ನಾಟಕ ಕಲೆ ಒಂದು ನೈಜಕಲೆಯಾಗಿದ್ದು, ಸಮಾಜದ ಅಂಕ ಡೊಂಕುಗಳನ್ನು ತಿದ್ದುವ ಶಕ್ತಿ ಅದಕ್ಕಿದೆ: ಡಾ.ನಿತಿನಚಂದ್ರ ಹತ್ತಿಕಾಳ

ನಾಟಕ ಕಲೆ ಒಂದು ನೈಜಕಲೆಯಾಗಿದ್ದು, ಸಮಾಜದ ಅಂಕ ಡೊಂಕುಗಳನ್ನು ತಿದ್ದುವ ಶಕ್ತಿ ಅದಕ್ಕಿದೆ: ಡಾ.ನಿತಿನಚಂದ್ರ ಹತ್ತಿಕಾಳ Drama is a true art form and has the power to correct the flaws in society: Dr. Nitinachandra Chati


                 ಧಾರವಾಡ 22: ನಾಟಕಗಳು ನಮ್ಮ ಬದುಕಿನಕನ್ನಡಿ, ನಾಟಕ ಕಲೆ ಒಂದು ನೈಜಕಲೆಯಾಗಿದ್ದು, ಸಮಾಜದ ಅಂಕ ಡೊಂಕುಗಳನ್ನು ತಿದ್ದುವ ಶಕ್ತಿ ಅದಕ್ಕಿದೆಎಂದು ನಗರದ ವೈದ್ಯರಾದ ಡಾ.ನಿತಿನಚಂದ್ರ ಹತ್ತಿಕಾಳ ಅಭಿಪ್ರಾಯಪಟ್ಟರು. ಅವರುಕರ್ನಾಟಕ ವಿದ್ಯಾವರ್ಧಕ ಸಂಘವು ರಾಜ್ಯೋತ್ಸವ ಅಂಗವಾಗಿ ಆಯೋಜಿಸಿದ್ದ ಹತ್ತು ದಿನಗಳ ನಾಟಕೋತ್ಸವಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು. 

ಇಂದಿನ ಆಧುನಿಕತೆಯ ಭರಾಟೆಯಲ್ಲಿ ಸಿನಿಮಾ ಹಾಗೂ ದೂರದರ್ಶನದ ಪ್ರಭಾವದಿಂದ ನಾಟಕ ಪ್ರದರ್ಶನ ಕ್ಷೀಣಿಸಿದಂತೆ ಕಂಡರೂ, ಪ್ರೇಕ್ಷಕರಲ್ಲಿ ನಾಟಕ ನೋಡುವ ಹವ್ಯಾಸ ಮಾತ್ರಕಡಿಮೆಯಾಗಿಲ್ಲ. ನಮ್ಮ ಸಂಸ್ಕೃತಿ ಪರಂಪರೆಯ ಪ್ರತೀಕವಾದ ನಾಟಕಗಳು ನಮ್ಮ ಸಮಾಜದದೈನಂದಿನ ಸಮಸ್ಯೆಗಳನ್ನೇ ಆಧಾರವಾಗಿ ಪ್ರದರ್ಶನ ಮಾಡುತ್ತಾರೆ.ಇಂತಹಜೀವಂತ ಹಾಗೂ ಸಮಗ್ರಕಲೆಯನ್ನು ನಾವೆಲ್ಲ ನಾಟಕ ನೋಡುವುದರ ಮೂಲಕ ಕಲೆ ಕಲಾವಿದರ ಬದುಕು ಹಸುನಾಗುವಂತೆ ಮಾಡಬೇಕೆಂದು ಹೇಳಿದರು. 

ಕನ್ನಡ ಹಾಗೂ ಸಂಸ್ಕೃತಿಇಲಾಖೆಯಜಂಟಿ ನಿರ್ದೇಶಕರಾದ ಕೆ.ಎಚ್‌.ಚೆನ್ನೂರರಂಗಕಲಾವಿದರನ್ನು ಗೌರವಿಸಿ ಮಾತನಾಡಿ, ಕವಿವ ಸಂಘ ರಾಜ್ಯೋತ್ಸವ ನಿಮಿತ್ತಇಡೀ ತಿಂಗಳು ಕಾರ್ಯಕ್ರಮ ಆಯೋಜಿಸಿದ್ದು ಶ್ಲಾಘನೀಯ.ಪದಾಧಿಕಾರಿಗಳೆಲ್ಲ ಕನ್ನಡದರಥವನ್ನು ಸಂಘಕ್ಕೆ ಚ್ಯುತಿ ಬಾರದಂತೆ ಎಳೆಯುತ್ತಿರುವುದು ಅಭಿನಂದನೀಯ.ಕವಿವ ಸಂಘವು ತಾಯಿ ಭುವನೇಶ್ವರಿಯ ಸ್ವರೂಪವಿದ್ದಂತೆಎಂದು ಹೇಳಿದರು.  

ಬೆಳಗಾವಿಯ ರವಿ ಕೋಟಾರಗಸ್ತಿ ಹಾಗೂ ಕದಮನಹಳ್ಳಿಯ ಮಂಜುಳಾ ಕರೆಗೌಡ್ರುರಂಗ ಸನ್ಮಾನ ಸ್ವೀಕರಿಸಿ, ಕವಿವ ಸಂಘ ನಮ್ಮ ಕಲಾ ಸೇವೆಯನ್ನುಗುರುತಿಸುವಕಾರ್ಯಅಭಿನಂದನೀಯ ಹಾಗೂ ನಮ್ಮ ಭಾಗ್ಯಎಂದು ಹೇಳಿದರು. 

ವೇದಿಕೆಯ ಮೇಲೆ ಕವಿವ ಸಂಘದಅಧ್ಯಕ್ಷರಾದಚಂದ್ರಕಾಂತ ಬೆಲ್ಲದಇದ್ದರು. ವೀರಣ್ಣಒಡ್ಡೀನ ಸ್ವಾಗತಿಸಿದರು.ಶಂಕರ ಹಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಡಾ ಶೈಲಜಾಅಮರಶೆಟ್ಟಿ ನಿರೂಪಿಸಿದರು. ಶಿವಾನಂದ ಭಾವಿಕಟ್ಟಿ ವಂದಿಸಿದರು. 

ಬಸವಪ್ರಭು ಹೊಸಕೇರಿ, ಸತೀಶತುರಮರಿ, ಶಂಕರ ಕುಂಬಿ, ಎಂ.ಎಂ.ಚಿಕ್ಕಮಠ, ಈರಣ್ಣ ನವಲಗುಂದ, ಎಸ್‌. ಎಮ್‌.ದಾನಪ್ಪಗೌಡರ, ಭೀಮಪ್ಪಖಟಾವಿ, ಬಿ. ಆಯ್‌. ಈಳಿಗೇರ ಸೇರಿದಂತೆ ಮುಂತಾದವರಿದ್ದರು 

ಕೊನೆಯಲ್ಲಿಡಾ ಪ್ರಕಾಶ್‌ಗರುಡ ನಿರ್ದೇಶನದಕಲ್ಲು ಬೆಳೆಯುವ ಕಥೆ ನಾಟಕ ಗೊಂಬೆ ಮನೆ ಧಾರವಾಡಅವರು ಪ್ರದರ್ಶನ ಗೊಳಿಸಿದರು.