ಗ್ರಾಮೀಣ ಕ್ರೀಡೆಗೆ ಉತ್ತೇಜನ ನೀಡಿ: ಬಿಇಓ ಸಾವಳಗಿ

ಗ್ರಾಮೀಣ ಕ್ರೀಡೆಗೆ ಉತ್ತೇಜನ ನೀಡಿ: ಬಿಇಓ ಸಾವಳಗಿ  Encourage rural sports: BEO Savalagi

ಗ್ರಾಮೀಣ ಕ್ರೀಡೆಗೆ ಉತ್ತೇಜನ ನೀಡಿ: ಬಿಇಓ ಸಾವಳಗಿ  

ತಾಳಿಕೋಟಿ  17: ಇಂದಿನ ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಮೊಬೈಲ್ ಹಾಗೂ ಕಂಪ್ಯೂಟರ್ ಗೇಮ್ ಗಳಿಂದಾಗಿ ಗ್ರಾಮೀಣ ಕ್ರೀಡೆಗಳು ನಶಿಸಿ ಹೋಗುತ್ತಿವೆ ಇವುಗಳನ್ನು ರಕ್ಷಿಸಿ ಬೆಳೆಸುವ ಅಗತ್ಯ ಇದೆ. ಖೋ-ಖೋ ಪ್ರಭಾವಪೂರ್ಣ ಕ್ರೀಡೆಯಾಗಿದ್ದು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಮಹತ್ವವನ್ನು ಪಡೆದುಕೊಂಡಿದೆ ಎಂದು ಮುದ್ದೇಬಿಹಾಳ ಕ್ಷೇತ್ರ ಶಿಕ್ಷಣಾಧಿಕಾರಿ ಬಿ. ಎಸ್‌.ಸಾವಳಗಿ ಹೇಳಿದರು. ಶುಕ್ರವಾರ ಮೈಲೇಶ್ವರದ ಬ್ರಿಲಿಯಂಟ್ ಶಾಲೆಯ ಮೈದಾನದಲ್ಲಿ ಜಿಲ್ಲಾ ಪಂಚಾಯತ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ವಿಜಯಪುರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಮುದ್ದೇಬಿಹಾಳ ಹಾಗೂ ಬ್ರಿಲಿಯಂಟ್ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆ ಮೈಲೇಶ್ವರ(ತಾಳಿಕೋಟಿ) ಇವರ ಸಹಯೋಗದಲ್ಲಿ 2025-26 ನೇ ಸಾಲಿನ ಜಿಲ್ಲಾ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಬಾಲಕ-ಬಾಲಕಿಯರ ಖೋ-ಖೋ ಪಂದ್ಯಾವಳಿ ಉದ್ಘಾಟನಾ ಸಮಾರಂಭದಲ್ಲಿ ಕ್ರೀಡಾ ಧ್ವಜಾರೋಹಣವನ್ನು ನೆರವೇರಿಸಿ ಅವರು ಮಾತನಾಡಿದರು. ಕ್ರೀಡೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ ಭಾಗವಹಿಸುವಿಕೆ ಮುಖ್ಯವಾಗಿದೆ ಜಿಲ್ಲಾ ಮಟ್ಟದ ಈ ಪಂದ್ಯಾವಳಿಯನ್ನು ಬ್ರಿಲಿಯಂಟ್ ಶಾಲೆಯ ಆಡಳಿತ ಮಂಡಳಿಯವರು ಬಹಳ ಅಚ್ಚುಕಟ್ಟಾಗಿ ಆಯೋಜನೆ ಮಾಡಿದ್ದಾರೆ ಅವರಿಗೆ ನಾನು ಅಭಿನಂದಿಸುತ್ತೇನೆ ಎಂದರು.    ಬ್ರಿಲಿಯಂಟ್ ಶಾಲಾ ಮಕ್ಕಳಿಂದ ಪಂದ್ಯಾವಳಿಯ ಪ್ರದರ್ಶನ ಪಂದ್ಯ ನಡೆಯಿತು. ಈ ಪಂದ್ಯಾವಳಿಯಲ್ಲಿ ಒಟ್ಟು 28 ತಂಡಗಳು ಭಾಗವಹಿಸಿದ್ದವು. ಜಿಲ್ಲಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಹಚಡದ, ಇಸಿಓ ಸುರೇಶ ಹಿರೇಮಠ,ಬಿ.ಆರಿ​‍್ಸ. ಕಾಶಿನಾಥ ಸಜ್ಜನ,ಸಿಆರ್ಸಿಗಳಾದ ರಾಜು ವಿಜಾಪುರ,ಎಸ್‌.ಎಂ.ಪಾಲ್ಕಿ, ರಾಜು ಮೂರಮಾನ, ಬಾಲಾಜಿ ವಿಜಾಪುರ,ತಾ.ಪ್ರಾ.ಶಾ.ಶಿ.ಸಂಘದ ಅಧ್ಯಕ್ಷ ಬಿ.ಟಿ.ವಜ್ಜಲ, ಎಸ್‌.ಎಸ್‌. ಲಮಾಣಿ,ರಾವತ್ ಪೂಜಾರಿ,ಕೆ.ಬಿ. ಸಜ್ಜನ, ಬೊಮ್ಮನಹಳ್ಳಿ ಗ್ರಾಪಂ ಪಿಡಿಓ ಪ್ರಭು ಚನ್ನೂರ,   ಮಾರುತಿ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯರು, ಶಾಲೆಯ ಮುಖ್ಯೋಪಾಧ್ಯಾಯರು ಸಿಬ್ಬಂದಿ ವರ್ಗ, ಕ್ರೀಡಾಪಟುಗಳು ಹಾಗೂ ತರಬೇತುದಾರರು ಉಪಸ್ಥಿತರಿದ್ದರು. ಡಾ.ವಿನಯ ಪಟಗಾರ ಸ್ವಾಗತಿಸಿದರು. ಬ್ರಿಲಿಯಂಟ್ ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು ಶಿಕ್ಷಕ ಸಿದ್ದು ಕರಡಿ ನಿರೂಪಿಸಿದರು. ಚನ್ನಬಸ್ಸು ಮೇಲಿನಮನಿ ವಂದಿಸಿದರು.