ಬೆಳಗಾವಿ 21: ಗ್ರಾಮೀಣ ಕ್ಷೇತ್ರದ ಬಡಾಲ ಅಂಕಲಗಿ ಗ್ರಾಮದಿಂದ ನಾಗೇರಹಾಳ ಗ್ರಾಮದವರೆಗೆ ರಸ್ತೆ ಡಾಂಬರೀಕರಣ ಕಾಮಗಾರಿಗೆ ಶುಕ್ರವಾರ, ಶಿವರಾತ್ರಿಯ ಸುಸಂದರ್ಭದಲ್ಲಿ ಚಾಲನೆ ನೀಡಲಾಯಿತು.
ಗ್ರಾಮಸ್ಥರ ಬಹುಕಾಲದ ಬೇಡಿಕೆಯಂತೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ವಿಶೇಷ ಪ್ರಯತ್ನದಿಂದ ಲೋಕೋಪಯೋಗಿ ಇಲಾಖೆಯ ವತಿಯಿಂದ 2.20 ಕೋಟಿ ರೂ. ವೆಚ್ಚದ ಕಾಮಗಾರಿ ಮಂಜೂರಾಗಿದೆ. ಶಾಸಕರ ಅನುಪಸ್ಥಿತಿಯಲ್ಲಿ ವೆಚ್ಚದಲ್ಲಿ ಸ್ಥಳೀಯ ಜನ ಪ್ರತಿನಿಧಿಗಳು, ಗ್ರಾಮಗಳ ಹಿರಿಯರು ಕಾಮಗಾರಿಗೆ ಚಾಲನೆ ನೀಡಿದರು. ಯುವಕಾಂಗ್ರೆಸ್ ಮುಖಂಡ ಚನ್ನರಾಜ ಹಟ್ಟಿಹೊಳಿ, ರಾಮನಗೌಡ ಪಾಟೀಲ, ಅಡಿವೇಶ್ ಇಟಗಿ, ಶ್ರೀಕಾಂತ ಮದುಬರಮನ್ನವರ, ಚಂದ್ರು ಖನಗಾಂವಿ, ಅಜರ್ುನ್ ಅಜರ್ುನವಾಡಿ, ಅಶೋಕ್ ಚಾಪಗಾಂವಿ, ರಾಮಪ್ಪ ಕೊಳಪ್ಪನವರ, ಅಜ್ಜಪ್ಪ ಗೌಡ ಪಾಟೀಲ್, ಬಸವಂತ ನಾಯಕ್, ವಿಠ್ಠಲ ಅಜರ್ುನವಾಡಿ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.