ಸಾರಾಯಿ ಕುಡಿಯೊದು ಸಾಮಾಜಿಕ ಸ್ವಾಸ್ತ್ಯಕ್ಕೆ ಮಾರಕ: ರಾಘವೇಂದ್ರ ಪಾಲನಕರ
Drinking beer harmful to social welfare: Raghavendra Palanakar
ಸಾರಾಯಿ ಕುಡಿಯೊದು ಸಾಮಾಜಿಕ ಸ್ವಾಸ್ತ್ಯಕ್ಕೆ ಮಾರಕ: ರಾಘವೇಂದ್ರ ಪಾಲನಕರ
ಗದಗ 12:ಇಂದು ಅವಳಿ ನಗರವಾದಗದಗ ಬೆಟಗೇರಿ ನಗರಕ್ಕೆ ಆಗಮಿಸಿದ ಸಂಸದ ಹಾಗೂ ಮಾಜಿ ಉಪಮುಖ್ಯಮಂತ್ರಿಗೋವಿಂದ ಕಾರಜೋಳ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದಅವರು ಆಡಳಿತಾರೂಢ ಘನ ಕಾಂಗ್ರೇಸ್ ಸರಕಾರವನ್ನುಟೀಕೀಸುವ ಭರದಲ್ಲಿರಾಜ್ಯದಲ್ಲಿಅಭಿವೃದ್ಧಿಯಕೊರತೆ, ಅಗತ್ಯ ವಸ್ತುಗಳ ಬೆಲೆ ಏರಿಕೆ, ಕುರಿತಾಗಿ ಮಾತನಾಡುತ್ತಾಸಾರಾಯಿಕುಡಿಯೋರ್ ಶಾಪಾ ಹಾಕಾಕತ್ತಾರಎಂದು ನುಡಿದು ಪರೋಕ್ಷವಾಗಿಕುಡಿತದದುಶ್ಚಟಕ್ಕೆ ಪ್ರಚೋದನೆ ನೀಡಿದಂತೆ ನುಡಿದಿರುವದು ಸಾಮಾಜಿಕ ಸ್ವಾಸ್ತ್ಯಕ್ಕೆ ಮಾರಕವಾಗಿದೆಎಂದು ನ್ಯಾಯವಾದಿ ಹಾಗೂ ಸಾಮಾಜಿಕಕಾರ್ಯಕರ್ತರಾದರಾಘವೇಂದ್ರ ಪಾಲನಕರರವರು ಹಾಲಿ ಸಂಸದರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುತ್ತಾರೆ. ನಾಡಿನ ಉಪಮುಖ್ಯಮಂತ್ರಿಗಳಾಗಿ ಕಾರ್ಯನಿರ್ವಹಿಸಿದಂತಹ ಹಾಗೂ ಸಾಮಾಜಿಕ ಹಾಗೂ ರಾಜಕೀಯಕ್ಷೇತ್ರದಲ್ಲಿ ಮಹೋನ್ನತ ಹುದ್ದೆಯನ್ನಲಂಕರಿದ ಸಂಸದರು ಬಹಿರಂಗ ಸುದ್ದಿಗೋಷ್ಠಿಯಲ್ಲಿ ಈ ರೀತಿಯಅವೈಜ್ಞಾನಿಕ ಹೇಳಿಕೆಯನ್ನು ನೀಡಿರುವದು ವಿಷಾದನೀಯವಾಗಿದೆಂದರು.
