ಧಾರವಾಡ 19: ಭಾರತದ ಅರ್ಥವ್ಯವಸ್ಥೆಯು ಆಥರ್ಿಕ ಹಿಂಜರಿತ, ನಿರುದ್ಯೋಗ, ಬಡತನ ಮುಂತಾದ ಸಮಸ್ಯೆಗಳಿಂದ ತತ್ತರಿಸುತ್ತಿರುವುರಿಂದ, ಅವುಗಳನ್ನು ಇತ್ಯರ್ಥ ಪಡಿಸುವಲ್ಲಿ ಅರ್ಥಶಾಸ್ತ್ರಜ್ಞರ ಪಾತ್ರವು ಮಹತ್ವದಾಗಿರುತ್ತದೆ ಎಂದು ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಡಾ.ಬಿ. ಪಿ. ವೀರಭದ್ರಪ್ಪ ಹೇಳಿದರು.
ಈ ಅಭಿಪ್ರಾಯವನ್ನು ಕನರ್ಾಟಕ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗವು ಆಯೋಜಿಸಿದ್ದ "ನೀಲಮಣಿ ಮಹೋತ್ಸವ 2019-20ರ ಉದ್ಘಾಟನಾ ಸಮಾರಂಭದಲ್ಲಿ ಹೇಳಿದರು.
ಅಧುನಿಕ ಕಾಶಲ್ಯ ಮತ್ತು ಜ್ಞಾನವನ್ನು ಹೊಂದಿರುವ ಅರ್ಥಶಾಸ್ತ್ರಜ್ಞರು ಬೋಧನಾ ಕ್ಷೇತ್ರದಲ್ಲಿ ಮಾತ್ರವಲ್ಲದೆ ವೈಜ್ಞಾನಿಕ ಸಂಶೋಧನೆ, ಕೈಗಾರಿಕಾ ವಲಯ, ವ್ಯಾಪಾರ, ವ್ಯವಹಾರ ಮತ್ತು ವಾಣಿಜ್ಯದಲ್ಲೂ ವಿಫುಲ ಅವಕಾಶಗಳನ್ನು ಹೊಂದಿದ್ದಾರೆ. ಹಣವು ಸಂತೋಷವನ್ನು ತರುವುದಿಲ್ಲ, ಉತ್ತಮ ಗುಣಮಟ್ಟದ ಬೋಧನೆ ಮತ್ತು ಸಂಶೋಧನಾ ವೃತ್ತಿಯಿಂದ ಮಾತ್ರ ಸಾಕಷ್ಟು ಸಂತೃಪ್ತಿ ಮಾನಸಿಕ ಶಾಂತಿ ಮತ್ತು ಸಮೃದ್ಧಿ ಲಭಿಸುತ್ತದೆ ಎಂದು ಹೇಳಿದರು. ಇದಲ್ಲದೆ. ಕ.ವಿ.ವಿ ಹಾಗೂ ಕುವೆಂಪು ವಿಶ್ವವಿದ್ಯಾಲಯಗಳಂತಹ ಸಂಸ್ಥೆಗಳನ್ನು ಬೆಳೆಸುವಲ್ಲಿ ಸಂಘಟಿತ ಪ್ರಯತ್ನ ಮತ್ತು ಉತ್ಸಾಹವು ಒಂದು ಪ್ರಮುಖ ಪಾತ್ರವಹಿಸುತ್ತದೆ ಎಂದು ಹೇಳಿದರು. ಅಧುನಿಕ ಕೌಶಲ್ಯ ಮತ್ತು ಜ್ಞಾನವನ್ನು ಪಡೆದುಕೊಳ್ಳಲು ವಿದ್ಯಾಥರ್ಿಗಳಿಗೆ ಸಲಹೆ ನೀಡುತ್ತಾ, ಅವುಗಳ ಕೊರತೆಯಿಂದ ಅವರ ಭವಿಷ್ಯ ಮಂಕಾಗುತ್ತದೆ ಎಂದು ವೀರಭದ್ರಪ್ಪರವರು ಹೇಳಿದರು.
ಹೊಸ ಆಥರ್ಿಕ ನೀತಿ-ಎಲ್ಪಿಜಿ- ಯಿಂದ ಜಾಗತಿಕ ಮಟ್ಟದ ಅನೇಕ ರೀತಿಯ ಗ್ರಾಹಕರ ಸರಕುಗಳು ಮತ್ತು ಸೇವೆಗಳನ್ನು ಪಡೆಯಲು ಸಾಧ್ಯವಾಗಿದೆ ಎಂದು ಕನರ್ಾಟಕ ವಿಶ್ವವಿದ್ಯಾಲಯದ ಕುಲಪತಿ ಡಾ. ಎ. ಎಸ್. ಶಿರಾಳಶೆಟ್ಟಿ ಅವರು ಹೇಳಿದರು.
