ಕಾಗವಾಡದಲ್ಲಿ ಬರ ನಿರ್ವಹಣೆ ಪೂರ್ವಿಭಾವಿ ಸಭೆ; ಜನ-ಜಾನುವಾರಗಳಿಗೆ ನೀರಿನ ಕೊರತೆಯಾಗದಂತೆ ನೋಡಿಕೊಳ್ಳಿ: ರಾಜು ಕಾಗೆ

Drought management pre-planning meeting in Kagawada; Ensure that there is no shortage of water for

ಕಾಗವಾಡದಲ್ಲಿ ಬರ ನಿರ್ವಹಣೆ ಪೂರ್ವಿಭಾವಿ ಸಭೆ; ಜನ-ಜಾನುವಾರಗಳಿಗೆ ನೀರಿನ ಕೊರತೆಯಾಗದಂತೆ ನೋಡಿಕೊಳ್ಳಿ: ರಾಜು ಕಾಗೆ 

ಕಾಗವಾಡ, 26;  ಮತಕ್ಷೇತ್ರದ ಪೂರ್ವ ಭಾಗದ ಅನಂತಪೂರ ಮತ್ತು ಮದಭಾವಿ ಜಿಲ್ಲಾ ಪಂಚಾಯತ ವ್ಯಾಪ್ತಿಯ ಗ್ರಾಮಗಳ ಜನ ಜಾನುವಾರಗಳಿಗೆ ಕುಡಿಯುವ ನೀರಿನ ತೊಂದರೆ ಮತ್ತು ಜಾನುವಾರಗಳಿಗೆ ಮೇವಿನ ಸಮಸ್ಯೆ ಉಂಟಾಗದಂತೆ ನೋಡಿಕೊಳ್ಳಬೇಕೆಂದು ಶಾಸಕ ರಾಜು ಕಾಗೆ ಹೇಳಿದ್ದಾರೆ. 

ಅವರು, ಬುಧವಾರ ದಿ. 26 ರಂದು ಕಾಗವಾಡ ಪಟ್ಟಣದ ವಿದ್ಯಾಸಾಗರ ಶಾಲೆಯ ಸಭಾಭವನದಲ್ಲಿ ಮತಕ್ಷೇತ್ರದ ಗ್ರಾಮಗಳಲ್ಲಿ ಬರ ನಿರ್ವಹನೆಯ ಕುರಿತು ಅಧಿಕಾರಿಗಳೊಂದಿಗೆ ನಡೆದ ಪೂರ್ವಿಭಾವಿ ಸಭೆಯಲ್ಲಿ ಮಾತನಾಡುತ್ತಿದ್ದರು. ಕಾಗವಾಡ ಮತಕ್ಷೇತ್ರದ ಕಾಗವಾಡ ತಾಲೂಕಿನ ಕೆಂಪವಾಡ, ಮಂಗಸೂಳಿ, ಲೋಕೂರು ಗ್ರಾಮಗಳು ಮಾತ್ರ ನೀರಿನ ಸಮಸ್ಯೆ ಎದುರಿಸುವ ಭೀತಿ ಇದ್ದು, ಇನ್ನೂಳಿದಂತೆ ಮತಕ್ಷೇತ್ರದ ಪೂರ್ವ ಭಾಗದ ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಬಹುದು. ಆಯಾ ಗ್ರಾಮ ಅಭಿವೃದ್ಧಿ ಅಧಿಕಾರಿಗಳು ಮತ್ತು ಗ್ರಾಮ ಆಡಳಿತಾಧಿಕಾರಿಗಳು ಗ್ರಾಮಗಳಲ್ಲಿಯ ಬೋರವೆಲ್‌ಗಳನ್ನು ಟ್ಯಾಂಕರ್‌ಗಳನ್ನು ಸುಸ್ಥಿತಿಯಲ್ಲಿಟ್ಟಿರಬೇಕು. ಜಾನುವಾರಗಳಿಗೆ ಮೇವಿನ ಕೊರೆತೆ ಉಂಟಾಗದಂತೆ ಕಾಳಜಿ ವಹಿಸಬೇಕು. ಬರ ನಿರ್ವಹಣೆಯಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ತೋರಬಾರದೆಂದು ಕಡಕ್ ಸೂಚನೆ ನೀಡಿದರು. ಅದರಂತೆ ಮಹಾರಾಷ್ಟ್ರದಿಂದ ಕೃಷ್ಣಾ ನದಿಗೆ 2 ಟಿಎಂಸಿ ನೀರು ಬಿಡಿಸುವ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ, ಕ್ರಮ ಕೈಗೊಳ್ಳಲಾಗುವುದು ಎಂದರು. 

ಕಾರ್ಯಕ್ರಮದಲ್ಲಿ ಅನೇಕ ಅಧಿಕಾರಿಗಳು ಮತ್ತು ಪಿಡಿಓಗಳು ಮಾತನಾಡಿ, ಬರ ನಿರ್ವಹನೆಯ ಸಿದ್ಧತೆಯ ಕುರಿತು ಮಾತನಾಡಿದರು. 

ಕಾರ್ಯಕ್ರಮದಲ್ಲಿ ಅಥಣಿ ತಹಶೀಲ್ದಾರ ಸಿದ್ದು ಭೋಸಗಿ, ಕಾಗವಾಡ ತಹಶೀಲ್ದಾರ ರಾಜೇಶ ಬುರ್ಲಿ, ಅಥಣಿ ಎಓ ಶಿವಾನಂದ ಕಲ್ಲಾಪೂರ, ಕಾಗವಾಡ ಎಓ ವೀರಣ್ಣಾ ವಾಲಿ, ಕುಡಿಯುವ ನೀರು ನೈರ್ಮಲ್ಯ ಇಲಾಖೆಯ ಅಥಣಿ ಉಪ ವಿಭಾಗದ ಎಇಇ ರವೀಂದ್ರ ಮುರಗಾಲಿ, ಉಪತಹಶೀಲ್ದಾರ ರಷ್ಮಿ ಜಕಾತಿ, ಬಿಇಓ ಎಂ.ಆರ್‌. ಮುಂಜೆ, ಸಿಡಿಪಿಓ ಸಂಜೀವಕುಮಾರ ಸದಲಗೆ, ಹೆಸ್ಕಾಂ ಅಧಿಕಾರಿ ದುರ್ಯೋಧನ ಮಾಳಿ, ಪಶು ಇಲಾಖೆಯ ಡಿ.ಜೆ. ಕಾಂಬಳೆ, ನೀರಾವರಿ ಇಲಾಖೆಯ ಪ್ರಶಾಂತ ಪೋತದಾರ, ಕೃಷಿ ಇಲಾಖೆಯ ನಿಂಗನಗೌಡಾ ಬಿರಾದರ ಸೇರಿದಂತೆ ಮತಕ್ಷೇತ್ರದ ಎಲ್ಲ ಗ್ರಾಮ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಆಡಳಿತಾಧಿಕಾರಿಗಳು, ಪುರಸಭೆ/ಪ.ಪಂ. ಮುಖ್ಯಾಧಿಕಾರಿಗಳು, ತಾಲೂಕಿನ ಎಲ್ಲ ಅಧಿಕಾರಿಗಳು ಉಪಸ್ಥಿತರಿದ್ದರು.