ಸರ್ಕಾರದಿಂದ ಮಂಜೂರಾದ ಕೃಷಿ ಭೂಮಿ ಕಬಳಿಕೆ : ಚರಕುಂಟೆ ಗ್ರಾಮದ ರೈತರಿಂದ ಎಸ್‌ಪಿ ಗೆ ದೂರು
Encroachment of agricultural land sanctioned by the government: Farmers of Charakunte village compl
ಸರ್ಕಾರದಿಂದ ಮಂಜೂರಾದ ಕೃಷಿ ಭೂಮಿ ಕಬಳಿಕೆ : ಚರಕುಂಟೆ ಗ್ರಾಮದ ರೈತರಿಂದ ಎಸ್‌ಪಿ ಗೆ ದೂರು
ಬಳ್ಳಾರಿ 13: ಸತ್ತವರ ಹೆಸರಿನಲ್ಲಿ ನ್ಯಾಯಾಲಯದಲ್ಲಿ ದಾವೆಯನ್ನು ಹೂಡಿ ವಿಚಾರಣೆಯಲ್ಲಿಎಕ್ಸ್ ಪಾರ್ಟಿ ಮಾಡಿ ಸರ್ಕಾರದಿಂದ ಮಂಜೂರಾದ ಭೂಮಿಯನ್ನು ಹೆಂಡತಿಯ ಮಕ್ಕಳ ಇತರೆ ಯಾವುದೇ ಕುಟುಂಬ ಸದಸ್ಯರ ಸಹಿ ಇಲ್ಲದೆ ಅಕ್ರಮವಾಗಿ ಸರ್ಕಾರದಿಂದ ಮಂಜೂರಾದ ಜಮೀನನ್ನು ಎಂ ಗೋವರ್ಧನ್ ಎಂಬ ಬಳ್ಳಾರಿಯ ಪ್ರಭಾವಿ ವ್ಯಕ್ತಿಯೊಬ್ಬರು ನಮ್ಮಜಮೀನನ್ನು ಕಬಳಿಸಿದ್ದಾರೆ ಎಂದು ಚರಕುಂಟೆಗ್ರಾಮದರೈತರ ಆರೋಪಿಸಿ ಜಿಲ್ಲಾ ಎಸ್‌ಪಿ ಅವರಿಗೆದೂರನ್ನು ಸಲ್ಲಿಸಿದ್ದಾರೆ.
ದೂರನ್ನು ಸಲ್ಲಿಸಿ ಮಾತನಾಡಿದ ಸಂತ್ರಸ್ತ ರೈತರು, ಕಳೆದ 35 ವರ್ಷಗಳ ಹಿಂದೆ ನಮ್ಮ ಕುಟುಂಬಸ್ಥರ ಹೆಸರಿಗೆ ಸರ್ಕಾರದಿಂದ 1.26 ಎಕರೆಜಮೀನು ಮಂಜೂರಾಗಿದ್ದು ಈ ಜಮೀನಿನಲ್ಲಿ ಅಂದಿನಿಂದ ಇಂದಿನವರೆಗೆ ಉಳುಮೆ ಮಾಡಿಕೊಂಡುಜೀವನ ಸಾಗಿಸುತ್ತಿದ್ದೇವೆ, ಆದರೆ ಎಂ ಗೋವರ್ಧನ್ ಎಂಬ ಬಳ್ಳಾರಿ ನಿವಾಸಿಯೊಬ್ಬರು ನಾನು ಈ ಜಮೀನನ್ನು ಖರೀದಿಸಿದ್ದೇನೆ ಎಂದು ನ್ಯಾಯಾಲಯದಲ್ಲಿ ನಮ್ಮಕುಟುಂಬದ ಸತ್ತವರ ಮತ್ತುಇತರರ ಮೇಲೆ ಕೇಸ್ ದಾಖಲಿಸಿ ಅವರಿಗೆ ನೋಟಿಸ್ ನೀಡಿರುತ್ತಾರೆ. ಸತ್ತ ವ್ಯಕ್ತಿಗಳು ಹೇಗೆ ನೋಟಿಸ್ ಸ್ವೀಕರಿಸಲು ಸಾಧ್ಯ?ಇದರ ಲಾಭ ಪಡೆದುಕೊಂಡಅವರು ನ್ಯಾಯಾಲಯದ ವಿಚಾರಣೆಗೆಗೈರು ಹಾಜರಾಗಿದ್ದಾರೆಂದುಎಕ್ಸ್ ಪಾರ್ಟಿ ಮಾಡಿಜಮೀನನ್ನುತನ್ನ ಹೆಸರಿಗೆಕೋರ್ಟ್‌ಕಮಿಷನರ್ ಮೂಲಕ ನೋಂದಣಿ ಮಾಡಿಸಿಕೊಂಡಿರುತ್ತಾರೆ ಎಂದುರೈತರು ಆರೋಪಿಸಿದರು.
