ಅರ್ಹ ಫಲಾನುಭವಿಗಳು ಪಂಚ ಗ್ಯಾರಂಟಿ ವಂಚಿತರಾಗಬಾರದು: ರೆಡ್ಡಿ ಶ್ರೀನಿವಾಸ

ಅರ್ಹ ಫಲಾನುಭವಿಗಳು ಪಂಚ ಗ್ಯಾರಂಟಿ ವಂಚಿತರಾಗಬಾರದು: ರೆಡ್ಡಿ ಶ್ರೀನಿವಾಸ Eligible beneficiaries should not be deprived of Pancha Guarantee: Reddy Srinivas

ಅರ್ಹ ಫಲಾನುಭವಿಗಳು ಪಂಚ ಗ್ಯಾರಂಟಿ ವಂಚಿತರಾಗಬಾರದು: ರೆಡ್ಡಿ ಶ್ರೀನಿವಾಸ 

ಕೊಪ್ಪಳ 31: ಯಾವುದೇ ಅರ್ಹ ಫಲಾನುಭವಿಗಳು ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಿಂದ ಹೊರಗುಳಿಯದಂತೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಅಗತ್ಯಕ್ರಮ ಕೈಗೊಳ್ಳಬೇಕು ಎಂದು ಕೊಪ್ಪಳ ಜಿಲ್ಲಾ ಮಟ್ಟದಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದಅಧ್ಯಕ್ಷರಾದರೆಡ್ಡಿ ಶ್ರೀನಿವಾಸ ಹೇಳಿದರು.ಅವರುಗುರುವಾರ ಕೊಪ್ಪಳ ಜಿಲ್ಲಾ ಪಂಚಾಯತ್‌ನ ಜೆ.ಹೆಚ್‌.ಪಟೇಲ್ ಸಭಾಂಗಣದಲ್ಲಿರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಂಬಂಧ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಪ್ರಗತಿ ಪರೀಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು. 

ಜನ ಸಾಮಾನ್ಯರ ಏಳ್ಗೆಗಾಗಿ ರಾಜ್ಯ ಸರ್ಕಾರವು ಶಕ್ತಿ ಯೋಜನೆ, ಗೃಹಲಕ್ಷ್ಮಿ, ಅನ್ನಭಾಗ್ಯ, ಗೃಹಜ್ಯೋತಿ ಹಾಗೂ ಯುವನಿದಿ, ಈ ಮಹತ್ತರವಾದಐದುಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದೆ. ಯೋಜನೆಗಳ ಅನುಷ್ಠಾನದಲ್ಲಿ ಕೊಪ್ಪಳ ಜಿಲ್ಲೆಯುಉತ್ತಮ ಪ್ರಗತಿ ಸಾಧಿಸಿದೆ.ಜನಪರವಾದ ಈ ಕಾರ್ಯಕ್ರಮಗಳನ್ನು ಕೊಪ್ಪಳ ಜಿಲ್ಲೆಯಲ್ಲಿ ಮತ್ತಷ್ಟು ಪರಿಣಾಮಕಾರಿಯಾಗಿಅನುಷ್ಠಾನಗೊಳಿಸಿ ಇವುಗಳ ಲಾಭವನ್ನುಜಿಲ್ಲೆಯ ಪ್ರತಿಯೊಬ್ಬಅರ್ಹ ಫಲಾನುಭವಿಗಳಿಗೆ ದೊರಕಿಸಿಕೊಡಲು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಅಗತ್ಯಕ್ರಮ ಕೈಗೊಳ್ಳಬೇಕು ಎಂದರು. 

ಜಿಲ್ಲೆಯಲ್ಲಿಇ-ಕೆವೈಸಿ ಮಾಡಿಸದಪಡಿತರಚೀಟಿಗೆ ಇ-ಕೆವೈಸಿ ಮಾಡಿಸುವುದಾಗಿ ನ್ಯಾಯಬೆಲೆ ಅಂಗಡಿಗಳ ಮೂಲಕವೆ ಸಾರ್ವಜನಿಕರಿಗೆಅರಿವು ಮೂಡಿಸಿ.ಪಡಿತರ ವಿತರಿಸುವ ಸಮಯವನ್ನು ಸರ್ಕಾರವು ಹೆಚ್ಚಿಸಿದ್ದು, ಅದರಂತೆಜಿಲ್ಲೆಯಎಲ್ಲಾ ನ್ಯಾಯಬೆಲೆ ಅಂಗಡಿಗಳು ಕಾರ್ಯನಿರ್ವಹಿಸುವಂತೆಸೂಚಿಸಿ, ಜನರಿಗೆ ಅನುಕೂಲ ಮಾಡಿಕೊಡಬೇಕು. ವಿದ್ಯುತ್ ಬಿಲ್ ಬಾಕಿ ವಸೂಲಾತಿ ಸಂದರ್ಭದಲ್ಲಿಜೆಸ್ಕಾಂಅಧಿಕಾರಿ, ಸಿಬ್ಬಂದಿಗಳು ಜನರೊಂದಿಗೆ ಸೌಜನ್ಯದಿಂದ ವರ್ತಿಸಬೇಕುಎಂದುಸಂಬಂಧಿಸಿದ ಅಧಿಖಾರಿಗಳಿಗೆ ಸೂಚನೆ ನೀಡಿದರು.  

