ಬೆಳಗಾವಿ ವಿದ್ಯಾವಿಷಯಕ್ ಪರಿಷತ್ತಿಗೆ ಆಯ್ಕೆ
ಸಂಬರಗಿ 24: ಅಥಣಿ ಹೊರ ವಲಯದಲ್ಲಿ ಇರುವ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಲಾಸ ಕಾಂಬಳೆ ಇವರಿಗೆ ರಾಣಿ ಚೆನ್ನಮ್ಮ ವಿಶ್ವ ವಿದ್ಯಾಲಯದಿಂದ ಬೆಳಗಾವಿ ವಿದ್ಯಾವಿಷಯಕ್ ಪರಿಷತ್ತಿಗೆ ನಾಮ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.
ನಾಮ ನಿರ್ದೇಶಕರಾಗಿ ಆಯ್ಕೆಯಾದ ಪ್ರೊ. ವಿಲಾಸ ಕಾಂಬಳೆ ಇವರಿಗೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಅಥಣಿ ಘಟಕ, ಕಾಲೇಜಿನ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಸಂತಸ ವ್ಯಕ್ತಪಡಿಸಿದ್ದಾರೆ.