ಅಧುನಿಕ ಕೌಶಲ್ಯ ಮತ್ತು ಜ್ಞಾನವನ್ನು ಹೊಂದಿರುವ ಅರ್ಥಶಾಸ್ತ್ರಜ್ಞರಿಗೆ ಜಾಗತಿಕರಣವು ಸಾಕಷ್ಟು ಉದ್ಯೋಗವಕಾಶಗಳನ್ನು ಸೃಷ್ಟಿಸಿದೆ. ವಿದ್ಯಾಥರ್ಿಗಳಿಗೆ ಶಿಸ್ತು ಮತ್ತು ಸಂಯಮ ಗುಣವನ್ನು ಹೊಂದುವುದರ ಮೂಲಕ ಪ್ರಾಮಾಣಿಕವಾಗಿ ಕೆಲಸ ಮಾಡಲು ಕರೆಕೊಟ್ಟರು. ಅವರು ಅರ್ಥಶಾಸ್ತ್ರ ವಿದ್ಯಾಥರ್ಿಗಳಗೆ ಉದ್ಯೋಗಿಯಾಗುವ ಬದಲು ಜಾಗತಿಕರಣದ ಉಪಯೋಗವನ್ನು ಪಡೆದುಕೊಂಡು ಉದ್ಯೋಗದಾತರಾಗಬೇಕೆಂದು ಕರೆ ನೀಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಡಾ. ಆರ್. ಆರ್. ಬಿರಾದಾರ ಅವರು ಅಭಿವೃದ್ಧಿಯನ್ನು ಕಡಿತಗೊಳಿಸುವ ಬಡತನ ಮತ್ತು ನಿರುದ್ಯೋಗದಂತಹ ಸಮಸ್ಯೆಗಳನ್ನು ನಿಭಾಯಿಸಲು ಉತ್ತಮ ಅರ್ಥಶಾಸ್ತ್ರಜ್ಞರನ್ನು ಮತ್ತು ಶ್ರೇಷ್ಠ ಸಂಶೋಧಕರನ್ನು ರೂಪಿಸಲು ಅರ್ಥಶಾಸ್ತ್ರ ವಿಭಾಗವು ಬದ್ದವಾಗಿದೆ ಎಂದು ಹೇಳಿದರು.
ನೀಲಮಣಿ ಮಹೋತ್ಸವ ಆಚರಣೆಯ ಅಡಿಯಲ್ಲಿ ಸಮಕಾಲಿನ ವಿಷಯಗಳ ಕುರಿತು ರಾಷ್ಟ್ರೀಯ ಸಮ್ಮೇಳನ, ಕಾಯರ್ಾಗಾರ, ವಿಚಾರಗೋಷ್ಠಿ ಮತ್ತು ವಿಶೇಷ ಉಪನ್ಯಾಸಗಳಂತಹ ವಿವಿಧ ಶೈಕ್ಷಣಿಕ ಚಟುವಟಿಕೆಗಳನ್ನು ಆಯೋಜಿಸಲಾಗುವುದು ಎಂದು ಹೇಳಿದರು. ವಿದ್ಯಾಥರ್ಿಗಳು ಇಂತಹ ಕಾರ್ಯಕ್ರಮಗಳ ಲಾಭವನ್ನು ಪಡೆದುಕೊಂಡು ತಮ್ಮ ಜೀವನವನ್ನು ರೂಪಿಸಿಕೊಳ್ಳಬೆಕೆಂದು ಸಲಹೆ ನೀಡಿದರು.
ಡಾ. ಎಸ್. ಟಿ. ಬಾಗಲಕೋಟಿ ರವರು ಅರ್ಥಶಾಸ್ತ್ರ ವಿಭಾಗ ಸ್ಥಾಪನೆಯಾದಾಗಿನಿಂದ (1955) ಮಾಡಿದ ಸಾಧನೆಗಳನ್ನು ಮತ್ತು ಬೆಳವಣಿಗೆಯ ಪಥವನ್ನು ವಿವರಿಸಿದರು. ಕಾರ್ಯಕ್ರಮದ ಸಂಯೋಜಕ ಡಾ. ಬಿ. ಎಚ್. ನಾಗೂರ ರವರು ಮುಖ್ಯ ಅತಿಥಿಗಳನ್ನು ಸ್ವಾಗತಿಸಿ ಪರಿಚಯಿಸಿದರು. ಯೋಗಿತಾ ಸ್ವಾಗತ ಗೀತೆಯನ್ನು ಹಾಡಿದರು. ಶ್ರೇಯಾ ಸುಪ್ಪಣ್ಣವರ ಹಾಗೂ ಪಾರ್ವತಿ ಕಲ್ಮಡಿ ನಿರೂಪಿಸಿದರು. ಕುಮಾರ ರಾಘವೇಂದ್ರ ಜುಗಲೂರು ವಂದನಾರ್ಪಣೆ ಮಾಡಿದರು.
ಡಾ. ಎಚ್ ಎಚ್ ಭರಡಿ, ಡಾ. ಎಚ್ ಎಚ್ ಗಡವಾಲೆ, ಡಾ. ಎನ್. ಎಸ್. ಮುಗದೂರ, ಡಾ. ಎಸ್. ಬಿ. ನಾರಿ, ಡಾ. ಜಿ. ಕೆ. ಕಡೆಕೊಡಿ, ಡಾ. ಎನ್. ಜಿ. ಚಚಡಿ, ಡಾ. ಪಿ. ಎಸ್. ಮುಂದಿನಮನಿ, ಡಾ. ಎಲ್.ಡಿ. ವೈಕುಂಟೆ, ಡಾ. ಎಲ್ ಆರ್ ಅಂಗಡಿ, ಡಾ. ಸಿ. ಎಚ್. ಪಾಟೀಲ ಹಾಗೂ ಇತರರು ಉಪಸ್ಥಿತರಿದ್ದರು. 300ಕ್ಕಿಂತಲೂ ಹೆಚ್ಚು ವಿದ್ಯಾಥರ್ಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.