ಸಾಮಾಜಿಕ ಸ್ವಾಸ್ತ್ಯಕ್ಕೆ ಮತ್ತುಅರೋಗ್ಯ ಹಿತದೃಷ್ಟಿಯಿಂದ ಮಾರಕವಾದ ಸಾರಾಯಿಕುಡಿದುಅನಾರೋಗ್ಯ ಪೀಡಿತರಾಗಿಕುಟುಂಬವನ್ನು ಬೀದಿ ಪಾಲು ಮಾಡುವ ಸಾರಾಯಿ ದರಗಳನ್ನು ಏರಿಸುವ ಮೂಲಕ ಜನಸಾಮಾನ್ಯರುಅರೋಗ್ಯ ಭಾಗ್ಯವನ್ನು ಕಾಯ್ದುಕೊಳ್ಳುವ ಮಹೋನ್ನತಉದ್ದೇಶದೊಂದಿಗೆ ಸಾಮಾಜಿಕ ಸ್ವಾಸ್ತ್ಯಕ್ಕೆ ಮಾರಕವಾದ ಸಾರಾಯಿ ಉತ್ಪನ್ನಗಳ ಬೆಲೆಗಳನ್ನು ಏರಿಕೆ ಮಾಡಿ, ಕುಟುಂಬ ಜೀವನ ಶೈಲಿಯಲ್ಲಿ ಬದಲಾವಣೆಯ ಭಾಗ್ಯವನ್ನುಘನ್‌ಕಾಂಗ್ರೇಸ್ ಸರಕಾರ ಒದಗಿಸಿಕೊಟ್ಟಿರುವದು. ಅದರಂತೆ ಸಮಸ್ತ ನಾಡಿನ ಬಡಕುಟುಂಬದ ಸಂರಕ್ಷಣೆಯ ಮೂಲೋದ್ದೇಶದೊಂದಿಗೆ ಆಡಳಿತಾ ರೂಢಘನ್‌ಕಾಂಗ್ರೇಸ್ ಸರಕಾರವು ಪ್ರತಿಯೊಂದು ಬಡ ಕುಟುಂಬಗಳಿಗೂ ನೆರವುದಾಯಕವಾಗುವಂತಹ ಪಂಚ ಗ್ಯಾರಂಟಿ ಯೋಜನೆಗಳಾದ ಗ್ರಹಲಕ್ಷ್ಮೀಯೋಜನೆ, ಅನ್ನ ಭಾಗ್ಯಯೋಜನೆ, ಗ್ರಹಜ್ಯೋತಿಯೋಜನೆ, ಸ್ತ್ರೀ ಶಕ್ತಿ ಯೋಜನೆ, ಹಾಗೂ ಯುವ ನಿಧಿ ಯೋಜನೆಗಳನ್ನು ಅನುಷ್ಠಾನಗೊಳಿಸುವ ಮೂಲಕ ಸಮಸ್ತ ನಾಡಿನ ಬಡಕುಟುಂಬದ ಸಂರಕ್ಷಣೆ ಹಾಗೂ ಸಮಸ್ತ ಮಹಿಳೆಯರ ಸಬಲೀಕರಣಕ್ಕೆ ನಾಂದಿಯಾಗುವ ಮೂಲಕ ಕುಟುಂಬದಗ್ರಹಿಣಿಯರು ಆಡಳಿತಾರೂಢ ಘನ್‌ರಾಜ್ಯ ಸರಕಾರಕ್ಕೆ ಹಾಗೂ ಜನಸ್ಪಂಧನೆಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ನವರಿಗೆ ಮತ್ತು ಉಪಮುಖ್ಯಮಂತ್ರಿಗಳಾದ ಡಿ ಕೆ ಶಿವಕುಮಾರ್ ರವರಿಗೆನಾಡಿನಗ್ರಹಿಣಿಯರು ಶುಭ ಹಾರೈಸಾಕತ್ತಾರ್‌ಎಂಬುದನ್ನು ಅಲ್ಲಗಳೆಯುವಂತಿಲ್ಲ ಎಂದು ನ್ಯಾಯವಾದಿ ಹಾಗೂ ಸಾಮಾಜಿಕಕಾರ್ಯಕರ್ತರಾದರಾಘವೇಂದ್ರ ಪಾಲನಕರರವರು ಹೇಳಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 