ಮುಂಬಯಿ, ಮೇ 2 ಎರಡು-ಮೂರು ಚಿತ್ರಗಳು ವೈಫಲ್ಯದಿಂದ ಖಾನ್ ತ್ರೈಯರ ಅವಧಿ ಮುಗಿಯುದಿಲ್ಲ ಎಂದು ಬಾಲಿವುಡ್ ನಟ ನವಾಜುದ್ದಿನ್ ಸಿದ್ಧಿಖಿ ಅಭಿಪ್ರಾಯ ಪಟ್ಟಿದ್ದಾರೆ.
ಕಳೆದ ಕೆಲ ವರ್ಷಗಳಿಂದ ಬಾಲಿವುಡ್ ದಿಗ್ಗಜರಾದ ಶಾರುಖ್ ಖಾನ್, ಅಮಿರ್ ಖಾನ್ ಹಾಗೂ ಸಲ್ಮಾನ್ ಖಾನ್ ಅಭಿನಯದ ಚಿತ್ರಗಳು ಜನರನ್ನು ಸೆಳೆಯಲು ವಿಫಲವಾಗಿವೆ.
ಇತ್ತೀಚೆಗಷ್ಟೇ ನಟ ಅರ್ಬಾಜ್ ಖಾನ್ ನಡೆಸಿಕೊಡುವ ಚಾಟ್ ಶೋ ದಲ್ಲಿ ಭಾಗವಹಿಸಿದ ನವಾಜುದ್ದೀನ್ ಗೆ ಅಭಿಮಾನಿ ಒಬ್ಬ, ಬಾಲಿವುಡ್ ನಲ್ಲಿ ನೀವೂ ಖಾನ್ ತ್ರೈಯರನ್ನು ಹಿಂದಿಕ್ಕಿದಿರೇಂದು ಅನಿಸುವುದಿಲ್ಲವೇ? ಎಂದು ಪ್ರಶ್ನಿಸಿದ್ದಾನೆ. ಅದಕ್ಕೆ ನವಾಜುದ್ದೀನ್, ಜೋರಾಗಿ ನಕ್ಕು ಒಂದು ಚಿತ್ರ ವಿಫಲವಾಗಿದೆ ಎಂದ ಮಾತ್ರಕ್ಕೆ ಖಾನ್ ರ ಅವಧಿ ಮುಗಿದಂತಿಲ್ಲ. ಸಹೋದರ ನನಗೆ ಕೆಲಸ ಮಾಡಲು ಬಿಡು. ನಾನೊಬ್ಬ ನಟ. ಹೀಗಾಗಿ ಪ್ರತಿಯೊಂದು ಪಾತ್ರವನ್ನು ನಾನು ಮಾಡಬೇಕಾಗುತ್ತದೆ ಎಂದು ಅವರು ಉತ್ತರಿಸಿದ್ದಾರ