ಮುಂಡಗೋಡದಲ್ಲಿ ಜೋರಾಯ್ತು ಕುಡುಕರ ಹಾವಳಿ:ಮಟ ಮಟ ಮಧ್ಯಾಹ್ನದಲ್ಲಿ ರೋಡೇ ಹಾಸಿಗೆ! ನಾಗರಿಕರಿಂದ ಛೀಮಾರಿ
Drunk people are rampant in Mundagoda: Roadside bed in the middle of the afternoon! Citizens scold
ಮುಂಡಗೋಡ 22:ಪಟ್ಟಣದಲ್ಲಿ ದಿನೇ ದಿನೇ ಕುಡಕರ ಹಾವಳಿ ಹೆಚ್ಚುತ್ತಿದ್ದು, ಇದು ಸಾರ್ವಜನಿಕ ಭದ್ರತೆ ಹಾಗೂ ವ್ಯಾಪಾರಿಗಳಿಗೆ ತೀವ್ರ ತಲೆನೋವಾಗುತ್ತಿದೆ. ರಸ್ತೆ ಬದಿಯಲ್ಲಿ, ಅಂಗಡಿಗಳ ಮುಂಭಾಗದಲ್ಲಿ ಹಾಗೂ ವಾಹನಗಳ ಕೆಳಗೆ ಕುಡಿದು ಮಲಗಿರುವ ದೃಶ್ಯಗಳು ಸಾಮಾನ್ಯವಾಗಿ ಕಾಣಿಸಿಕೊಂಡು, ಪಟ್ಟಣದ ಸುವ್ಯವಸ್ಥೆಗೆ ನೇರ ತೊಂದರೆ ಉಂಟುಮಾಡುತ್ತಿವೆ. ಪಟ್ಟಣದ ಪ್ರಮುಖ ವೃತ್ತವಾದ ಶಿವಾಜಿ ಸರ್ಕಲ್‌ನ ಶ್ರೀರಾಜ್ ಹೋಟೆಲ್ ಎದುರಿನ ಟಾಟಾ ಎಸಿ ಸ್ಟ್ಯಾಂಡ್ ಬಳಿ, ಹಗಲು ಹೊತ್ತಿನಲ್ಲೇ ಕುಡಕನೊಬ್ಬ ಸಾರ್ವಜನಿಕರ ಕಣ್ಣೆಮುಂದೆ ಮಲಗಿದ್ದಾನೆ. ಇದೇ ಸ್ಥಳದ ಬಲಭಾಗದಲ್ಲಿರುವ ಬಟ್ಟೆ ಅಂಗಡಿಯ ಮುಂಭಾಗದಲ್ಲಿಯೂ ಕುಡಕರ ಹಾವಳಿ ವ್ಯಾಪಾರಕ್ಕೆ ತೀವ್ರ ಅಡ್ಡಿಯಾಗಿದ್ದು, ಅಂಗಡಿ ಮಾಲೀಕರು ಆತನು ಎಬ್ಬಿಸಲು ಯತ್ನಿಸಿದಾಗ ಕುಡಿತದ ಅಮಲಿನಲ್ಲಿದ್ದ ಆತ ಅಂಗಡಿ ಮುಂದೆ ಕಾಲ ಮೇಲೆ ಕಾಲು ಹಾಕಿಕೊಂಡು ಮಲಗಿದ್ದಾನೆ.
ಈ ಘಟನೆ ವ್ಯಾಪಾರಸ್ಥರಲ್ಲಿ ಭೀತಿ ಮೂಡಿಸಿದೆ. ಈ ಪರಿಸ್ಥಿತಿಯಿಂದ, ಮಹಿಳೆಯರು ಹಾಗೂ ಮಕ್ಕಳು ಸಾರ್ವಜನಿಕ ರಸ್ತೆಯಲ್ಲಿ ಸಂಚರಿಸಲು ಭಯ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಾರ್ವಜನಿಕರು ಕುಡಕರ ಅಸಭ್ಯ ವರ್ತನೆಗೆ ಬೇಸತ್ತಿದ್ದಾರೆ ಹಾಗೂ ಅಧಿಕಾರಿಗಳ ವೈಫಲ್ಯವನ್ನು ಆಕ್ರೋಶದಿಂದ ಪರಿಗಣಿಸುತ್ತಿದ್ದಾರೆ. ಗಂಭೀರ ವಿಷಯ: ಪಟ್ಟಣದ ಮಧ್ಯಭಾಗದಲ್ಲೇ ಈ ಅಕ್ರಮ ಚಟುವಟಿಕೆಗಳು ನಡೆಯುತ್ತಿದ್ದರೂ, ಪೊಲೀಸ್ ಇಲಾಖೆ ಮತ್ತು ನಗರ ಆಡಳಿತ ಸಂಪೂರ್ಣ ಮೌನ ವಹಿಸಿರುವುದು ಗಮನಾರ್ಹವಾಗಿದೆ. ಯಾವುದೇ ನಿಯಂತ್ರಣ ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕರಲ್ಲಿ ತೀವ್ರ ಅಸಮಾಧಾನವನ್ನು ಹುಟ್ಟುಹಾಕಿದೆ.ಪಟ್ಟಣದ ನಾಗರಿಕರು ತಕ್ಷಣ ಸಂಬಂಧಿಸಿದ ಅಧಿಕಾರಿಗಳು ಎಚ್ಚೆತ್ತುಕೊಂಡು ಕುಡಕರ ಹಾವಳಿಗೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸುತ್ತಿದ್ದಾರೆ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 