ಹಾವೇರಿ ಕ್ಷೇತ್ರದ ಅಭ್ಯಥರ್ಿಗಳ ಚುನಾವಣಾ ಲೆಕ್ಕಪರಿಶೀಲನೆ
ಹಾವೇರಿ೧೨: ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇದೇ ಎ. 16ರ ಮಂಗಳವಾರ ಹಾಗೂ ಎಪ್ರಿಲ್ 20ರ ಶನಿವಾರ ಬೆಳಿಗ್ಗೆ 11 ಗಂಟೆಗೆ 10-ಹಾವೇರಿ ಲೋಕಸಭಾ ಕ್ಷೇತ್ರದ ಚುನಾವಣಾ ಕಣದಲ್ಲಿರುವ ಅಭ್ಯಥರ್ಿಗಳ ಚುನಾವಣಾ ಲೆಕ್ಕಪತ್ರ ಪರಿಶೀಲನೆ ನಡೆಯಲಿದೆ.
ಚುನಾವಣಾ ಆಯೋಗದ ನಿದರ್ೆಶನದಂತೆ ಹಾವೇರಿ ಲೋಕಸಭಾ ಕ್ಷೇತ್ರದಲ್ಲಿರುವ ಪ್ರತಿಯೊಂದು ಅಭ್ಯಥರ್ಿಗಳು ಆಯೋಗ ನಿಗಧಿಪಡಿಸಿದ ನಮೂನೆ ಮತ್ತು ಪುಸ್ತಕಗಳಲ್ಲಿ ಪ್ರತಿದಿನ ಚುನಾವಣಾ ಖಚರ್ು ವೆಚ್ಚನಗಳನ್ನು ನಿರ್ವಹಿಸಿ ನಿಗದಿಪಡಿಸಿದ ದಿನಾಂಕಗಳಂದು ಚುನಾವಣಾ ವೆಚ್ಚ ವೀಕ್ಷಕರಿಗೆ ತಪಾಸಣೆಗೆ ಹಾಜರಪಡಿಸುವುದು ಪ್ರಜಾಪ್ರಾತಿನಿಧಿಕ ಕಾಯ್ದೆ 1951 ಕಲಂ 77ರಡಿ ಶಾಸನಬದ್ಧವಾಗಿರುತ್ತದೆ.
ಸ್ಪಧರ್ೆಯಲ್ಲಿರುವ ಅಭ್ಯಥರ್ಿಗಳು ಚುನಾವಣಾ ವೆಚ್ಚಕ್ಕಾಗಿ ಖಚರ್ುಮಾಡಿರುವ ಲೆಕ್ಕಪತ್ರಗಳನ್ನು ಸ್ವತಃ ಖುದ್ದಾಗಿ ಅಥವಾ ತಮ್ಮ ಅಧಿಕೃತ ಲೆಕ್ಕ ಪ್ರತಿನಿಧಿಗಳೊಂದಿಗೆ ಬ್ಯಾಂಕ್ ಪಾಸ್ಬುಕ್ ಮತ್ತು ವೋಚರ್ ಸಹಿತ ಖಚಿಣ ವಿವರಗಳನ್ನು ಪರಿವೀಕ್ಷಣೆಗಾಗಿ ಏ.16 ಹಾಗೂ ಏ.20ರ ಬೆಳಿಗ್ಗೆ 11 ಗಂಟೆಗೆ ಹಾವೇರಿಯ ದೇವಗಿರಿಯಲ್ಲಿರುವ ಜಿಲ್ಲಾಡಳಿತ ಕಚೇರಿಗೆ ಹಾಜರಪಡಿಸಲು ತಿಳಿಸಲಾಗಿದೆ.
ಲೆಕ್ಕಪತ್ರ ಸಲ್ಲಿಸಲು ಗೈರು ಹಾಜರಾದರೆ ಅಥವಾ ಲೆಕ್ಕಪತ್ರ ಬರೆಯದೇ ಇದ್ದಲ್ಲಿ 1951 ಕಲಂ 77ರಡಿ ಐಪಿಸಿ ಕಲಂಗಳ ಪ್ರಕಾರ ಕ್ರಮಕ್ಕೆ ಬಾಧ್ಯಸ್ಥರಾಗಿರುತ್ತಾರೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಕೃಷ್ಣ ಬಾಜಪೇಯಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 