ನಾಟಕಗಳು ಜೀವನದ ಪ್ರತಿರೂಪಗಳು: ಶಿಂಧೆ

ಧಾರವಾಡ 17: ನಾಟಕಗಳು ಜೀವನದ ಪ್ರತಿರೂಪಗಳಾಗಿ ಸತ್ಯವನೇ ಹೇಳುತ್ತವೆ. ಹಾಗೂ ಜೀವನದ ಏರು ಪೇರುಗಳನ್ನು ತಿದ್ದಲು  ಮಾರ್ಗದರ್ಶಕಗಳಾಗಿವೆ ಎಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಮಾಜಿ ಸದಸ್ಯ ಸುಭಾಷ ಶಿಂಧೆ ಹೇಳಿದರು.

ರಂಗಾಯಣ ಸಮುಚ್ಚಯ ಭವನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಸಿಲ್ವರ್ ಲೈನಿಂಗ್ ಸೋಶಿಯಲ ವೆಲ್ಫೇರ್ ಟ್ರಸ್ಟ ಸಹಯೋಗದಲ್ಲಿ ಆಯೋಜಿಸಿದ ಸಂಕ್ರಾಂತಿ ಸಂಭ್ರಮ -2020 ನಾಟಕೋತ್ಸವವನ್ನು ವಾದ್ಯ ಬಾರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. 

 ಮುಖ್ಯ ಅತಿಥಿಗಳಾಗಿ ಆಗಮಿಸಿದ ದಾನಪ್ಪ ಕಬ್ಬೇರ ಮಾತನಾಡುತ್ತಾ ಶಿಕ್ಷಣ ಕೇವಲ ಅಂಕಗಳಿಗೆ ಸಿಮಿತವಾಗಿರದೆ ಇಂತಹ ಚಟುವಟಿಕೆಗಳಲ್ಲಿ  ಭಾಗವಹಿಸುದರಿಂದ ಮಗುವಿನ ಸವರ್ಾಂಗೀನ ಅಭಿವೃದ್ಧಿಗೆ ಸಹಾಯಕವಾಗಿದೆ ಎಂದು ಹೇಳಿದರು.

 ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ ಶಂಕರ ಹಲಗತ್ತಿಯವರು ಮಾತನಾಡುತ್ತ ರಂಗಭೂಮಿಯು ಕಲಿಕೆಯನ್ನು ಹುಟ್ಟುಹಾಕಿ ಯುವ ಪೀಳಿಗೆಗೆ ತಮ್ಮ ಪ್ರತಿಭೆಯನ್ನು ತಿಳಿಯಲು ಸಹಕಾರಿಯಾಗಿದೆ. ಈ ರೀತಿಯಾಗಿ ಸಾಂಸ್ಕೃತಿಕ ನಗರಿ ಎಂದು ಹೆಸರುವಾಸಿಯಾದ ಧಾರವಾಡ ಕ್ಷೇತ್ರದಲ್ಲಿ ನಿರಂತರವಾಗಿ ಚಟುವಟಿಕೆ ನಡೆಯುವುದು ಅವಶ್ಯಕವಾಗಿದೆ ಅಲ್ಲದೆ ಪ್ರಸ್ತುತ ಸಂದರ್ಭದಲ್ಲಿ ಅಧ್ಯಯನಕ್ಕೆ ಒಳಪಡುವ ವಿಷಯಗಳೆಂದರೆ ರಂಗಭೂಮಿ ಮತ್ತು ಶಿಕ್ಷಣ. ಯುವ ಪೀಳಿಗೆಯಿಂದಲೆ ರಂಗಭೂಮಿ ಬೆಳೆಯಬೇಕಾಗಿದೆ. ರಂಗಭೂಮಿ ಜೀವನ ಕ್ರಿಯೆಗಳಿಂದ ಹುಟ್ಟಿರುವಂತಹದ್ದು. ಆ ಕ್ರಿಯೆಗಳ ನಾಗರಿಕತೆಯಿಂದ ಹುಟ್ಟಿ ಬಂದಿರುವುದೇ ಶಿಕ್ಷಣ. ರಂಗಭೂಮಿಯ ಉದ್ದೇಶ ಪ್ರಾರಂಭಿಕ ಹಂತದಲ್ಲಿ ಮನರಂಜನೆಗೆ ಮಾತ್ರ ಸೀಮಿತವಾಗಿತ್ತು. ಈಗ ಶಿಕ್ಷಣ ಕ್ಷೇತ್ರಕ್ಕೂ ವ್ಯಾಪಿಸಿದೆ ಎಂದು ಹೇಳಿದರು.

