ಪರಿಸರ ಸಂರಕ್ಷಣೆ ಕೇವಲ ಸರ್ಕಾರದ ಜವಾಬ್ದಾರಿ ಅಲ್ಲ: ಹನುಮಂತಗೌಡ
ಹಾವೇರಿ೧೨: ಪರಿಸರ ಸಂರಕ್ಷಣೆ ಕೇವಲ ಸಕರ್ಾರದ ಜವಾಬ್ದಾರಿ ಅಲ್ಲ, ಸಾಮೂಹಿಕ ಜವಾಬ್ದಾರಿ ಎಂಬುದನ್ನು ನಾವು ಅರಿಯಬೇಕು ಎಂದು ಸಾಹಿತಿ ಹನುಮಂತಗೌಡ ಗೊಲ್ಲರ ಹೇಳಿದರು.
ಸೋಮವಾರ ನಗರದ ಮಾಲಿನ್ಯ ನಿಯಂತ್ರಣ ಮಂಡಳಿ ಕಛೇರಿಯ ಸಭಾಭವನದಲ್ಲಿ ಪರಿಸರ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಶಾಲಾ ಮಕ್ಕಳಿಗೆ ಆಯೋಜಿಸಲಾದ ಚಿತ್ರಕಲೆ ಹಾಗೂ ಪ್ರಬಂಧ ಸ್ಪಧರ್ೆ ವಿಜೇತರಿಗೆ ಪ್ರಶಸ್ತಿ ಪ್ರದಾನಮಾಡಿ ಅವರು ಮಾತನಾಡಿದರು.
ಪ್ರಕೃತಿಯ ಕೊಡುಗೆಯ ಮೇಲೆ ನಮ್ಮ ಬದುಕಿನ ಭವಿಷ್ಯ ನಿಂತಿದೆ. ದಶಕಗಳಿಂದಲೂ ಪರಿಸರ ಸಂರಕ್ಷಣೆಯ ಕೂಗು ಕೇಳಿ ಬರುತ್ತಲೇ ಇದ್ದರೂ ಆ ಕುರಿತು ನಾವು ತೋರಿಸಿದ ಉದಾಸೀನತೆಯ ಫಲವಿದು. ಪರಿಸರ ಸಂರಕ್ಷಣೆ ಎಂಬುದು ಸರಕಾರದ ಜವಾಬ್ದಾರಿ ಎಂಬುದೇ ಬಹುತೇಕರ ಗ್ರಹಿಕೆ ತಪ್ಪು ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪರಿಸರ ಅಧಿಕಾರಿ ಎಂ. ಎಸ್. ಮಹೇಶ್ವರಪ್ಪ ಅವರು ಮಾತನಾಡಿ, ಪರಿಸರ ಸ್ನೇಹಿ ನಡುವಳಿಕೆಯನ್ನು ಪ್ರದಶರ್ಿಸದಿದ್ದರೆ ಮನುಕುಲಕ್ಕೆ ಉಳಿಗಾಲವಿಲ್ಲ. ಪರಿಸರ ಉಳಿದರೆ ಮನುಕುಲ ಉಳಿದೀತು ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಹೊಯ್ಸಳ ಕೈಗಾರಿಕಾ ಸಂಸ್ಥೆಯ ಪ್ರಾಚಾರ್ಯ ಕೃಷ್ಣಾ ಜವಳಿ ಮಾತನಾಡಿ ಆಧುನೀಕರಣ, ಕೈಗಾರಿಕೀಕರಣ ಹಾಗೂ ನಗರೀಕರಣದ ದುಷ್ಪರಿಣಾಮ ಪ್ರಕೃತಿ ಪರಿಸರದ ಮೇಲಾಗುತ್ತಿದ್ದು ಪ್ರಾಣಿ ಪಕ್ಷಿಗಳ ಸ್ವಚ್ಛಂದ ಜೀವನಕ್ಕೆ ಅಡ್ಡಿಯಾಗಿದೆ. ಸ್ವಚ್ಛತೆಯ ಜೊತೆಗೆ ಪರಿಸರ ಪ್ರಜ್ಞೆಯೂ ಅಳವಡಿಸಿಕೊಳ್ಳುವುದರ ಮೂಲಕ ಪರಿಸರ ಕಾಳಜಿಯನ್ನು ಪ್ರತಿಯೊಬ್ಬರು ಹೊಂದಬೇಕು ಎಂದು ಹೇಳಿದರು.
