ಉದ್ಯೋಗ ಮಹಿಳೆಯರಲ್ಲಿ ಆತ್ಮಗೌರವವನ್ನು ಹೆಚ್ಚಿಸುತ್ತದೆ. ಹಿ ಡಾ. ಅಜಿತ ಪ್ರಸಾದ

ಉದ್ಯೋಗ ಮಹಿಳೆಯರಲ್ಲಿ ಆತ್ಮಗೌರವವನ್ನು ಹೆಚ್ಚಿಸುತ್ತದೆ. ಹಿ ಡಾ. ಅಜಿತ ಪ್ರಸಾದ Employment increases self-esteem in women. Hi Dr. Ajita Prasad

ದಾರವಾಡ 14: ಇಂದಿನ ಮಹಿಳೆ ಕೇವಲ ಉದ್ಯೋಗದ ಹುಡುಕಾಟದಲ್ಲಿರುವ ವ್ಯಕ್ತಿಯಲ್ಲ, ಅವಳು ಕುಟುಂಬದ ಆಧಾರಸ್ತಂಭ, ಸಮಾಜದ ಉತ್ತಮ ಸಮಾಜ ಮತ್ತು ನಿರ್ಮಾಣದಲ್ಲಿ ಮಹಿಳೆಯ ಶಕ್ತಿ ಅಪಾರ ಮಹಿಳೆಗೆ ಉದ್ಯೋಗ ಸೇರುವುದು ಆಕೆಯ ಆರ್ಥಿಕ ಸ್ವಾವಲಂಬನೆಗೆ ಮಾತ್ರವಲ್ಲ, ಉದ್ಯೋಗ ಆಕೆಯ ಆತ್ಮಗೌರವ, ಆತ್ಮವಿಶ್ವಾಸ ಮತ್ತು ನಿರ್ಧಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತುದೆ. ಪ್ರತಿಯೊಂದು ಮನೆಗೆ ಮಹಿಳೆಯೇ ಸ್ಪೂರ್ತಿ, ಶಕ್ತಿ ಮನೆಯ ನಂದಾದೀಪವಾಗಿರುತ್ತಾಳೆ. ಅವಳು ಸಧೃಡಳಾದರೆ ಮನೆ ನಂದಗೋಕುಲವಾಗಿರುತ್ತದೆ. ಅಂತಹ ಮಹಿಳೆ ಆರ್ಥಿಕ ಪರಿಸ್ಥಿತಿಯ ಕಾರಣದಿಂದಾಗಿ ಜೀವನದಲ್ಲಿ ಹಿನ್ನಡೆ ಅನುಭವಿಸಬಾರದು ಎಂಬ ಕಳಕಳಿ ಸಮಾಜಕ್ಕೆ ಅರಿವಾಗಬೇಕು ಎಂದು ಜೆ.ಎಸ್‌.ಎಸ್ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆಯಲ್ಲಿ ಜನತಾ ಶಿಕ್ಷಣ ಸಮಿತಿ, ರಾ​‍್ಯಪಿಡ್ ಸಂಸ್ಥೆ ಮತ್ತು ಮೂರ್ತಿ ಟ್ರಸ್ಟ್‌ ಇವರ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಮಹಿಳಾ ಉದ್ಯೋಗಮೇಳವನ್ನು ದೀಪ ಪ್ರಜ್ವಲನೆ ಮೂಲಕ ಜೆ.ಎಸ್‌.ಎಸ್ ನ ಕಾರ್ಯದರ್ಶಿಗಳಾದ ಡಾ. ಅಜಿತ ಪ್ರಸಾದರವರು ಉದ್ಘಾಟಿಸಿ ಮಾತನಾಡುತ್ತಿದ್ದರು.  

