ಸಮಬಾಳು ಮತ್ತು ಸಮಪಾಲು ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ
Equitable and equitable solutions to social problems
ಗದಗ 07 : ವ್ಯಕ್ತಿಗಳ ಸಮೂಹದಿಂದ ನಿರ್ಮಿತವಾಗಿರುವ ಸಮಾಜದ ಸುವ್ಯವಸ್ಥಿತ ಕಾರ್ಯನಿರ್ವಹಣೆಗೆ ಸಮಾನತೆ, ನ್ಯಾಯ, ಸಹಕಾರ ಅಗತ್ಯವಾಗಿದ್ದು, ಆದರೆ ಇಂದು ಬಡತನ, ನಿರುದ್ಯೋಗ, ಲಿಂಗ ಅಸಮಾನತೆ, ಜಾತಿ ತಾರತಮ್ಯ, ಅನಕ್ಷರತೆ, ಪರಿಸರ ಮಾಲಿನ್ಯ, ಮಾದಕದ್ರವ್ಯ ವ್ಯಸನ, ಭ್ರಷ್ಟಾಚಾರ, ಜನಸಂಖ್ಯಾ ವೃದ್ಧಿ, ಕೋಮುವಾದ ಮುಂತಾದ ಸಾಮಾಜಿಕ ಸಮಸ್ಯೆಗಳು ಸಮಾಜದ ಶಾಂತಿ ಮತ್ತು ಪ್ರಗತಿಗೆ ಅಡ್ಡಿಯಾಗುತ್ತಿವೆ ಎಂದು ವಾಣಿಜ್ಯಶಾಸ್ತ್ರ ಪ್ರಾಧ್ಯಾಪಕ ನೇಮಾನಿ ಸತೀಶ ಹೇಳಿದರು. ಅವರು ಹುಲಕೋಟಿಯ ಕೆ.ಎಚ್. ಪಾಟೀಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್. ಘಟಕವು ಹೊಸಹಳ್ಳಿ ಗ್ರಾಮದಲ್ಲಿ ಹಮ್ಮಿಕೊಂಡಿರುವ 2025-26ನೇ ಸಾಲಿನ ವಾರ್ಷಿಕ ವಿಶೇಷ ಶಿಬಿರದಲ್ಲಿ ‘ಪ್ರಚಲಿತ ಸಾಮಾಜಿಕ ಸಮಸ್ಯೆಗಳು ಮತ್ತು ಪರಿಹಾರ’ ಕುರಿತು ಉಪನ್ಯಾಸ ಮಾಡುತ್ತ, ಪ್ರಚಲಿತ ಸಾಮಾಜಿಕ ಸಮಸ್ಯೆಗಳು ಪರಸ್ಪರ ಸಂಬಂಧಿತವಾಗಿದ್ದು, ಸರ್ಕಾರದ ಜೊತೆಗೆ ನಾಗರಿಕರ ಜಾಗೃತಿ, ನೈತಿಕತೆ, ಸಹಭಾಗಿತ್ವದಿಂದ ಹಾಗೂ ‘ಸರ್ವರಿಗೂ ಸಮಬಾಳು, ಸಮಪಾಲು’ ಎಂಬ ಮನೋಧೋರಣೆಯಿಂದ ಮಾತ್ರ ಆರೋಗ್ಯಕರ ಮತ್ತು ಸಮಾನತೆಯ ಸಮಾಜವನ್ನು ನಿರ್ಮಿಸಲು ಸಾಧ್ಯವೆಂದು ಹೇಳಿದರು.
ಮುಖ್ಯ ಅತಿಥಿ ಇಂಗ್ಲೀಷ ಪ್ರಾಧ್ಯಾಪಕಿ ಟಿ. ಸಾವಿತ್ರಿ ಸಾಮಾಜಿಕ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸರ್ಕಾರಿ ಕ್ರಮಗಳ ಜೊತೆಗೆ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯುತ ಪಾಲ್ಗೊಳ್ಳುವಿಕೆ, ಸಮಾನತೆ, ನ್ಯಾಯದತ್ತ ಕೆಲಸ ಮಾಡುವುದು ತುಂಬಾ ಮುಖ್ಯವಾಗಿದ್ದು, ಈ ರೀತಿಯ ಶ್ರಮದಿಂದ ಮಾತ್ರ ಸಮಾಜವು ಸುಸ್ಥಿರ, ನ್ಯಾಯಯುತ ಮತ್ತು ಪ್ರಗತಿಪರವಾಗುವುದೆಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಶಿಬಿರಾಧಿಕಾರಿ ಪ್ರೊ. ಅಪ್ಪಣ್ಣ ಹಂಜೆ ಸಾಮಾಜಿಕ ಸಮಸ್ಯೆಗಳ ಶಾಶ್ವತ ಪರಿಹಾರಕ್ಕೆ ಸರ್ಕಾರದ ನೀತಿಗಳ ಜೊತೆಗೆ ಸ್ವಯಂ ಸೇವಕರ ಶ್ರಮ, ಜಾಗೃತಿ ಮತ್ತು ನಿಷ್ಠೆ ಅತ್ಯಂತ ಮುಖ್ಯವಾಗಿದ್ದು, ಸ್ವಯಂ ಸೇವಕರು ಸಮಾಜದ ಬೆಳಕಾಗಿದ್ದು, ಇವರ ಸೇವೆ ಇಲ್ಲದೆ ಸಾಮಾಜಿಕ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಾಧ್ಯವಿಲ್ಲವೆಂದು ಹೇಳಿದರು. ಸ್ವಯಂ ಸೇವಕರು ಕಾರ್ಯಕ್ರಮ ನಡೆಸಿಕೊಟ್ಟರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 