ಶಿಕ್ಷಣ ಸಂಯೋಜಕ ಸಿದ್ದರಾಜು, ಸಹಾಯಕ ಪರಿಸರ ಅಧಿಕಾರಿ ಪಿ. ರಾಜೇಶ್ ಮಾತನಾಡಿದರು. ಕಛೇರಿಯ ಸಹಾಯಕ ಆಡಳಿತಾಧಿಕಾರಿ ನಾಗ್ಯಾನಾಯ್ಕ ಉಪಸ್ಥಿತರಿದ್ದರು. ಕಛೇರಿ ಅಧೀಕ್ಷಕ ನಂದೀಶ ಪಟಗಾರ ಸ್ವಾಗತಿಸಿದರು. ಸವಿತಾ ಬೆಳ್ಳಿಗಟ್ಟಿ ಕಾರ್ಯಕ್ರಮ ನಿರೂಪಿಸಿದರು ಶಿವಾನಂದ ದೊಡ್ಡಮನಿ ವಂದಿಸಿದರು.
ಚಿತ್ರಕಲೆ: ಪ್ರಾಥಮಿಕ ವಿಭಾಗದಲ್ಲಿ ಸಮನ್ವಿತಾ ಪೂಜಾರ, ಪ್ರೀತಿ ತಿಪ್ಪನವರ ಹಾಗೂ ನವೀನ ಶಿವಪೂಜಿ ಕ್ರಮವಾಗಿ ಪ್ರಥಮ, ದ್ವಿತಿಯ ಹಾಗೂ ತೃತೀಯ ಸ್ಥಾನ ಪಡೆದರು. ಪ್ರೌಢಶಾಲೆ ವಿಭಾಗದಲ್ಲಿ ಸಂಜನಾ ಬಣಕಾರ, ಸುದೀಪ ಗೌಳಿ ಹಾಗೂ ಐಶ್ವರ್ಯ ತಳವಾರ ಕ್ರಮವಾಗಿ ಪ್ರಥಮ, ದ್ವಿತಿಯ ಹಾಗೂ ತೃತೀಯ ಸ್ಥಾನ ಪಡೆದರು.
ಪ್ರಬಂಧ: ಪ್ರಾಥಮಿಕ ವಿಭಾಗದಲ್ಲಿ ನಿವೇದಿತಾ ಕಿಲ್ಲೆದಾರ, ದೀಕ್ಷೀತಾ ಬೇವಿನಹಳ್ಳಿ ಹಾಗೂ ಸ್ನೇಹಾ ಕರಿಂಡಿ ಕ್ರಮವಾಗಿ ಪ್ರಥಮ, ದ್ವಿತಿಯ ಹಾಗೂ ತೃತೀಯ ಸ್ಥಾನ ಪಡೆದರು. ಪ್ರೌಢಶಾಲೆ ವಿಭಾಗದಲ್ಲಿ ಮುಜಾಫರ ಮುಜಾವರ, ವೀಣಾ ಕರಿಯಣ್ಣವರ ಹಾಗೂ ಪೂಜಾ ಕಳಗೊಂಡ ಕ್ರಮವಾಗಿ ಪ್ರಥಮ, ದ್ವಿತಿಯ ಹಾಗೂ ತೃತೀಯ ಸ್ಥಾನ ಪಡೆದರು.
ಶ್ರದ್ಧಾಂಜಲಿ: ಪ್ರಾರಂಭದಲ್ಲಿ ನಿಧನರಾದ ಜ್ಞಾನಪೀಠ ಪ್ರಶಸ್ತಿ ವಿಜೇತ, ನಿದರ್ೇಶಕ, ಸಾಹಿತಿ ಡಾ. ಗಿರೀಶ ಕಾನರ್ಾಡ ಅವರ ನಿಧನಕ್ಕೆ ಮೌನಪ್ರಾರ್ಥನೆ ಸಲ್ಲಿಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 