ಸರ್ಕಾರಿ ಜಾಗೆ ಒತ್ತುವರಿ : ಒತ್ತುವರಿ ತೆರವಿಗೆ ಪ.ಪಂ. ಸದಸ್ಯರ ಆಗ್ರಹ
Encroachment on government land: P.P. members demand removal of encroachment
ಚಡಚಣ 04: ಚಡಚಣ ಪಟ್ಟಣದ ಸರ್ವೇ ನಂ.132 ಕ್ಷೇತ್ರ-31 ಗುಂಟೆ ಜಾಗೆಯಲ್ಲಿ ಕೆಲ ಖಾಸಗಿ ವ್ಯಕ್ತಿಗಳು ಅತಿಕ್ರಮಣ ಮಾಡಿರುವುದು ಕಂಡು ಬಂದಿದ್ದು, ಅತಿಕ್ರಮಣ ತೆರವುಗೊಳಿಸಿ, ಈ ಜಾಗೆಯನ್ನು ಪ.ಪಂ.ಗೆ ನೀಡಬೇಕು ಎಂದು ಪ.ಪಂ. ಸದಸ್ಯರು ಗುರುವಾರ ತಹಶೀಲದಾರರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪ.ಪಂ. ಅಧ್ಯಕ್ಷ ಮಲ್ಲಿಕಾರ್ಜುನ ಧೊತ್ರೆ ಮಾತನಾಡಿ, ಪಟ್ಟಣದ ಇಂಡಿ ಮುಖ್ಯ ರಾಜ್ಯ ಹೆದ್ದಾರಿಗೆ ಹೊಂದಿಕೊಂಡು ಇರುವ ಸ.ನಂ. 132 ರಲ್ಲಿ ಇರುವ ಕ್ಷೇತ್ರ-31 ಗುಂಟೆ ಜಾಗೆ ಸುಮಾರು ಕೋಟ್ಯಾಂತರ ರೂ. ಸಧ್ಯ ಮಾರುಕಟ್ಟೆ ಬೆಲೆ ಹೊಂದಿದ್ದು, ಈ ಜಾಗೆಯಲ್ಲಿ ಕೆಲ ಖಾಸಗಿ ವ್ಯಕ್ತಿಗಳು ರಸ್ತೆ ನಿರ್ಮಿಸಿ ಅತಿಕ್ರಮಣ ಮಾಡಿಕೊಂಡಿದ್ದಾರೆ. ಈ ಜಾಗೆ ಕಂದಾಯ ಇಲಾಖೆಗೆ ಸಂಬಂಧಪಟ್ಟಿದ್ದು, ಅಲ್ಲಿ ನಾಮಫಲಕ ಕೂಡ ಅಳವಡಿಸಲಾಗಿದೆ. ಆದರೂ ಕೂಡ ಕೆಲ ಖಾಸಗಿ ವ್ಯಕ್ತಿಗಳು ಜಾಗೆಯನ್ನು ಅತಿಕ್ರಮಣ ಮಾಡಿ ರಸ್ತೆ ನಿರ್ಮಿಸಿದ್ದಾರೆ ಎಂದು ಹೇಳಿದ ಅವರು, ತಹಶೀಲದಾರರು ಸದರಿ ಜಾಗೆಯನ್ನು ಪರೀಶೀಲನೆ ಮಾಡಿ, ಇದರ ಹದ್ದು ಬಸ್ತು ಗುರುತು ಮಾಡಿ ಜಾಗೆಯನ್ನು ಪ.ಪಂ.ಗೆ ಹಸ್ತಾಂತರಿಸಿದರೆ ಅಲ್ಲಿ ನಾವು ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿದರೆ ಅದರಿಂದ ಪ.ಪಂ.ಗೆ ಹಾಗೂ ಸರಕಾರಕ್ಕೆ ವರ್ಷಕ್ಕೆ ಲಕ್ಷಾಂತರ ರೂ. ಲಾಭ ಬರುತ್ತದೆ ಎಂದು ಹೇಳಿದರು.
