ಇಂಡಿ ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ನಡೆದ 10ನೇ ಸೆನೆಟ್ ಚುನಾವಣೆಯಲ್ಲಿ ಸೆನೆಟ್ ಆಗಿ ಆಯ್ಕೆ

Elected as senate in the 10th senate election held at Rajiv Gandhi University of Health Sciences, I

ಇಂಡಿ ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ನಡೆದ 10ನೇ ಸೆನೆಟ್  ಚುನಾವಣೆಯಲ್ಲಿ  ಸೆನೆಟ್ ಆಗಿ ಆಯ್ಕೆ

ವಿಜಯಪುರ 18 : ಬಿ.ಎಲ್‌.ಡಿ.ಇ ಸಂಸ್ಥೆಯ ತಿಕೋಟಾದಲ್ಲಿರುವ ನಸಿಂರ್ಗ್ ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ಸಂತೋಷ ಇಂಡಿ ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ನಡೆದ 10ನೇ ಸೆನೆಟ್  ಚುನಾವಣೆಯಲ್ಲಿ  ಸೆನೆಟ್ ಆಗಿ ಆಯ್ಕೆಯಾಗುವ ಮೂಲಕ ವಿಜಯಪುರ ಜಿಲ್ಲೆಗೆ ಕೀರ್ತಿತಂದಿದ್ದಾರೆ.   

ವೈದ್ಯಕೀಯ, ದಂತ ವೈದ್ಯಕೀಯ, ನಸಿಂರ್ಗ್, ಆಯುರ್ವೇದ, ಫಾರ್ಮಸಿ, ಫಿಸಿಯೋಥೆರಪಿ, ಹೋಮಿಯೋಪತಿ, ಯುನಾನಿ, ಅಲೈಡ್ ಹೆಲ್ತ್‌ ಸೈನ್ಸಸ್, ನ್ಯಾಚುರೋಪತಿ ಮತ್ತು ಹೆಚ್ಚಿನವುಗಳನ್ನು ಒಳಗೊಂಡಂತೆ ತನ್ನ ವೈವಿಧ್ಯಮಯ ಅಧ್ಯಾಪಕರನ್ನು ಹೊಂದಿರುವ ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ ಸಂತೋಷ ಇಚಿಡಿ 2024 ರಿಂದ 2027ರ ವರೆಗೆ ಮೂರು ವರ್ಷಗಳ ಅವಧಿಗೆ ಸೆನೆಟ್ ಆಗಿ ಆಯ್ಕೆಯಾಗಿದ್ದಾರೆ.  

ಈ ಹಿನ್ನೆಲೆಯಲ್ಲಿ ಸಂತೋಷ ಇಂಡಿ ಅವರನ್ನು ಬಿ.ಎಲ್‌.ಡಿ.ಇಡೀಮ್ಡ್‌ ವಿಶ್ವವಿದ್ಯಾಲಯದ ರಜಿಸ್ಟ್ರಾರ್ ಡಾ. ಆರ್‌. ವಿ. ಕುಲಕರ್ಣಿ ವಿಜಯಪುರದಲ್ಲಿ ಸನ್ಮಾನಿಸಿದರು.  ಈ ಸಂದರ್ಭದಲ್ಲಿ ಆಡಳಿತಾಧಿಕಾರಿ ಎಸ್‌. ಎ. ಬಿರಾದಾರ(ಕನ್ನಾಳ), ತಿಕೋಟಾ ಕಾಲೇಜಿನ ಪ್ರಾಚಾರ್ಯ ಪ್ರಕಾಶ ಸಿದ್ದಾಪುರ, ವಿಜಯಪುರ ಕಾಲೇಜಿನ ಪ್ರಾಚಾರ್ಯಡಾ. ಶಾಲ್ಮೊನ್ ಚೋಪಡೆ ಮತ್ತು ಡಾ. ಬಶೀರ ಅಹ್ಮದ್ ಸಿಕಂದರ್ ಉಪಸ್ಥಿತರಿದ್ದರು. 

ಸಂತೋಷ ಇಂಡಿ ಸೆನೆಟ್ ಆಗಿ ಆಯ್ಕೆಯಾಗಿರುವುದಕ್ಕೆ ಸಂಸ್ಥೆಯ ಅಧ್ಯಕ್ಷ ಮತ್ತು ಕೈಗಾರಿಕೆ, ಮೂಲ ಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಅಭಿನಂದನೆ ಸಲ್ಲಿಸಿದ್ದಾರೆ.  ಅವರ ಆಯ್ಕೆ ಬಿ.ಎಲ್‌.ಡಿ.ಇ ಸಂಸ್ಥೆಗೆ ಬಹಳ ಹೆಮ್ಮೆಯ ವಿಷಯವಾಗಿದೆ.  ಅಷ್ಟೇ ಅಲ್ಲ, ಇದು ನಮ್ಮ ಅಧ್ಯಾಪಕರ ಶ್ರೇಷ್ಠತೆ ಮತ್ತು ಬದ್ಧತೆಯನ್ನು ತೋರಿಸುತ್ತದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.   

ಸಂತೋಷ ಇಂಡಿ ಅವರ ಆಯ್ಕೆಗೆ ಬಿ.ಎಲ್‌.ಡಿ.ಇ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು, ಪ್ರಾಚಾರ್ಯರು, ಬೋಧಕ ಮತ್ತು ಬೋಧಕರ ಹೊರತಾದ ಸಿಬ್ಬಂದಿ ಅಭನಂದನೆ ಸಲ್ಲಿಸಿದ್ದಾರೆ.