ಕ್ಷಯರೋಗ ಚಿಕಿತ್ಸಾ ಆಂದೋಲನ ಕಾರ್ಯಕ್ರಮಕ್ಕೆ ಚಾಲನೆ
ಹಾವೇರಿ02: ನಾಗೇಂದ್ರನಮಟ್ಟಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕ್ಷಯರೋಗ ಪತ್ತೆ ಮತ್ತು ಚಿಕಿತ್ಸಾ ಆಂದೋಲನಕ್ಕೆ ಬುಧವಾರ ಚಾಲನೆ ನೀಡಲಾಯಿತು.
ತಾಲೂಕಾ ಆರೋಗ್ಯಾಧಿಕಾರಿ ಡಾ.ಪ್ರಭಾಕರ ಎಸ್.ಕುಂದೂರ ಅವರು ಮಾತನಾಡಿ, ಸಾಮಾಜಿಕ ಹಾಗೂ ಆಥರ್ಿಕವಾಗಿ ದುರ್ಬಲವರ್ಗದವರನ್ನು ಕೇಂದ್ರೀಕೃತವಾಗಿಸಿಕೊಂಡು ಸಕ್ರೀಯವಾಗಿ ಕ್ಷಯರೋಗ ಪ್ರಕರಣಗಳನ್ನು ಪತ್ತೆ ಹಚ್ಚಿ ಹಾಗೂ ಚಿಕಿತ್ಸೆ ನೀಡುವ ಆಂದೋಲನವನ್ನು ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಒಟ್ಟು 2,25,557 ಜನ ಅಪಾಯ ಅಂಚಿನಲ್ಲಿರುವವರನ್ನು ತಲುಪಲು 605 ತಂಡಗಳು ರಚನೆಮಾಡಲಾಗಿದೆ. ಎ.ಸಿ.ಎಪ್. (ಸಕ್ರೀಯ ಪ್ರಕರಣಗಳನ್ನು ಕಂಡುಹಿಡಿಯುವ ಕುರಿತು) ಆರಂಭಿಕ ಹಂತದಲ್ಲಿ ಪತ್ತೆ ಹಚ್ಚಿ ಚಿಕಿತ್ಸೆ ನೀಡುವ ಧ್ಯೇಯಯೊಂದಿಗೆ ರೋಗಿಗಳ ಜೀವನ ಗುಣಮಟ್ಟವನ್ನು ಸುಧಾರಿಸಬಹುದು. ಇಂದಿನಿಂದ ನಗರದ ನಾಗೇಂದ್ರನಮಟ್ಟಿ, ಹೊಸನಗರ, ವೃದ್ಧಾಶ್ರಮ, ಅನಾಥ ಮಕ್ಕಳು, ಶಿವಾಜಿನಗರ, ನಡುವಿನಮಠದಡ್ಡಿ, ಅಂಬೇಡ್ಕರನಗರ, ಸೂಲಮಟ್ಟಿ ಮುಂತಾದ ಕೊಳಚೆ ಪ್ರದೇಶದಲ್ಲಿ ಕ್ಷಯರೋಗವನ್ನು ಪತ್ತೆಹಚ್ಚುವ ಕಾರ್ಯ ಪ್ರಾರಂಭಿಸಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯರಾದ ಸತೀಶ, ವೆಂಕಟೇಶ ಬಿಜಾಪೂರ, ರವಿ ದೊಡ್ಡಮನಿ, ವೈದ್ಯಾಧಿಕಾರಿ ಡಾ.ಎ.ಆರ್.ಹವಾಲ್ದಾರ, ಡಿ.ಪಿ.ಎಂ.ಓ ಕಛೇರಿ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಮಲ್ಲಿಕಾಜರ್ುನಯ್ಯ, ಮೇಲ್ವಿಚಾರಕರಾದ ಶ್ರೀಮತಿ ನೀಲಾಂಬಿಕಾ ಹಾಗೂ ಲಿಂಗರಾಜ ಸಣ್ಣಕೂಡಲ, ಪಿ.ಎನ್.ಪಾಟೀಲ್, ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳು ಹಾಜರಿದ್ದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 