ತಕ್ಷಣವೇ ಕಾರ್ಯೋನ್ಮುಖರಾದ ಚಡಚಣ ತಹಶೀಲದಾರ ಸಂಜಯ ಇಂಗಳೆ ಅವರು ಪ.ಪಂ. ಮುಖ್ಯಾಧಿಕಾರಿ ಬಿ.ಕೆ. ತಾವಸೆ ಅವರಿಗೆ ದೂರವಾಣಿ ಮುಖಾಂತರ ಮಾತನಾಡಿ, ಇಬ್ಬರೂ ಸ್ಥಳಕ್ಕೆ ತೆರಳಿ, ಸ್ಥಳ ಪರೀಶೀಲನೆ ಮಾಡಲಾಗಿ, ಅಪ್ಪಾಸಾಹೇಬ ಸಿಂಧೆ ಇವರ ಜಮೀನಿಂದ ಇಂಡಿಯನ್ ಆಯಿಲ್ ಪೆಟ್ರೋಲ ಪಂಪ್ ವರೆಗಿನ 31 ಗುಂಟೆ ಜಾಗೆ ಇದೆ ಎಂದು ತಹಶೀಲದಾರ ಸಂಜಯ ಇಂಗಳೆ ಹೇಳಿದ ಅವರು, ಇಲ್ಲಿ ಖಾಸಗಿ ವ್ಯಕ್ತಿಗಳಿಂದ ಅಲ್ಲಿ ರಸ್ತೆ ನಿರ್ಮಿಸಿರುವದು ಕಂಡು ಬಂದಿದ್ದು, ತಕ್ಷಣ ಪ.ಪಂ. ಜೆ.ಸಿ.ಬಿ. ಮುಖಾಂತರ ಸರಕಾರಿ ಜಾಗೆಯ 31 ಗುಂಟೆ ಜಾಗೆಯ ಸುತ್ತಲೂ ತಗ್ಗು ತೋಡಿಸುವ ಕಾರ್ಯ ಆರಂಭಿಸಿದರು.
ಈ ಸಂದರ್ಭದಲ್ಲಿ ತಹಶೀಲದಾರ ಸಂಜಯ ಇಂಗಳೆ ಮಾತನಾಡಿ, ಈ ಜಾಗೆಯನ್ನು ನಾನು ಪುನಃ ಸರ್ವೆ ಮಾಡಿಸಿ, ಜಾಗೆಯ ಸುತ್ತಲೂ ಸಿಮೆಂಟ್ ಕಂಬಗಳನ್ನು ನಡೆಸಿ ಅದಕ್ಕೆ ತಂತಿ ಬೇಲಿ ಹಾಕಿಸಿ, ಈ ಜಾಗೆಯಲ್ಲಿ ಯಾವುದೇ ರಸ್ತೆ ನಿರ್ಮಿಸುವುದು ಹಾಗೂ ಅತೀಕ್ರಮಣ ಮಾಡದಂತೆ ನೋಡಿಕೊಳ್ಳುತ್ತೇನೆ ಎಂದರು. ಒಂದು ವೇಳೆ ಇದಕ್ಕೆ ಯಾವುದೇ ತರಹದ ಒತ್ತಡ ಬಂದರೂ ಕೂಡ ಅದಕ್ಕೆ ನಾನು ಯಾವುದೇ ರೀತಿಯ ಆಸ್ಪದ ನೀಡದೇ ಈ ಜಾಗೆಯನ್ನು ನಾನು ಕಾಪಾಡಿಕೊಳ್ಳುತ್ತೇನೆ ಎಂದರು.
ಈ ಸಂದರ್ಭದಲ್ಲಿ ಪ.ಪಂ. ಸದಸ್ಯರಾದ ಪ್ರಕಾಶಗೌಡ ಪಾಟೀಲ, ರಾಜು ಕೋಳಿ, ಬಾಲಾಜಿ ಗಾಡಿವಡ್ಡರ, ದರ್ಮಣ್ಣ ಬನಸೋಡೆ, ವಾಸೀಮ ಮುಲ್ಲಾ, ಕೆ.ಆರ್.ಎಸ್. ಪಕ್ಷದ ಕಾರ್ಯಕರ್ತ ಅಣ್ಣಪ್ಪ ಪೂಜಾರಿ ಸೇರಿದಂತೆ ಮತ್ತಿತರರು ಇದ್ದರು.
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ 