ನವದೆಹಲಿ, ಏ 18 'ಪಿಎಂ ನರೇಂದ್ರ ಮೋದಿ' ಜೀವನಾಧಾರಿತ ಚಿತ್ರ ವೀಕ್ಷಿಸಿ ಚುನಾವಣಾ ಆಯೋಗ ಸಂತಸಗೊಂಡಿದೆ ಎಂದು ಮೋದಿ ಪಾತ್ರ ನಿರ್ವಹಿಸಿದ ಬಾಲಿವುಡ್ ನಟ ವಿವೇಕ್ ಒಬಿರಾಯ್ ತಿಳಿಸಿದ್ದಾರೆ.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಾಗಿದ್ದರಿಂದ ಚಿತ್ರ ಬಿಡುಗಡೆಗೆ ಚುನಾವಣಾ ಆಯೋಗ ತಡೆ ನೀಡಿತು. ಆಯೋಗದ ಈ ನಡೆಯನ್ನು ಪ್ರಶ್ನಿಸಿ ಚಿತ್ರ ನಿಮರ್ಾಪಕರು ಕೋಟರ್್ ಮೊರೆ ಹೋಗಿದ್ದರು. ಆದ್ದರಿಂದ ಸುಪ್ರೀಂ ಕೋರ್ಟ, ಮೊದಲು ಚುನಾವಣಾ ಆಯೋಗಕ್ಕೆ ಚಿತ್ರ ವೀಕ್ಷಿಸಿ ವರದಿ ನೀಡಬೇಕೆಂದು ಆದೇಶಿಸಿದ ಹಿನ್ನೆಲೆಯಲ್ಲಿ ಬುಧವಾರ ಚುನಾವಣಾ ಆಯೋಗ ಚಿತ್ರ ವೀಕ್ಷಿಸಿದ್ದರಿಂದ ಇಂದು ವಿವೇಕ್, ಅಧಿಕಾರಿಗಳನ್ನು ಭೇಟಿ ಮಾಡಿದ್ದಾರೆ.
ಈ ಕುರಿತು ಮಾತನಾಡಿದ ವಿವೇಕ್, ನಿನ್ನೆ ಚುನಾವಣಾ ಆಯೋಗದ ಅಧಿಕಾರಿ-ಸಿಬ್ಬಂದಿ ಈ ಚಿತ್ರವನ್ನು ನೋಡಿದ್ದಾರೆ. ಚಿತ್ರದ ಕುರಿತು ಅವರ ನೀಡಿದ ಉತ್ತರ ಹೇಳಲಾರೆ. ಆದರೆ, ಅವರ ಪ್ರತಿಕ್ರಿಯೆಯಿಂದ ಸಂತಸಗೊಂಡಿದ್ದೇನೆ. ಬೇಗ ಚಿತ್ರ ಬಿಡುಗಡೆಗೆ ಅನುಮತಿ ಸಿಗಲಿದೆ ಎಂಬ ನಿರೀಕ್ಷೆಯಲ್ಲಿದ್ದೇನೆ ಎಂದು ಅವರು ತಿಳಿಸಿದ್ದಾರೆ.
ಈ ಚಿತ್ರದಲ್ಲಿ ಗುಜರಾತ್ ಸೇರಿ ದೇಶದಲ್ಲಾದ ಸಾಮಾಜಿಕ ಬದಲಾವಣೆ ಹಾಗೂ 1950ನೇ ವರ್ಷದಿಂದ ಮೋದಿ ಅವರ ಬಾಲ್ಯದಿಂದ ಹಿಡಿದು ಗುಜರಾತಿನಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಅವರು ಮಾಡಿರುವ ಅಭಿವೃದ್ಧಿ ಕಾರ್ಯದ ಬಗ್ಗೆ ಚಿತ್ರದಲ್ಲಿ ತೋರಿಸಲಾಗಿದೆ.