ಒಂದು ಕುಟುಂಬ ಸುಸ್ತಿರವಾಗಿಬೇಕೆಂದರೇ ಮುಖ್ಯವಾಗಿ ಆ ಕುಟುಂಬ ಆರ್ಥಿಕವಾಗಿ ಸುಸ್ತಿರವಾಗಿರಬೇಕು. ಆರ್ಥಿಕ ಸ್ತಿರತೆಗೆ ಉದ್ಯೋಗವೊಂದೆ ರಾಮಬಾಣ. ಈ ನಿಟ್ಟಿನಲ್ಲಿ ಪೂಜ್ಯ ಡಾ. ಡಿ ವೀರೇಂದ್ರ ಹೆಗ್ಗಡೆ ಅವರ ಗ್ರಾಮಾಭಿವೃದ್ಧಿ, ರುಡ್‌ಸೆಟ್ ಸಂಸ್ಥೆಗಳ ಮೂಲಕ ತ್ತು ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಮಹಿಳಾ ಸಬಲೀಕರಣಕ್ಕಾಗಿ ಶ್ರಮಿಸುತ್ತಿದ್ದಾರೆ. ಈ ಕಾರ್ಯಗಳಿಂದ ಪ್ರೇರಿತರಾಗಿ ಉದ್ಯೋಗಮೇಳಗಳನ್ನು ಆಯೋಜಿಸುವ ಮೂಲಕ ನಿರುದ್ಯೋಗ ನಿವಾರಣೆ, ಆರ್ಥಿಕ ಸುಭದ್ರತೆಯನ್ನು ಒದಗಿಸುವತ್ತ ಜೆ.ಎಸ್‌.ಎಸ್ ದಾಪುಗಾಲು ಇಡುತ್ತಿದೆ. ಈ ಉದ್ಯೋಗ ಮೇಳವು ಅನೇಕ ಮಹಿಳೆಯರಿಗೆ ತಮ್ಮ ಪ್ರತಿಭೆ, ಕೌಶಲ್ಯ ಮತ್ತು ಸಾಮರ್ಥ್ಯವನ್ನು ಪ್ರದರ್ಶಿಸಲು ವೇದಿಕೆಯಾಗುತ್ತದೆ.

ಇಲ್ಲಿ ದೊರಕುವ ಅವಕಾಶಗಳು ಅವರ ಬದುಕಿಗೆ ಹೊಸ ದಿಕ್ಕು ನೀಡಲಿ, ಸ್ವಾವಲಂಬಿ ಮತ್ತು ಆತ್ಮನಿರ್ಭರ ಜೀವನದತ್ತ ಅವರನ್ನು ಮುನ್ನಡೆಸಲಿ. 2022 ರಿಂದ 4 ಮಹಿಳಾ ಉದ್ಯೋಗಮೇಳಗಳನ್ನು ಆಯೋಜಿಸಲಾಗಿದ್ದು, ಇದು 5 ನೇ ಉದ್ಯೋಗಮೇಳವಾಗಿದೆ. ಇದರೊಟ್ಟಿಗೆ ಮಹಿಳೆಯರಿಗಾಗಿ ಉಚಿತ ಹೊಲಿಗೆ, ಕಸೂತಿ, ಬೇಕರಿ ಉತ್ಪನ್ನಗಳ ತಯಾರಿಕೆಗಳಂತಹ ತರಬೇತಿಗಳನ್ನು ರಾ​‍್ಯಪಿಡ್ ಸಂಸ್ಥೆಯ ಜೊತೆಗೂಡಿ ಆಯೋಜಿಸಲಾಗುತ್ತಿದೆ. ಮಹಿಳೆಯರು ಇದರ ಸದುಪಯೋಗ ಪಡೆದಕೊಳ್ಳಿ ಎಂದು ಹೇಳಿದರು. 