ಕೊನೆಯಲ್ಲಿ ಯುವ ನಿರ್ದೇ ಶಕ ಸಿಕಂದರ ದಂಡಿನ ಇವರ ನಿರ್ದೇ ಶನದಲ್ಲಿ ಊರುಭಂಗ ಹಾಗೂ ಮಾಡಬಾರ್ದ ಮಾಡಿದರ ಆಗಬಾರ್ದ ಅಕ್ಕೆತಿ ಎನ್ನುವ ಎರಡು ನಾಟಕಗಳು ಅದ್ಭುತವಾಗಿ ಮೂಡಿಬಂದವು. ಮಾಡಬಾರ್ದ ಮಾಡಿದರ ಆಗಬಾರ್ದ ಅಕ್ಕೆತಿ ನಾಟಕವು ಪ್ರೇಕ್ಷಕರನ್ನು ಹೊಟ್ಟೆ ಹುಣ್ಣಾಗಿಸುವಂತೆ ನಗಿಸಿತು. ಪ್ರಸ್ತುತ ಸಂದರ್ಭದಲ್ಲಿ ವಯಸ್ಸಾದ ತಂದೆತಾಯಂದಿರು ಅನುಭವಿಸುವ ಸಂಕಷ್ಟಗಳನ್ನು ಎತ್ತಿತೋರಿಸುತ್ತದೆ. ವಯಸ್ಸಾದ ತಂದೆ ತಾಯಂದಿರನ್ನು ವೃದ್ದಾಶ್ರಮದಲ್ಲಿ ಇಡುವ ದೃಶ್ಯ ಪ್ರೇಕ್ಷಕರಲ್ಲಿ ಕಣ್ಣೀರು ಬರಿಸುವಂತೆ ಮಾಡಿತು.

ಕಾರ್ಯಕ್ರಮದಲ್ಲಿ ಸಮಾಜಸೇವಕ ಗುರುರಾಜ ಹೂಗಾರ ಮತ್ತು ಸೋಮಶೇಖರ ಕಲ್ಲೂರ ಇವರಿಗೆ ಗೌರವ ಸನ್ಮಾನವನ್ನು ಮಾಡಲಾಯಿತು. ಮುಖ್ಯ ಅತಿಥಿಗಳಾಗಿ ರಾಘವೇಂದ್ರ ಉಳ್ಳಿಕಾಶಿ ಆಗಮಿಸಿದ್ದರು. ಡ್ಯಾನಿಯಲ್ ದಾರಾ, ಸಿಕಂದರ ದಂಡಿನ ಹಾಗೂ ಚಿದಾನಂದ ಭಜಂತ್ರಿ, ಅಲ್ಲಾಭಕ್ಷ ಮಕಾನದಾರ ಹಾಗೂ  ಮುತ್ತು ಹಿರೇಮಠ ಉಪಸ್ಥಿತರಿದ್ದರು. ಪ್ರಾರ್ಥನೆಯನ್ನು ಜೀ ಕನ್ನಡದ ಸರಿಗಮಪದ ಖ್ಯಾತ ಗಾಯಕಿ ಸಾಕ್ಷಿ ಕಲ್ಲೂರ ಮಾಡಿದರು.  ಶೃತಿ ಹುರುಳಿಕೊಪ್ಪ ಸ್ವಾಗತಿಸಿದರು, ಚಂದ್ರಶೇಖರ ಕುಂಬಾರ ವಂದಿಸಿದರು. ಶಶಿರೇಖಾ ಚಕ್ರಸಾಲಿ ನಿರೂಪಿಸಿದರು.