ಪೋಂಡಾದಲ್ಲಿ ಏಕವ್ಯಕ್ತಿ ಶಿಲ್ಪಕಲಾ ಪ್ರದರ್ಶನಕ್ಕೆ ಚಾಲನೆ

ಪೋಂಡಾದಲ್ಲಿ ಏಕವ್ಯಕ್ತಿ ಶಿಲ್ಪಕಲಾ ಪ್ರದರ್ಶನಕ್ಕೆ ಚಾಲನೆ:

ಕಲಾವಿದರು ,ಬರಹಗಾರರು ದೇಶದ ಸಾಂಸ್ಕೃತಿಕ ಪ್ರತಿನಿಧಿಗಳು - ನಾಗರಾಜ ಹರಪನಹಳ್ಳಿ

ಕಾರವಾರ (ಪೋಂಡಾ) : ಕಲಾವಿದರು ,ಬರಹಗಾರರು ದೇಶದ ಸಾಂಸ್ಕೃತಿಕ ಪ್ರತಿನಿಧಿಗಳು ಎಂದು  ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಗರಾಜ ಹರಪನಹಳ್ಳಿ ಅಭಿಪ್ರಾಯ ಪಟ್ಟರು. 

ಪೋಂಡಾದ ಬಾಂಬೋಳಕರ್ ಆರ್ಟ ಗ್ಯಾಲರಿಯಲ್ಲಿ ಕನರ್ಾಟಕ ಸಕರ್ಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದಲ್ಲಿ ಬಾಂಬೋಳಕರ್ ಆರ್ಟ ಗ್ಯಾಲರಿಯಲ್ಲಿ  ರವಿವಾರ ಏರ್ಪಟ್ಟ ಡಾ. ಮಹಾಂತೇಶ್ ಎಂ.ಪಲದಿನ್ನಿ ಅವರ  ಏಕವ್ಯಕ್ತಿ ಶಿಲ್ಪ ಕಲಾ ಪ್ರದರ್ಶನ

 ಮುಖ್ಯ ಅತಿಥಿಯಾಗಿ ಮಾತನಾಡಿದರು.

ಕಲೆ ಪ್ರಕಾರದಲ್ಲಿ ಶಿಲ್ಪಕಲೆ ಅತ್ಯಂತ ಕಠಿಣವಾದುದು. ಏಕಾಗ್ರತೆ ಹಾಗೂ ತಾಳ್ಮೆ  ಕಲಾವಿದನಿಗೆ ಬೇಕು.  ಮತ್ತು ಕಲಾವಿದ ಅತ್ಯಂತ ಸೂಕ್ಷ್ಮ ಕೆತ್ತನೆಗೆ ಕಲ್ಲಿನ ಪ್ರಕಾರವನ್ನು  ಆಯ್ಕೆ ಮಾಡಿಕೊಳ್ಳುವುದು ಸಾಮಾನ್ಯವೇನಲ್ಲ. ಬದಾಮಿ ಚಾಲುಕ್ಯರ ಕಲೆಯ ಬಗ್ಗೆ  ಡಾಕ್ಟರೇಟ್ ಪಡೆದಿರುವ ಮಹಾಂತೇಶ್ ಪಲದಿನ್ನಿ ನಾಡು ಕಂಡ ಅದ್ಭುತ ಕಲಾವಿದ. ಅವರು ಶಿಲ್ಪಕಲೆಯಲ್ಲೇ ಹೊಸ ಪ್ರಯೋಗ ನಡೆಸಿದ್ದಾರೆ. ಚಾಲುಕ್ಯರ ಕಲೆಯನ್ನು ಪ್ರತಿಬಿಂಬಿಸುವ ಮೂಲಕ ನಾಡಿನ ಶಿಲ್ಪಕಲೆಗೆ ಹೊಸ ಛಾಪು ಮೂಡಿಸಿದ್ದಾರೆ. ಹಾಗೆ ನವ್ಯ ಕಲೆ , ಅಮೂರ್ತವಾದುದನ್ನು, ಮನುಷ್ಯನಲ್ಲಿನ ಮೂಲಭೂತ ಬಯಕೆಯಾದ ಕಾಮವನ್ನು ಶಿಲ್ಪಗಳ ಮೂಲಕ ಅಭಿವ್ಯಕ್ತಿಸಿದವರು. ಗೋವಾದ ಪೋಂಡಾದಲ್ಲಿನ ಅವರ ಏಕವ್ಯಕ್ತಿ ಶಿಲ್ಪ ಕಲಾ ಶಿಬಿರ ಮಹತ್ವದ್ದು ಎಂದರು. ಶಿಲ್ಪ ಕಲೆ ಪ್ರದರ್ಶನದ ಮೂಲಕ ಗೋವಾ ,ಕನರ್ಾಟಕದ ಕಲಾವಿದರನ್ನು ಬೆಸೆಯುವ ಕಾರ್ಯವಾಗಿದೆ ಎಂದರು.


ಕಲೆ ಮತ್ತು ಕಲಾವಿದರು ದೇಶದ ಸಂಸ್ಕೃತಿಯನ್ನು ಪ್ರತಿನಿಧಿಸುತ್ತಾರೆ ಎಂದು ಬರಹಗಾತರ್ಿ ಹಾಗೂ ಚಿತ್ರ ನಿಮರ್ಾಪಕಿ ಜ್ಯೋತಿ ಕಂಕೋಲಿಕರ್ ಅಭಿಪ್ರಾಯಪಟ್ಟರು.

ಅವರು ಶಿಲ್ಪಕಲಾ ಶಿಬಿರ  ಉದ್ಘಾಟಿಸಿ ಮಾತನಾಡಿದರು.ಕಲಾವಿದ ಎಂದೂ ಹತಾಶನಾಗಲಾರ. ಕಲೆಗೆ ಮರಣವಿಲ್ಲ. ಕಲೆ ,ಶಿಲ್ಪ ಕಲೆ ಆ ದೇಶದ ಔನ್ನತ್ಯವನ್ನು ಪ್ರತಿ ಬಿಂಬಿಸುತ್ತವೆ. ಡಾ.ಮಹಾಂತೇಶ್ ಶಿಲ್ಪಕಲೆಯಲ್ಲಿ ಪರಂಪರೆಯನ್ನು ಉಳಿಸುವ ಮೂಲಕ ದೇಶದ ಶಿಲ್ಪ ಕಲೆಗೆ ಗೌರವ ತಂದಿದ್ದಾರೆ ಎಂದರು. ಪೋಷಕರು ಮಕ್ಕಳಿಗೆ ಸ್ವಾತಂತ್ರ್ಯ ನೀಡದೆ, ಕೇವಲ ಓದಿನ ಕಡೆಗೆ ಗಮನ ಕೇಂದ್ರೀಕರಿಸಲು ಒತ್ತಾಯಿಸುತ್ತಾರೆ. ಇದು ಹಲವು ಸಲ ಮಕ್ಕಳು ಹೆಚ್ಚಿನ ಅಂಕಗಳಿಸಿದರೂ ವಯಕ್ತಿಕ ಬದುಕಿನಲ್ಲಿ ಹತಾಶರಾಗುತ್ತಾರೆ. ಆದರೆ ಕವಿ,ಕಲಾವಿದರು ಬದುಕಿನಲ್ಲಿ ಸೋಲುವುದು ಕಡಿಮೆ ಎಂದರು.ಮಕ್ಕಳನ್ನು ಸೇಜನಶೀಲ ಕಲೆಯತ್ತ ಪ್ರೋತ್ಸಾಹಿಸಬೇಕೆಂದರು.

ಮೇಲಾಗಿ ಇಂದಿನ ಯುವಕರು ಭವಿಷ್ಯ ಆಯ್ಕೆಯಲ್ಲಿ ಜಾಣರಾಗಿದ್ದು, ಆತ್ಮವಿಶ್ವಾಸ ಹೊಂದಿದವರಾಗಿದ್ದಾರೆ ಎಂದರು. 


ಆರಂಭದಲ್ಲಿ ಮಾತನಾಡಿದ ಕಲಾವಿದ, ಪ್ರಖ್ಯಾತ ನಾಟಕ ರಚನಾಕಾರ ಶ್ರೀಧರ ಕಾಮತ ಬಾಂಬೋಳಕರ್ ಕನರ್ಾಟಕ ಸಕರ್ಾರ ಕಲೆ ಮತ್ತು ಸಂಸ್ಕೃತಿಗೆ  ತುಂಬಾ ಪ್ರೋತ್ಸಾಹ ನೀಡುತ್ತಿದೆ. ಶಿಲ್ಪಕಲೆ ಪ್ರದರ್ಶನ ಶಿಬಿರ ಅತ್ಯಂತ ಮಹತ್ವದ್ದು. ಇಲ್ಲಿನ ಲಜ್ಜಾಗೌರಿ ಶಿಲ್ಪ ನನ್ನ ಮನಗೆದ್ದಿದೆ.ನಟರಾಜ, ಗಣೇಶ, ವರಹ ವಿಷ್ಣು, ವಿಶಿಷ್ಟ ಹನುಮನ ಶಿಲ್ಪ ಅದ್ಭುತವಾಗಿವೆ ಎಂದರು. ಶಿಲ್ಪಕಲೆ ಪ್ರದರ್ಶನ ಉದ್ಘಾಟನಾ ಸಮಾರಂಭದಲ್ಲಿ ಕಲಾವಿದರಾದ  ಜೋತ್ಸ್ನಾ ಭಟ್, ಬದಾಮಿಯ ಕಲಾವಿದ ಎಂ.ಎಸ್.ಪಾಟೀಲ್ ,ಶಿವಾನಂದ ಬಡಿಗೇರ, ರಾಮ್ ಭಟ್ ಸೇರಿದಂತೆ ಗಣ್ಯರು ,ಯುವ ಕಲಾವಿದ ಟಿಕ್ಕಾ ಮರಾಠೆ, ಯುವ ಲೇಖಕಿ ಸಂಪದಾ ಕುಂಕೊಳಕರ್ ಸೇರಿದಂತೆ ಹಲವು ಯುವಕಲಾವಿದರು  ಉಪಸ್ಥಿತರಿದ್ದರು. ಏಕವ್ಯಕ್ತಿ ಶಿಲ್ಪಕಲೆ ಶಿಬಿರ ಪೋಂಡಾದಲ್ಲಿ ಮೂರು ದಿನಗಳ ಕಾಲ ಕಲಾಸಕ್ತರಿಗೆ ತೆರೆದುಕೊಳ್ಳಲಿದೆ.