವಿತರಕ ಅಧಿಕಾರಿ ಆನಂದಗೌಡ ಹಿರೇಗೌಡ್ರ,ಹಿರಿಯ ಚಿಕಿತ್ಸಾ ಮೇಲ್ವಿಚಾರಕ ನಾಗನಗೌಡ ಪಾಟೀಲ, ಕ್ಷಯರೋಗ ಕುರಿತು ಮಾತನಾಡಿದರು.?  ಫಿನಿಕ್ಸ್‌ ಸಮೂಹ ಸಂಸ್ಥೆ ಅಧ್ಯಕ್ಷ ಡಾ. ಮೃತ್ಯುಂಜಯ ತಿರ್ಲಾಪುರ, ಉಪಾಧ್ಯಕ್ಷ ನರಹರಿ ಕಟ್ಟಿ, ಪ್ಯಾರಾ ಮೆಡಿಕಲ್ ಕಾಲೇಜಿನ ಪ್ರಾಚಾರ್ಯ ಭೀಮನಗೌಡ, ಡಾ. ಸ್ಪಂದನಾ ಬ್ರಹ್ಮಾವರ, ಡಾ.ಅಶೋಕಕುಮಾರ್, ಸರೋಜಾ ಹರಿಜನ ಸೇರಿದಂತೆ ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.