ಮಹಿಳೆಯರ ಸಬಲೀಕರಣಕ್ಕೆ ಉದ್ಯಮಶೀಲತೆ ಉತ್ತಮ ಅವಕಾಶ: ಪ್ರೊ. ಸಿ. ಎಂ. ತ್ಯಾಗರಾಜ

Entrepreneurship is a great opportunity for women empowerment: Prof. C. M. Tyagaraja

ಮಹಿಳೆಯರ ಸಬಲೀಕರಣಕ್ಕೆ ಉದ್ಯಮಶೀಲತೆ ಉತ್ತಮ ಅವಕಾಶ: ಪ್ರೊ. ಸಿ. ಎಂ. ತ್ಯಾಗರಾಜ 

 ಬೆಳಗಾವಿ 21: ಹಲವಾರು ಗ್ರಾಮೀಣ ಹಾಗೂ ನಗರದ ಮಹಿಳೆಯರಿಗೆ ಗೃಹ ಕೈಗಾರಿಕೆಗಳ ಮೂಲಕ ಸ್ವಾವಲಂಬನೆ ಉದ್ಯೋಗವನ್ನು ಬೆಳೆಸಿಕೊಳ್ಳಲು ಆರ್ಥಿಕ ಸಬಲರನ್ನಾಗಿ ಮಾಡಲು ಉಚಿತವಾಗಿ ಮಹಿಳೆಯರಿಗೆ ತರಬೇತಿ ಮತ್ತು ಹಲವಾರು ಸೌಲಭ್ಯಗಳ ಅವಶ್ಯಕತೆ ಕುರಿತು ತಿಳಿಸಿದರು. ಉದ್ಯೋಗವನ್ನು ಹುಡುಕುತ್ತಾ ಹೋಗುವುದಕ್ಕಿಂತ ನಾವು ಉದ್ಯೋಗವನ್ನು ನೀಡಲು ಗಮನ ಹರಿಸಬೇಕು, ನಾವೇ ಬಾಸ್ ಆಗಬೇಕು ಎಂದು ತಿಳಿಸಿದರು. ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಮಹಿಳಾ ಸಬಲೀಕರಣ ಘಟಕ, ಆಯ್‌. ಕ್ಯೂ. ಎ. ಸಿ. ಮತ್ತು ಪಂ. ದೀನದಯಾಳ ಉಪಾಧ್ಯಾಯ ಅಧ್ಯಯನ ಪೀಠ ಹಾಗೂ ಲಘು ಉದ್ಯೋಗ ಭಾರತಿ ಕರ್ನಾಟಕ ಇವರ ಸಹಯೋಗದಲ್ಲಿ ಕುವೆಂಪು ಸಭಾ ಭವನದಲ್ಲಿ ವಿದ್ಯಾರ್ಥಿನಿಯರಿಗೆ ಉದ್ಯಮಶೀಲತೆ ಜಾಗೃತಿ ಕಾರ್ಯಕ್ರಮ ಮತ್ತು ಮಹಿಳಾ ಸಬಲೀಕರಣಕ್ಕಾಗಿ ಹೊಸ ಮಾರ್ಗ ಎಂಬ ವಿಷಯದ ಕುರಿತು ದಿನಾಂಕ 20 ಗುರುವಾರದಂದು ವಿದ್ಯಾರ್ಥಿನಿಯರಿಗಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ ಲಘು ಉದ್ಯೋಗ ಭಾರತಿ ಕರ್ನಾಟಕ ಇದರ ಕಾರ್ಯದರ್ಶಿ ಪ್ರಿಯಾ ಪುರಾಣಿಕ  ಅವರು ಮಾತನಾಡುತ್ತಾ ಮುಖ್ಯ ಅತಿಥಿಗಳಾದ  ಶ್ರೀಮತಿ ಲತಾ ಹೂಲಿ ಇವರು ಯಶಸ್ವಿ ಉದ್ಯೊಗಸ್ಥರಾಗಬೇಕೆಂದರೆ ಮೊದಲು ಗುರಿಯನ್ನು ಹೊಂದಿರಬೇಕು, ಪ್ರತಿ ದಿನ ಪ್ರತಿಕ್ಷಣ ಪ್ರತಿ ಸಮಯ ನಮ್ಮ ಗುರಿಗಳ ಬಗ್ಗೆ ವಿಚಾರ ಮಾಡಬೇಕು ಯಾವುದೇ ಒಂದು ಕಾರ್ಯವನ್ನು ಆಸಕ್ತಿದಾಯಕವಾಗಿ ಮಾಡುವುದರ ಮೂಲಕ ನಮ್ಮ ಗುರಿಯನ್ನು ತಲುಪುವಲ್ಲಿ ಯಶಸ್ಸು ಕಾಣಲು ಸಾಧ್ಯ. ಮತ್ತು ಗುರಿಯನ್ನು ತಲುಪುವುದರಲ್ಲಿ ಯಾವುದೇ ಸಂದೇಹವಿಲ್ಲ ಎನ್ನುತ್ತಾ ತಮ್ಮ ಬದುಕಿನಲ್ಲಿ ನಡೆದ ಹಲವಾರು ಸಂಗತಿಗಳನ್ನು ವಿದ್ಯಾರ್ಥಿನಿಯರಿಗೆ ಮನಮುಟ್ಟುವಂತೆ ತಿಳಿಸಿದರು. ಇನ್ನೊರ್ವ ಅತಿಥಿಗಳಾದ ಶ್ರೀಮತಿ ವೀಣಾ ಜಿಗಜಿನ್ನಿ ಅವರು ಕ್ರೀಡಾ ಕ್ಷೇತ್ರ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ತುಂಬಾ ಆಸೆಯನ್ನು ಹೊಂದಿ ಪ್ರತಿಯೊಬ್ಬರು ಮುಖ್ಯವಾಗಿ ಗುರಿಗಳನ್ನು ಹೊಂದಿರಬೇಕು ಅಪಮಾನ ಅವಮಾನ ಎಲ್ಲವೂ ಇರುತ್ತದೆ ಆದರೆ ನಾವು ಸಾಧಿಸುವ ಛಲವನ್ನು ಹೊಂದಿರಬೇಕು. ಮಹಿಳೆಯರು ಧೈರ್ಯಶಾಲಿಯಾಗಿ ಮುನ್ನುಗ್ಗಬೇಕು. ಸ್ವಂತ ದುಡಿಮೆ, ಬಲ, ನಾಯಕತ್ವ ಗುಣ ಬೆಳೆಸಿಕೊಳ್ಳುವುದು ಅತೀ ಅವಶ್ಯಕವಾಗಿದೆ ಎಂದು ಹೇಳಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಗೌರವಾನ್ವಿತ ಕುಲಪತಿಗಳಾದ ಪ್ರೊ. ಸಿ. ಎಂ. ತ್ಯಾಗರಾಜ ಅವರು ಮಾತನಾಡಿ ಯಾವಾಗಲೂ ವಿದ್ಯಾರ್ಥಿಗಳ ಬದುಕು ಚೆನ್ನಾಗಿರಬೇಕು ಅವಾಗ ನಮಗೆ ಖುಷಿಯಾಗುತ್ತದೆ ಇ-ವಿದ್ಯಾ ವೆಬ್ ಸೈಟನಲ್ಲಿ ಮಹಿಳೆಯರಿಗೆ ಜೀವನ ಕಟ್ಟಿಕೊಳ್ಳಲು ಬಲ ನೀಡಬೇಕು ಹೆಣ್ಣನ್ನು ಅತಿ ಎತ್ತರದ ಸ್ಥಾನದಲ್ಲಿ ಪುರಾತನ ಕಾಲದಿಂದಲೂ ನಾವು ನೋಡುತ್ತಿದ್ದೇವೆ ಹಾಗೂ ಪೂಜಿಸುತ್ತಾ ಬಂದಿದ್ದೇವೆ. ಜೀವನದಲ್ಲಿ ಹೆಣ್ಣು ಮಕ್ಕಳು ಹೆದರಬಾರದು, ಪ್ರತಿಯೊಬ್ಬರ ಜೀವನ ಸುಂದರವಾಗಿರಬೇಕು ಯಾವುದೇ ಧರ್ಮ ಜಾತಿ ಮೇಲು ಕೀಳು ಯಾವುದು ಮುಖ್ಯವಲ್ಲ. ಭವಿಷ್ಯವನ್ನು ಕಟ್ಟಿಕೊಳ್ಳುವುದು ವಿಶ್ವವಿದ್ಯಾಲಯದ ಹಾಗೂ ನಮ್ಮೆಲ್ಲರ ಆಶಯವಾಗಿದೆ ಎಂದು ಹೇಳಿದರು. ಲಘು ಉದ್ಯೋಗ ಭಾರತಿ ಕರ್ನಾಟಕ ಇವರ ಜೊತೆಗೆ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಮಹಿಳಾ ಸಬಲೀಕರಣ ಘಟಕ, ಆಯ್‌. ಕ್ಯೂ. ಎ. ಸಿ. ಮತ್ತು ಪಂ. ದೀನದಯಾಳ ಉಪಾಧ್ಯಾಯ ಅಧ್ಯಯನ ಪೀಠ ಒಡಂಬಡಿಕೆಯನ್ನು ಮಾಡಿಕೊಳ್ಳಲಾಯಿತು .  ಪ್ರೊ. ಮನಿಷಾ ನೇಸರಕರ, ಡಾ. ಸುಷ್ಮಾ, ಡಾ. ಅಶ್ವೀನಿ ಜಾಮುನಿ, ಡಾ. ನಂದಿನಿ ದೇವರಮನಿ, ಡಾ. ಶಿವಲಿಂಗಯ್ಯಾ ಗೊಠೆ, ಯಲ್ಲಪ್ಪಾ ಮೂಡಲಗಿ, ಶಿವಲೀಲಾ, ಪರಜಾನಾ, ವಾಣಿ, ದೀಪಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕು. ಗ್ಯಾನಪ್ಪ ಮಾದರ್ ಸ್ವಾಗತ ಗೀತೆ ಹೇಳಿದರು. ಆಯ್‌. ಕ್ಯೂ. ಎ. ಸಿ. ನಿರ್ದೇಶಕರಾದ ಪ್ರೊ. ಮಂಜಣ್ಣ. ಜೆ ಇವರು ಸ್ವಾಗತಿಸಿದರು. ಮಹಿಳಾ ಸಬಲೀಕರಣ ಕೋಶದ ನಿರ್ದೇಶಕಿ ಪ್ರೊ. ಚಂದ್ರಿಕಾ ಕೆ. ಬಿ. ಪ್ರಾಸ್ತಾವಿಕ ಮಾತನಾಡಿದರು. ಪಂಡಿತ ದೀನದಯಾಳ ಉಪಾಧ್ಯಾಯ ಅಧ್ಯಯನ ಪೀಠದ ನಿರ್ದೇಶಕರಾದ ಪ್ರೊ. ಬಿ. ಎಸ್‌. ನಾವಿ ವಂದಿಸಿದರು. ಡಾ. ಯಾಸ್ಮೀನ್‌ಬೇಗಮ್ ನದಾಫ್ ಕಾರ್ಯಕ್ರಮ ನಡೆಸಿಕೊಟ್ಟರು.