ಜ.22 ರಂದು ದುಗರ್ಾದೇವಿ ಜಾತ್ರಾಮಹೋತ್ಸವ
ಹಾವೇರಿ18: ದುಗರ್ಾದೇವಿ ಜಾತ್ರಾಮಹೋತ್ಸವ 22 ರಿಂದ ತನ್ನನ್ನು ನಂಬಿ ಬಂದ ಭಕ್ತರ ಕೋರಿಕೆಗಳನ್ನು ಈಡೇರಿಸುವ ಜಾಗೃತ ಶಕ್ತಿಮಾತೆ ಎಂದೇ ಪ್ರಸಿದ್ಧವಾದ ದೇವತೆ ಹಾವೇರಿ ಜಿಲ್ಲೆ ಹಾವೇರಿ ತಾಲೂಕಿನ ನೆಗಳೂರು ಗ್ರಾಮದ ಶಕ್ತಿಮಾತೆ ಕೋಡಿ ದುಗರ್ಾದೇವಿಯ ಜಾತ್ರಾಮಹೋತ್ಸವ ದಿ.22 ಮತ್ತು 23 ಎರಡು ದಿನಗಳ ಕಾಲ ವಿಜೃಂಭಣೆಯಿಂದ ಜರುಗಲಿದೆ.
ದೇವಿಯಹಿನ್ನಲೆ: ಸುಮಾರು 850 ವರ್ಷಗಳ ಇತಿಹಾಸವುಳ್ಳ ನೆಗಳೂರ ಗ್ರಾಮದ ಮೂಲ ಹೆಸರು ಗಣತೂರು. ಇಲ್ಲಿಯ ಹಿರೇಮಠದ ಗುರುಶಾಂತ ಶಿವಯೋಗಿಗಳು ಏಕಕಾಲಕ್ಕೆ ಸಾವಿರ ನೇಗಿಲುಗಳ ಪವಾಡ ಮಾಡಿದ್ದರಿಂದ ನೇಗಿಲೂರು ಎಂದು ಹೆಸರಾಯಿತು ಎಂಬುದು ಹಿನ್ನೆಲೆ. ದ್ಯಾಮವ್ವದೇವಿ ಗ್ರಾಮದೇವತೆಯಾಗಿದ್ದರೆ, ಉಪದೇವತೆಯಾಗಿ ದುಗರ್ಾದೇವಿ ನೆಲೆಸಿದ್ದಾಳೆ.
ಗ್ರಾಮದ ಹೊರವಲಯದಲ್ಲಿ ಒಂದು ಕೆರೆಯಿದ್ದು ಮಳೆಗಾಲದಲ್ಲಿ ತುಂಬಿ ಹರಿದು ಕೋಡಿ ಬಿಳುತ್ತಿದ್ದರಿಂದ ಗ್ರಾಮದ ಜನರಿಗೆ ತೊಂದರೆಯಾಗುತ್ತಿತ್ತು. ಗ್ರಾಮದ ಸುಕಳಿ ಮನೆತನದ ಹಿರಿಯರು ಹಾಗೂ ಗ್ರಾಮದ ಮುಖಂಡರುಗಳು ಗ್ರಾಮದ ಹಿರೇಮಠದ ಗುರುಶಾಂತ ಶಿವಯೋಗಿಗಳ ಬಳಿ ಇದರ ಪರಿಹಾರದ ಬಗ್ಗೆ ಕೇಳಿದಾಗ, ಕೆರೆಯ ಪಕ್ಕದಲ್ಲಿ ಶಕ್ತಿಮಾತೆಯನ್ನು ಪ್ರತಿಷ್ಠಾಪಿಸಬೇಕೆಂದು ಗುರುಗಳು ತಿಳಿಸಿದರು. ಬನದ ಹುಣ್ಣಿಮೆಯ ನಂತರ ಬರುವ ಶುಭ ಮಂಗಳವಾರದಂದು ಮೂತರ್ಿ ಪ್ರತಿಷ್ಠಾಪಿಸಿದ ಗುರುಗಳು , ಗ್ರಾಮಸ್ಥರು ದೀಪಗಳನ್ನು ಬೆಳಗಿಸಿ ಕಾತರ್ಿಕೋತ್ಸವ ನೆರವೇರಿಸಬೇಕೆಂದು ಅಪ್ಪಣೆ ಮಾಡಿದರು. ಅಂದಿನಿಂದ ಕೆರೆ ಕೋಡಿ ಒಡೆಯುವುದು ಕಡಿಮೆಯಾಯಿತು. ಕೋಡಿ ಒಡೆಯುವುದನ್ನು ನಿಲ್ಲಿಸಿದ ಪ್ರತೀಕವಾಗಿ ಕೋಡಿ ದುಗರ್ಾದೇವಿ ಎಂದು ನಾಮಕರಣ ಮಾಡಲಾಯಿತು. ಬನದ ಹುಣ್ಣಿಮೆಯಮೊದಲು ರಥದ ಚಕ್ರಗಳನ್ನು ಪೂಜಿಸಿ ಹೊರತರಲಾಗುತ್ತದೆ.
ಅಂದಿನಿಂದ ಜಾತ್ರೆ ಪ್ರಾರಂಭ ನಂತರ ಬಿಷ್ಟನಗೌಡರ ಮನೆಯಿಂದ ದೇವಿಯ ಆಭರಣಗಳನ್ನು ತಂದು ಮೂತರ್ಿಯನ್ನು ಅಲಂಕರಿಸುತ್ತಾರೆ. ಗ್ರಾಮದೇವತೆಯ ದೇವಸ್ಥಾನದಿಂದ ಹೊರಡುವ ದೇವಿಯ ಉತ್ಸವ ದುಗರ್ಾದೇವಿ ದೇವಸ್ಥಾನದಲ್ಲಿ ಮುಕ್ತಾಯಗೊಳ್ಳುತ್ತದೆ. ಮರುದಿನ ಸಂಜೆ ಮರಳಿ ಬರುವ ದೇವಿಗೆ ಸದ್ಭಕ್ತರು ಪೂಜಾಕೈಂಕರ್ಯ ಸಲ್ಲಿಸುತ್ತಾರೆ.
ವಿಶೇಷ ಬಂಡಿ ಉತ್ಸವ: ಮೊದಲೆಲ್ಲ ಜಾತ್ರಾಮಹೋತ್ಸವ ಹಿನ್ನಲೆಯಲ್ಲಿ ಬೆಲ್ಲದ ಬಂಡಿಗಳೆಂದು ಊರಿನ ಪ್ರಮುಖ ಬೀದಿಗಳಲ್ಲಿ ರೈತನ ಒಡನಾಡಿಗಳಾದ ಎತ್ತುಗಳನ್ನು ಶೃಂಗರಿಸಿಕೊಂಡು ವಿವಿಧ ಜಾನಪದ ಮೇಳಗಳೊಂದಿಗೆ ಸಾಗುತ್ತಿದ್ದ ಸಂರ್ದಭದಲ್ಲಿ ಪ್ರಸಾದ ರೂಪದಲ್ಲಿ ಬೆಲ್ಲದ ನೀರನ್ನು ನೀಡುತ್ತಿದ್ದರು ಎನ್ನುತ್ತಾರೆ ಹಿರಿಯರು. ಈಗ ಬೆಲ್ಲದ ಬಂಡಿಗಳ ಉತ್ಸವ ಕೈ ಬಿಡಲಾಗಿದೆ ಕೇವಲ ಎತ್ತುಗಳ ಮೆರವಣಿಗೆ ಮಾಡಲಾಗುತ್ತಿದೆ. ವೈಷ್ಟತೆಯಿಂದ ಕೊಡಿದ ದೇವಿಯ ಜಾತ್ರೆಯಾಗಿದೆ
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್ 