ಸಿರುಗುಪ್ಪ ತಾಲೂಕಿನದ್ಯಂತ ಈದ್ ಮಿಲಾದ್‌ಉನ್ ನಬಿ ಸಡಗರ ಸಂಭ್ರಾಚರಣೆ
Eid Miladun Nabi Sadagar celebration across Siruguppa taluk
ಸಿರುಗುಪ್ಪ ತಾಲೂಕಿನದ್ಯಂತ ಈದ್ ಮಿಲಾದ್‌ಉನ್ ನಬಿ ಸಡಗರ ಸಂಭ್ರಾಚರಣೆ
ಸಿರುಗುಪ್ಪ 05: ನ್ಯಾಯ ನೀತಿ ಪಾಲಿಸುವುದು ನಮ್ಮ ನೆರೆ ಹೊರೆಯವರು ಸಂಬಂಧಿಕರು ಸಹ ವರ್ತಿಗಳಿಗೆ ನಿತ್ಯವೂ ಕರುಣೆ ಅನುಕಂಪ ತೊರುವುದು. ದಿವ್ಯ ಧರ್ಮಗ್ರಂಥ ಪವಿತ್ರಖುರಾನ್ ಅಜ್ಞಾಪಿಸುತ್ತದೆ ನಮ್ಮೊಳಗಿರುವ ಕೆಡುಕಿನ ವಿರುದ್ಧ ಆಸೆ ಆಮಿಷಗಳ ವಿರುದ್ಧ ಹೋರಾಡುವುದೇ ಆಗಿದೆ. ಅದಕ್ಕಾಗಿ ಪಾಲಕರು ಪೋಷಕರು ಹಿರಿಯರು ಮಕ್ಕಳಿಗೆ ಆಸ್ತಿ ಮಾಡುವುದಕ್ಕಿಂತ ಉತ್ತಮ ಶಿಕ್ಷಣ ಕೊಡಿಸಿ ಉಜ್ವಲ ಭವಿಷ್ಯರೂಪಿಸಬೇಕು ಎಂದು ರಾಯಚೂರು ಜಿಲ್ಲೆ ಸಿಂಧನೂರು ತಾಲೂಕು ಮುಕ್ಕುಂದ ಹಜರತ್ ಸೈಯದ್‌ಗಡ್ಡೆಖಾದರ್ ಬಾಷಾ ಖಾದ್ರಿ (ರ.ಅ) ದರ್ಗಾದ ಸಜ್ಜಾದ ನಶೀನ್ ಸೈಯದ್ ಹಸನ್ ಬಸರಿಖಾದ್ರಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಮಾನವರಾಗಿ ಹುಟ್ಟಿರುವ ನಾವೆಲ್ಲರೂ ಒಂದು ದಿನ ಸಾಯಲೇಬೇಕು. ದೈಹಿಕವಾಗಿ ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ಜಗತ್ತಿನಲ್ಲಿ ನಾವೆಲ್ಲರೂ ಒಂದೇ ನಮಗೆಲ್ಲರಿಗೂ ಸಂತೋಷದ ಬದುಕು ಬೇಕು ಸಮಸ್ಯೆಗಳಿಂದ ದೂರ ಇರಬೇಕು ಆದರೆದುರದೃಷ್ಟಕರ ವಿಚಾರವೆಂದರೆ ಈಗ ನಾವು ಈ ರೀತಿ ಮತ್ತು ವಾತ್ಸಲ್ಯ ಮಹತ್ವವನ್ನು ಮರೆತ್ತಿದ್ದೇವೆ ಗುರು ಹಿರಿಯರ ಮಾರ್ಗದರ್ಶನದಂತೆ ನಡೆದರೆ ಸನ್ಮಾರ್ಗಕ್ಕೆ ದಾರಿ ಸಿಗುತ್ತದೆ ಎಂದು ಸೌದಾಗರ್ ಜುಮ್ಮ ಸುನ್ನಿ ಮಸೀದಿಯ ಮೌಲಾನ ಎಸ್‌ಅಬ್ದುಲ್ ಸಮದ್ ನಿಜಾಮಿ ಬಂದಾ ನವಾಜ್ ಹೇಳಿದರು.
ಪ್ರಪಂಚದಲ್ಲಿ ಆಚರಿಸಲಾಗುತ್ತಿರುವ 1500ನೇ ಇಂಟರ್ ನ್ಯಾಷನಲ್ ಮೀಲಾದ್ ಉನ್ ನಬಿ ಅಲ್ಲಾಹನ ನಬಿ ಯೇಕರೀಮ್ ಪ್ರವಾದಿ ರವರಜನ್ಮ ಶತಾಬ್ದಿ ಅಂಗವಾಗಿ ಸಿರುಗುಪ್ಪ ತಾಲೂಕಿನದ್ಯಂತ ಈದ್ ಮಿಲಾದ್‌ಉನ್ ನಬಿ ಸಡಗರ ಸಂಭ್ರಮದಿಂದಆಚರಿಸಲಾಗಿದೆ.
ಸಿರುಗುಪ್ಪ ನಗರದ ಮತ್ತು ತಾಲೂಕಿನ ಆಸ್ಪತ್ರೆಗಳ ರೋಗಿಗಳಿಗೆ ಅಂಗವಿಕಲ ವಿಕಲಚೇತನರ ಶಾಲೆಗಳಿಗೆ ತೆರಳಿ ಹಾಲು ಬ್ರೆಡ್ ಹಣ್ಣು ಹಂಪಲು ವಿತರಣೆ ಸಾರ್ವಜನಿಕರಿಗೆ ಸಿಹಿ ಪ್ರಸಾದ ಚಿಕನ್ ಮಟನ್ ಬಿರಿಯಾನಿ ಪಲಾವ್‌ಅನ್ನ ಸರ್ವರಿಗೂ ವ್ಯವಸ್ಥೆ ಮಾಡಲಾಗಿತ್ತು ಶುಕ್ರವಾರ ವಿಶೇಷ ನಮಾಜ್ ನಂತರ ಮೂರುಗಂಟೆಯಿಂದಐದುಗಂಟೆವರೆಗೆಎಲ್ಲಾ ಮಸೀದಿಗಳ ಮೊಹಲ್ಲಾಗಳಿಂದ ಮುಖ್ಯರಸ್ತೆ ಮೂಲಕ ಜಶ್ನೆಈದ್ ಮೀಲಾದ್‌ಉನ್ ನಬಿ ಅಭೂತ ಪೂರ್ವ ಭವ್ಯಜುಲೂಸ್ ಮೆರವಣಿಗೆ ನಡೆಯಿತು ಹಂಡಿ ಹುಸೇನ್ ಸಾಬ್ ಹಾಜಿ ಬಿ ಮೆಹಮೂದ್ ಸಾಬ್‌ಎನ್‌ಎಸ್ ಸಲೀಮ್ ಸಾಬ್‌ಖಾಜಿ ಸೈಯದ್‌ಜೈಲಾನ್ ಪಾಷಾ ಖಾದ್ರಿ ಸಾಹೇಬ್‌ಜಾಲ್ನವಿ ಸಮಾಜ ಸುಧಾರಕ ಹಾಜಿಅಬ್ದುಲ್ ನಬಿ ಎ ಮೊಹಮ್ಮದ್‌ಇಬ್ರಾಹಿಂ ಮೊಹಮ್ಮದ್ ರಫಿ ಮಹಮ್ಮದ್ ನೌಶಾದ್ ಅಲಿ ಸಮಾಜ ಕಲ್ಯಾಣ ಇಲಾಖೆಯ ಡಿ ಆಲಂ ಬಾಷಾ ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ಚಂದನ್ ಗೋಪಾಲ್ ಪಿಎಸ್‌ಐ ಪರುಶರಾಮ ಭದ್ರತಾ ದಳ ಪೋಲಿಸರು ಜೂಲುಸ್‌ನಲ್ಲಿ ಇದ್ದರು ಮೆಕ್ಕಾ ಮದೀನಾ ವಿವಿಧ ಸ್ತಬ್ದ ಪ್ರದರ್ಶನ ಆಕರ್ಷಗೊಂಡವು.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 