ಕನ್ನಡ ಸಾಹಿತ್ಯಕ್ಕೆ ಜೈನರ ಕೊಡುಗೆ ಅಪಾರ ಡಾ ಕೆ ರವೀಂದ್ರನಾಥ
ಹೂವಿನ ಹಡಗಲಿ 16 : ಪ್ರಾಚೀನ ಕನ್ನಡ ಸಾಹಿತ್ಯಕ್ಕೆ ಜೈನರ ಕೊಡುಗೆ ಅಪಾರ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಡಾ ಕೆ ರವೀಂದ್ರನಾಥ ಅಭಿಪ್ರಾಯ ವ್ಯಕ್ತಪಡಿಸಿದರು.ಪಟ್ಟಣದ ಗವಿಸಿದ್ದೇಶ್ವರ ಶಾಖಾ ಮಠದಲ್ಲಿ 30 ನೇ ವರ್ಷದ ಜಾತ್ರಾ ಮಹೋತ್ಸವದಲ್ಲಿ ಶನಿವಾರ ಕವಯಿತ್ರಿ ನಾಗಮಂಜುಳಾ ಜೈನ್ ರವರ 108 ಭಕ್ತಿ ಗೀತೆಗಳ "ಜಿನಗಾನ"ಕಾವ್ಯ ಕೃತಿ ಬಿಡುಗಡೆ ಮಾಡಿ ಅವರು ಮಾತನಾಡಿದರು.ಜೈನರು ಕನ್ನಡ ಕಾವ್ಯ ಪರಂಪರೆಯ ಮೊದಲಿಗರು. ಎಲ್ಲಾ ಕಾವ್ಯ ಪ್ರಕಾರವನ್ನು ಹೆಚ್ಚು ಶ್ರೀಮಂತಗೊಳಿಸಿದ್ದಾರೆ.ಛಂದೋಂಬುಂಧಿ, ಶಬ್ದಮಣಿ ದರ್ಣ, ಶಬ್ದಸ್ಮೃತಿ, ವಸ್ತುಕೋಶ, ಗಜಶಾಸ್ತ್ರ, ಗಣಿತಶಾಸ್ತ್ರಗಳಂತ ಶಾಸ್ತ್ರ ಕೃತಿಗಳನ್ನು ರಚಿಸಿದ್ದಾರೆ ಎಂದರು.ಭರತೇಶ ವೈಭವ, ಸಮ್ಯುಕ್ತಕೌಮುದಿ, ವಜ್ರಕುಮಾರ ಚರಿತೆ ಸಾಂಗತ್ಯ ಪ್ರಕಾರಗಳಿಂದ ದೇಶಿ ಪರಂಪರೆ ಬೆಳೆಸಿದ್ದಾರೆ. ಜೈನ ಕವಿಗಳು ರಾಗ ತಾಳ ಬದ್ಧವಾದ ಹಾಡುಗಳನ್ನು ಬರೆದಿದ್ದಾರೆ ಎಂದು ತಿಳಿಸಿದರು."ಜಿನಗಾನ" ಕೃತಿಯಲ್ಲಿ ಕವಯಿತ್ರಿ ನಾಗಮಂಜುಳಾ ಜೈನ್ 108 ಜೈನ ಸಂಸ್ಕೃತಿ ಚಿಂತನೆ ಹೆಚ್ಚಿಸುವ ನಿಟ್ಟಿನಲ್ಲಿ ಕಾವ್ಯ ರಚಿಸಿರುವುದು ವಿಶೇಷ ಎಂದು ಬಣ್ಣಿಸಿದರು.ಕವಯಿತ್ರಿ ನಾಗಮಂಜುಳಾ ಜೈನ್ ಇದು ನನ್ನ ಮೊದಲ ಕಾವ್ಯ ಕೃತಿ. ಸಹೃದಯಿ ಓದುಗರು ಕೃತಿ ಓದಿ ಹರಿಸಿ ಎಂದರು.ಮ ನಿ ಪ್ರ ನಿರಂಜನ ಪ್ರಭು ಮಹಾಸ್ವಾಮಿಗಳು ಗರಗ ನಾಗಲಾಪುರ ಅಧ್ಯಕ್ಷತೆ ವಹಿಸಿದ್ದರು. ಗವಿಮಠದ ಡಾ ಹಿರಿಶಾಂತವೀರ ಮಹಾಸ್ವಾಮಿಗಳು ಉಪಸ್ಥಿತರಿದ್ದರು.ಪದ್ಮಾವತಿ ದೇವೇಂದ್ರ್ಪ ಜೈನ್, ಜ್ವಾಲಾಮಾಲಿನಿ ಮಹಿಳಾ ಸಂಘದ ಎಂ ಡಿ ಪದ್ಮಾವತಿ ಇತರರು ಹಾಜರಿದ್ದರು.ಗುರುರಕ್ಷೆ: ಕೊಪ್ಪಳದ ರಥ ಶಿಲ್ಪಿಡಾ ಯಲ್ಲಪ್ಪ ಜಿ ಬಡಿಗೇರ,ಕಿನ್ನಾಳದ ಮರಿಯಪ್ಪ ದಾನಪ್ಪ ಅಂಬಿಗೇರ, ಪ್ರಾಂಶುಪಾಲ ಎಂ ಈಶ್ವರ ಸಾಧಕರಿಗೆ ಗುರುರಕ್ಷೆ ನೀಡಿ ಸತ್ಕರಿಸಲಾಯಿತು.ನಾಗವೇಣಿ, ಎಚ್ ಎಂ ಜ್ಯೋತಿ,ಸವಿತಾ ಕುಂಬಾರಿ ನಿರ್ವಹಿಸಿದರು.