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಪ್ರಾದೇಶಿಕ ನಿರ್ದೇಶಕರಾದ ಶ್ರೀಮತಿ ದಯಾಶೀಲರವರು ಮಾತನಾಡಿ, ಮಹಿಳೆ ಅಬಲೆ ಅಲ್ಲ ಸಬಲೇ. ಪುರುಷರು ಮಾತ್ರ ಸಂಪಾದನೆ ಮಾಡಿ ಮನೆಯವರೆಲ್ಲ ಆರಾಮವಾಗಿ ಜೀವನ ನಡೆಸಬಹುದಾಗಿತ್ತು. ಆದರೆ, ಈಗ ಪತಿಯೊಂದಿಗೆ ಸತಿಯು ಸಹ ಉದ್ಯೋಗ ಮಾಡಿದರೇ ಮಾತ್ರ ಜೀವನ ನಡೆಸುವ ಕಾಲವಿದೆ. ಸ್ತ್ರೀಯರು ಅಷ್ಟೆ ಹುರುಪಿನಿಂದ ಉದ್ಯೋಗ ಗಿಟ್ಟಿಸಿಕೊಂಡು ಸಧೃಡರಾಗುತ್ತಿರುವುದು ಸಂತಸದ ವಿಚಾರ ಇಂತಹ ಸಮಯದಲ್ಲಿ ಮಹಿಳೆಯರಿಗಾಗಿ ಉದ್ಯೋಗಮೇಳಗಳನ್ನು ಆಯೋಜಿಸುವ ಮೂಲಕ ಮಹಿಳೆಯರ ಶ್ರೇಯೋಭಿವೃದ್ಧಿ ಬಯಸುತ್ತಿರುವ ಜೆ.ಎಸ್‌.ಎಸ್ ಹಾಗೂ ರಾ​‍್ಯಪಿಡ್ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದು ಹೇಳಿದರು. 

ರಾ​‍್ಯಪಿಡ್ ಸಂಸ್ಥೆಯ ಕಾರ್ಯದರ್ಶಿಗಳಾದ ವಾಣಿಶ್ರೀ ಪುರೋಹಿತರವರು ಮಾತನಾಡಿ, ಮಹಿಳೆಯರು ಉದ್ಯೋಗ ಕ್ಷೇತ್ರಕ್ಕೆ ಪ್ರವೇಶಿಸುವುದರಿಂದ ಕುಟುಂಬಗಳ ಸ್ಥಿರತೆ ಹೆಚ್ಚುತ್ತದೆ, ಮಕ್ಕಳ ಶಿಕ್ಷಣ ಮತ್ತು ಆರೋಗ್ಯದಲ್ಲಿ ಗುಣಾತ್ಮಕ ಬದಲಾವಣೆ ಕಂಡುಬರುತ್ತದೆ ಹಾಗೂ ಸಮುದಾಯದ ಒಟ್ಟು ಅಭಿವೃದ್ಧಿಗೆ ಸಹಕಾರ ದೊರಕುತ್ತದೆ. ಮಹಿಳೆಯರಿಗೆ ಉದ್ಯೋಗಮೇಳ ಆಯೋಜನೆ ಮಾಡುವುದು ಕೇವಲ ಅವಕಾಶ ನೀಡುವುದಲ್ಲ, ಅವರ ಸಾಮರ್ಥ್ಯವನ್ನು ಗುರುತಿಸಿ, ಬೆಳೆಯಲು ವೇದಿಕೆ ಕಲ್ಪಿಸುವುದಾಗಿದೆ ಎಂದರು. ಇಂತಹ ಸಮಾಜಮುಖಿ ಕಾರ್ಯಕ್ಕೆ ನಮ್ಮೊಂದಿಗೆ ಕೈಜೋಡಿಸಿದ ಜನತಾ ಶಿಕ್ಷಣ ಸಮಿತಿಗೆ ಧನ್ಯವಾದ ತಿಳಿಸಿದರು. 