ಯುವನಿಧಿ ಯೋಜನೆಯಡಿ ಮೇ-2025ರಲ್ಲಿ 6,455 ಫಲಾನುಭವಿಗಳು ನೋಂದಣಿಯಾಗಿದ್ದು, ಮೇ ಅಂತ್ಯದವರೆಗೆಒಟ್ಟು ಮೊತ್ತರೂ.15.17 ಕೋಟಿಗಳನ್ನು ಪಾವತಿಸಲಾಗಿರುತ್ತದೆಎಂದು ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.ಜಿಲ್ಲಾ ಮಟ್ಟದಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದಉಪಾಧ್ಯಕ್ಷರಾದಎಸ್‌.ಬಿ.ಖಾದ್ರಿ, ಮಂಜುನಾಥ ಗೊಂಡಬಾಳ ಅಮರೇಶಪ್ಪಎಸ್‌.ಜಿ. ಮತ್ತು ನಾಗರಾಜ ಅರಳಿ ಹಾಗೂ ಜಿಲ್ಲಾಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಸದಸ್ಯರು ಹಾಗೂ ಜಿಲ್ಲೆಯ ವಿವಿಧ ತಾಲ್ಲೂಕುಗಳ ಅಧ್ಯಕ್ಷರುಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಹಲವು ವಿಷಯಗಳ ಕುರಿತುತಮ್ಮ ಸಲಹೆ ಸೂಚನೆಗಳನ್ನು ನೀಡಿದರು.  

ಸಭೆಯಲ್ಲಿಜಿಲ್ಲಾ ಪಂಚಾಯತ್‌ಯೋಜನಾ ನಿರ್ದೇಶಕ ಪ್ರಕಾಶ ವಿ.ಸೇರಿದಂತೆಗ್ಯಾರಂಟಿ ಯೋಜನೆಗಳ ಅನುಷ್ಠಾನ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ವಿಷಯ ನಿರ್ವಾಹಕರು ಸೇರಿದಂತೆಇತರರು ಉಪಸ್ಥಿತರಿದ್ದರು.ಅನ್ನ ಸುವಿದಾಯೋಜನೆಗೆ ಚಾಲನೆ:ಸಭೆಯ ನಂತರ75ವರ್ಷ ಮೇಲ್ಪಟ್ಟ ಹಿರಿಯ ಫಲಾನುಭವಿಗಳಿಗೆ ಮನೆಗೆಆಹಾರ ಸಾಮಾಗ್ರಿಗಳನ್ನು ತಲುಪಿಸುವ “ಅನ್ನ ಸುವಿಧಾಯೋಜನೆ''ಗೆ ಕೊಪ್ಪಳ ನಗರದಗಾಂಧಿ ವೃತ್ತದ ಬಳಿ ಇರುವ ಹಾಲಯ್ಯ ಹುಡೇಜಾಲಿ ಅವರ ನ್ಯಾಯ ಬೆಲೆ ಅಂಗಡಿಯಲ್ಲಿಕೊಪ್ಪಳ ಜಿಲ್ಲಾ ಮಟ್ಟದಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದಅಧ್ಯಕ್ಷರಾದರೆಡ್ಡಿ ಶ್ರೀನಿವಾಸ ಅವರ ನೇತೃತ್ವದಲ್ಲಿಅಕ್ಕಿ ಜೋಳ ಪರೀಶೀಲನೆ ಮಾಡಿ, ನಂತರ ಮ್ಯಾದಾರಓಣಿಯ ಫಲಾನುಭವಿಗಳ ಮನೆಗೆ ತೆರಳಿ ಹತ್ತುಕೆಜಿ ಅಕ್ಕಿ ವಿತರಿಸುವ ಮೂಲಕಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.  

ಈ ಸಂದರ್ಭದಲ್ಲಿಜಿಲ್ಲಾ ಮಟ್ಟದಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದಉಪಾಧ್ಯಕ್ಷರಾದ ಮಂಜುನಾಥ ಗೊಂಡಬಾಳ, ನಾಗರಾಜ ಅರಳಿ, ಅಮರೇಶಗಾಂಜಿ ಹಾಗೂ ಜಿಲ್ಲಾ ಸಮಿತಿ ಸದಸ್ಯರಾದ ಶಾರದಾಕಟ್ಟಿಮನಿ, ಸೋಮನಾಥ, ಮಲ್ಲಪ್ಪಜಕ್ಕಲಿ ಸುಧೀರ ಶಾಮಾಚಾರ, ಸಂಗಮೇಶ ಗುತ್ತಿ, ಆಹಾರ ಇಲಾಖೆ ಉಪನಿರ್ದೇಶಕ ಸೋಮಶೇಖರ ಬಿರಾದರ್‌ಸೇರಿದಂತೆಮತ್ತಿತರರು ಉಪಸ್ಥಿತರಿದ್ದರು.