ಬೇಸಿಗೆ ಸಮಯದಲ್ಲಿ ತರಕಾರಿ, ಹೆಚ್ಚಿನ ನೀರು, ಮಜ್ಜಿಗೆ ಸೇವಿಸಿ : ವಿಶ್ವನಾಥ ಸಣ್ಣ ಗೌಡರ

ಬೇಸಿಗೆ ಸಮಯದಲ್ಲಿ ತರಕಾರಿ, ಹೆಚ್ಚಿನ ನೀರು, ಮಜ್ಜಿಗೆ ಸೇವಿಸಿ : ವಿಶ್ವನಾಥ ಸಣ್ಣ ಗೌಡರ  Eat vegetables, more water, and buttermilk during summer: Vishwanath Sanna Gowda

ನೇಸರಗಿ. 23 : ಬೇಸಿಗೆ ಸಮಯದಲ್ಲಿ ತಮ್ಮ ಮನೆಯ ಮೇಲೆ ಪಕ್ಷಿಗಳ ಸಲುವಾಗಿ 4 ಬಟ್ಟಲು ಕಾಳು, ನಾಲ್ಕು ಕಡೆ ನೀರು ಇಟ್ಟು, ಅದನ್ನು ಪಕ್ಷಿಗಳು ಸೇವಿಸಿ ಬಾವಿ, ಕೆರೆ, ಹಳ್ಳ, ಹೊಳೆಗಳಲ್ಲಿ ಇಸಿದರೆ ಪ್ರಕೃತಿ ಸುಮಧುರವಾಗಿ ಇರುತ್ತದೆ ಎಂದು ವರದ ಫೌಂಡೇಶನ್ ಸ್ವಯಂ ಸೇವಕರಾದ ವಿಶ್ವನಾಥ ಸಣ್ಣ ಗೌಡರ  ಹೇಳಿದರು. ಅವರು ಇಲ್ಲಿನ  ಚನ್ನವೃಷಬೇಂದ್ರ ಅಜ್ಜನವರ ಲೀಲಾ ಮಠದಲ್ಲಿ ವರದಶ್ರೀ ಫೌಂಡೇಶನ್ ವತಿಯಿಂದ  ಜನರಿಗೆ  ಕಣ್ಣು, ಕಿವಿ, ಮೂಗು ಸಂರಕ್ಷಣೆಗೆ ಸಿದ್ಧ  ಹನಿ ರಸ ಹಾಕುವ ಕಾರ್ಯಕ್ರಮದಲ್ಲಿ ಮಾತನಾಡಿ ಬೇಸಿಗೆ ಆರಂಭವಾದ ಹಿನ್ನೆಲೆಯಲ್ಲಿ ತಾವುಗಳು ಹೆಚ್ಚಿನ ಮಠದ ತರಕಾರಿ ಪಲ್ಲೆ, ನೆನೆದ ವಿವಿಧ  ಕಾಳು, ಜವಾರಿ ಅಕಳಿನ ಮಜ್ಜಿಗೆ, ಹೆಚ್ಚಿನ ಪ್ರಮಾಣದಲ್ಲಿ ಸತತವಾಗಿ ನೀರು ಸೇವಿಸಿ ಅರೋಗ್ಯ ಕಾಪಾಡಿಕೊಳ್ಳಿ ಎಂದರು. ಈ ಸಂದರ್ಭದಲ್ಲಿ ನಿವೃತ್ತ ಪ್ರಧಾನ ಶಿಕ್ಷಕರಾದ ಮಲ್ಲಿಕಾರ್ಜುನ ಮದನಬಾವಿ,  ವಿನಾಯಕ ಕಂಪ್ಯೂಟರ್ ಮಹಾವಿದ್ಯಾಲಯದ ಸಂಸ್ಥಾಪಕರಾದ ಬಸವರಾಜ ಹಿರೇಮಠ, ಅಶೋಕ ಅಗಸಿಮನಿ, ಬಾಬಣ್ಣ ಮಾರಿಹಾಳ, ಅಣ್ಣಪ್ಪ ಮಾಳಣ್ಣವರ, ನಿವೃತ್ತ ಸೈನಿಕ ಯಲ್ಲಪ್ಪ ರೊಟ್ಟಿ ಸೇರಿದಂತೆ ಗ್ರಾಮದ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಹಿರಿಯರು,ಸಿದ್ದ ಹನಿ ರಸ ಹಾಕಿಸಲು  ಜಿಲ್ಲೆಯ ಅನೇಕ ಭಾಗಗಳಿಂದ ಬಂದಂತ ಸಾರ್ವಜನಿಕರು ಭಾಗವಹಿಸಿದ್ದರು.