ರಾ​‍್ಯಪಿಡ್ ಸಂಸ್ಥೆಯ ಸಿ.ಇ.ಓ ಮಾಲವಿಕಾ ಕಡಕೋಳ ಪ್ರಾಸ್ತಾವಿಕವಾಗಿ ಮಾತನಾಡಿ ಇಲ್ಲಿವರೆಗೆ ಆಯೋಜಿಸುತ್ತಾ ಬಂದಂತಹ ಉದ್ಯೋಗಮೇಳಗಳು ಹಂತ ಹಂತವಾಗಿ ಸುಧಾರಣೆಗೊಳ್ಳುತ್ತಾ ಬಂದಿದ್ದು, ಈಗ 5ನೇ ಬಾರಿಗೆ ನಡೆಯುತ್ತಿರುವ ಈ ಮೇಳ ಜೆ.ಎಸ್‌.ಎಸ್ ಮತ್ತು ರಾ​‍್ಯಪಿಡ್‌ನ ಸಿಬ್ಬಂದಿಗಳ ಸಹಕಾರದಿಂದ ಉತ್ತಮವಾಗಿ ಆಯೋಜನೆ ಆಗಿದೆ. ಮಹಿಳೆಯರಿಗೆ ವಿವಿಧ ತರಬೇತಿ ಹಾಗೂ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು. 

ಜೆ.ಎಸ್‌.ಎಸ್ ಐ.ಟಿ.ಐ ಕಾಲೇಜಿನ ಪ್ರಾಚಾರ್ಯರಾದ  ಮಹಾವೀರ ಉಪಾದ್ಯೆಯವರು ಮಾತನಾಡಿ, ಜೆ.ಎಸ್‌.ಎಸ್ ಕಳೆದ 20 ವರ್ಷಗಳಿಂದ 300 ಕ್ಕೂ ಹೆಚ್ಚು ಕ್ಯಾಂಪಸ್ ಸಂದರ್ಶನ ಹಾಗೂ 20ಕ್ಕೂ ಹೆಚ್ಚು ಉದ್ಯೋಗಮೇಳಗಳ ಆಯೋಜನೆ ಮೂಲಕ 80 ಸಾವಿರಕ್ಕೂ ಹೆಚ್ಚು ಜನರಿಗೆ ಬದುಕು ಕಟ್ಟಿಕೊಡುವ ಪ್ರಯತ್ನ ಮಾಡಿದೆ ಉದ್ಯೋಗಮೇಳಗಳು ಕೇವಲ ಕಾಯಕ್ರಮಗಳಾಗಿರದೇ ಸಮಾಜಕ್ಕೆ ನಾವು ನೀಡುತ್ತಿರುವ ಕೊಡುಗೆಗಳಾಗಿವೆ ಎಂದು ಹೇಳಿ ಕಾರ್ಯಕ್ರಮಕ್ಕೆ ಕಾರಣಿಭೂತರಾದ ಎಲ್ಲರಿಗೂ ಧನ್ಯವಾದಗಳನ್ನು ಅರ​‍್ಿಸಿದರು. 

ಈ ಉದ್ಯೋಗಮೇಳದಲ್ಲಿ ಒಟ್ಟು 1362 ಅಭ್ಯರ್ಥಿಗಳು ಭಾಗವಹಿಸಿದ್ದರು. 341 ಅಭ್ಯರ್ಥಿಗಳು ಕೊನೆಯ ಸುತ್ತಿಗೆ ಆಯ್ಕೆಯಾದರು. 89 ಜನ ಉದ್ಯೋಗ ಪಡೆದುಕೊಂಡರು. ಪ್ರಾರಂಭದಲ್ಲಿ ಕು. ಗ್ರೀಷ್ಮಾ ಪ್ರಾರ್ಥಿಸಿದರು, ಜೆ.ಎಸ್‌.ಎಸ್ ನ ಆಡಳಿತಾಧಿಕಾರಿಗಳಾದ ಅರಿಹಂತ ಪ್ರಸಾದರವರು, ಭಾಸ್ಕರ್, ಮಂಜುನಾಥ ಚಟ್ಟೇರ ಇತರರು ಉಪಸ್ಥಿತರಿದ್ದರು. . ಸ್ನೇಹಾ ದೇಶಪಾಂಡೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.