ಇದುಯಾವುದು ಅಸಲಿ ರೈತರ ಗಮನಕ್ಕೆ ಬಂದಿರುವುದಿಲ್ಲ ಕಳೆದ 2023 ರಂದು ಪಹಣಿ ಪತ್ರಿಕೆಯಲ್ಲಿಇದ್ದಕ್ಕಿದ್ದಂತೆ ಎಂ ಗೋವರ್ಧನ್ ಹೆಸರು ನಮೂದಾಗಿರುವುದು ಗಮನಕ್ಕೆ ಬಂದಿರುತ್ತದೆ.ಆಗ ನಾವುಗಳು ಎಚ್ಚೆತ್ತುಕೊಂಡು ತಹಸೀಲ್ದಾರ್ ಮತ್ತು ಸಹಾಯಕಆಯುಕ್ತರನ್ನು ಸಂಪರ್ಕಿಸಿದಾಗ ನಿಮ್ಮ ಭೂಮಿ ಮಾರಾಟ ಮಾಡಲಾಗಿದೆಎಂದು ನಮಗೆ ತಿಳಿಸಿರುತ್ತಾರೆ.ಆಗ ನಾವುಗಳು ಸಹಾಯಕಆಯುಕ್ತರಕೋರ್ಟ್ ನಲ್ಲಿಕೇಸ್‌ಅನ್ನು ದಾಖಲಿಸಿ ಕೊಂಡು ನಮ್ಮ ಭೂಮಿ ನಮಗೆ ಕೊಡಿಸುವಂತೆ ಮನವಿ ಮಾಡಿಕೊಂಡಿರುತ್ತೇವೆ. ಮತ್ತು ಆ ಕೇಸ್ ಈಗ ವಿಚಾರಣೆ ಹಂತದಲ್ಲಿರುತ್ತದೆ.ಈಗ ಮುಂಗಾರು ಮಳೆ ಆರಂಭವಾಗಿದ್ದು ನಮ್ಮಜಮೀನನ್ನು ಉಳಿಮೆ ಮಾಡಿಕೊಂಡು ಬಿತ್ತನೆಗೆ ಹೋದಾಗಗೋವರ್ಧನ್‌ಕಡೆಯ ಹತ್ತಾರು ಮಂದಿ ಬಂದು ಮಹಿಳೆಯರು ಎನ್ನದಂತೆ ನಮ್ಮ ಮೇಲೆ ದೌರ್ಜನ್ಯ ಎಸಗಿ ನಮ್ಮನ್ನುಕತ್ತು ಹಿಡಿದುಕೊಂಡು ಹೊಲದಿಂದ ಹೊರಗೆ ನೂಕಿರುತ್ತಾರೆ, ಮಹಿಳೆಯರು ವೃದ್ಧರುಎನ್ನದಂತೆ ನಮ್ಮನ್ನು ಎಳೆದಾಡಿರುತ್ತಾರೆ.ವೃದ್ಧರು ಎಂಬ ಕಾರಣಕ್ಕೆ ನಿಮ್ಮನ್ನು ಬಿಡುತ್ತಿದ್ದೇವೆಇಲ್ಲವಾದಲ್ಲಿ ನಿಮ್ಮನ್ನುಇದೇ ಹೊಲದಲ್ಲಿ ಹೊಡೆದು ಹಾಕುತ್ತಿದ್ದೇವುಎಂದು ನಮ್ಮ ಮೇಲೆ ಪ್ರಾಣ ಬೆದರಿಕೆ ಹಾಕಿರುತ್ತಾರೆಎಂದು ಸಂತ್ರಸ್ತರೈತರು ಆರೋಪಿಸಿ ನಮಗೆ ನೀವಾದರೂ ನ್ಯಾಯ ಕೊಡಿಸಿ ಎಂದುಜಿಲ್ಲಾ ಪೊಲೀಸ್‌ಅಧೀಕ್ಷಕರಿಗೆ ಮನವಿ ಸಲ್ಲಿಸಿ ಕೇಳಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಹಿರಿಯ ನಾಗರಿಕರು ಹಾಗೂ ರೈತರದ ಶೇಖಮ್ಮ, ಲಕ್ಷ್ಮಮ್ಮ, ಮತ್ತು ಹನುಮಂತ, ಪಾರ್ವತಿ, ಗೌರಮ್ಮ, ನಾಗೇಂದ್ರ್ಪ, ವೀರಬಸಪ್ಪ,, ಲಿಂಗಾರೆಡ್ಡಿ, ನಾಗೇಂದ್ರ್ಪ, ಹನಮಂತಪ್ಪಇದ್ದರು.
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್ 