ಶಿಕ್ಷಣವು ಪ್ರತಿ ಮಗುವಿನ ಮೂಲಭೂತ ಹಕ್ಕು
Education is the fundamental right of every child.
ಗದಗ 24 : ಸಾಧ್ಯವಾದಷ್ಟು ಮಕ್ಕಳೆ ಸ್ವತಂತ್ರವಾಗಿ ತನ್ನ ಕಾರ್ಯನಿರ್ವಹಿಸಲು ಕಲಿಯಿರಿ. ಶಾಲೆಯಲ್ಲಿ ನೀಡುವ ಮನೆ ಕೆಲಸವನ್ನು ಜವಾಬ್ದಾರಿಯಿಂದ ನಿರ್ವಹಿಸಲು ಕಲಿಯಿರಿ ಎಂದು ದೇವಗಿರಿ ಕ್ಲಸ್ಟರಿನ ಸಮೂಹ ಸಂಪನ್ಮೂಲ ಅಧಿಕಾರಿಗಳಾದ ಮಾಲತೇಶ ದೊಡ್ಡಮನಿ ಮಾತನಾಡಿದರು.
ಹಾವೇರಿ ತಾಲೂಕಿನಕರ ಜಗಿಗ್ರಾಮದ ಎಂ.ಪಿ.ಎಸ್. ಕರಜಗಿ ಶಾಲೆಯಲ್ಲಿ ಆಯೋಜಿಸಿದ ಎಫ್.ಎಲ್.ಎನ್. ಕಲಿಕಾ ಕಾರ್ಯಾಗಾರದ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಮುಂದುವರೆದು ಶಿಕ್ಷಣವು ಪ್ರತಿ ಮಗುವಿನ ಮೂಲಭೂತ ಹಕ್ಕು. ಸರ್ಕಾರ ರಾಜ್ಯದ ಎಲ್ಲಾ ಮಕ್ಕಳಿಗೂ ಸುಲಭವಾಗಿ ಶಿಕ್ಷಣ ದೊರೆಯುವಂತೆ ಮಾಡಲು ಕಟಿಬದ್ಧವಾಗಿದೆ. ರಾಜ್ಯದ ಎಲ್ಲಾ ಮಕ್ಕಳಿಗೂ ಓದು-ಬರಹ ಲೆಕ್ಕಾಚಾರ ಗುಣಮಟ್ಟದ ಶಿಕ್ಷಣ ನೀಡಲು ಈ ಶಿಕ್ಷಕರು ಸರ್ಕಾರ ಅವಿರತವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿದ ಶ್ರೀಕಾಂತ ದೊಡ್ಡಕುರುಬರ ಶಿಕ್ಷಕರು ಮಾತನಾಡಿ ತರಗತಿಯಲ್ಲಿ ಪ್ರತಿ ಮಗುವಿನ ಕಲಿಕಾ-ಫಲಗಳನ್ನು ಅರ್ಥ ಮಾಡಿಕೊಂಡು, ತಮ್ಮತರಗತಿ ಮಕ್ಕಳಿಗೆ ಸೂಕ್ತವಾದ ಕಲಿಕಾ ಫಲಗಳನ್ನು ಸಾಧಿಸಲುಎಫ್. ಎಲ್. ಎನ್. ಕಾರ್ಯಕ್ರಮ ಬಹಳ ಸೂಕ್ತವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಹೊಸದಾಗಿ ಸಮೂಹ ಸಂಪನ್ಮೂಲ ಅಧಿಕಾರಿಗಳಾಗಿ ಆಗಮಿಸಿದ ಶ್ರೀ ಮಾಲತೇಶದೊಡ್ಡಮನಿಯವರನ್ನು ಸ್ವಾಗತಕೋರಲಾಯಿತು. ಅದೇರೀತಿ ಸಿ.ಆರ್.ಪಿ. ಗಳಾಗಿ ಕಾರ್ಯನಿರ್ವಹಿಸಿದ ಶ್ರೀಕಾಂತ ದೊಡ್ಡಕುರುಬರಅವರನ್ನು ಬೀಳ್ಕೊಡಲಾಯಿತು.
ಪ್ರಸ್ತಾವಿಕವಾಗಿಜಿ.ಎಂ. ಓಂಕಾರಣ್ಣನವರ ಮಾತನಾಡಿ ಎಫ್.ಎಲ್.ಎನ್. ಕಾರ್ಯಕ್ರಮ ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲು ವಿದ್ಯಾರ್ಥಿಗಳ ಕಲಿಕೆಯ ಗುಣಮಟ್ಟ ಹೆಚ್ಚಿಸಲು ಕಾರ್ಯ್ಯೊನ್ಮುಖರಾಗುತ್ತಿದ್ದೇವ ೆಎಂದರು.
ವೇದಿಕೆಯಲ್ಲಿ ಎಸ್.ಡಿ.ಎಂ.ಸಿ. ಉಪಾಧ್ಯಕ್ಷರಾದ ನಿಂಗವ್ವ ಕರಡೆಪ್ಪನವರ ಸದಸ್ಯರಾದ ದೇವೇಂದ್ರ್ಪ ಕುಲಕರ್ಣಿ ಜಕಣಾಚಾರಿ ಬಡಿಗೇರ ಸವಿತಾ ಮಂದಿ, ಎಸ್.ಎನ್. ಭಜಂತ್ರಿ, ಮಮತಾಜ ಬಾಲೇಹೊಸೂರ, ರಾಜುಜಿಡ್ಡಿ, ಹಾಗೂ ಮಕ್ಕಳ ಪಾಲಕರು ಉಪಸ್ಥಿತರಿದ್ದರು.
ಪ್ರಾರ್ಥನೆಯನ್ನು ಮಲ್ಲೇಶದೊಡ್ಡಮನಿ ಮಾಡಿದರೆ, ಸ್ವಾಗತವನ್ನು ಪ್ರಧಾನ ಗುರುಮಾತೆ ಜಯಶ್ರೀ ಕೊರಗರ ಮಾಡಿದರು. ಕಾರ್ಯಕ್ರಮದ ನಿರೂಪಣೆಯನ್ನು ಶಿಕ್ಷಕಿ ಸರೋಜಾಅಗಡಿ ಮಾಡಿದರೇ, ಗೀತಾಕ್ವಾಟಿ ವಂದಿಸಿದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 