ಡಾ.ವಸುಧಾ ಕಾಮತರ ಹಿಂದಿ ಕವನ ಸಂಕಲನ ವಿಶ್ವ ದಾಖಲೆಗೆ ಅರ್ಹ

ಬೈಲಹೊಂಗಲ- ರಾಷ್ಟ್ರದ ರಾಜದಾನಿ ನ್ಯೂದಿಲ್ಲಿಯ ಮಗವಾ ಪ್ರದೇಶದ ಮಂಜಿಲ್ ಗ್ರುಪ್ ಸಾಹಿತ್ಯಕ ಮಚ್ ಹಿಂದಿ ಸಂಘದವರು ಏರ್ಪಡಿಸಿದ ಹಿಂದಿ ಸಾಹಿತ್ಯ ಮೇಳಾವದಲ್ಲಿ ಪಟ್ಟಣದ ಹೊಸೂರ ಕೆ.ಆರ್.ಸಿ.ಇ.ಎಸ್. ಇಂಗ್ಲಿಷ್ ಮಾಧ್ಯಮ ಶಾಲೆಯ ಹಿಂದಿ ಶಿಕ್ಷಕಿ ಹಾಗೂ ಎನ್ಸಿಸಿ ಥರ್ಡ ಆಪೀಸರ್ ಡಾ.ವಸುಧಾ ಪುರುಷೋತ್ತಮ ಕಾಮತ (ಗಿಂಡೆ) ಅವರು ಬರೆದ "ಮಾ" ಕವನ ಎಕ ಶ್ಯಾಮ್ ಮಾ ಕೆ ನಾಮ್ ಎಂಬ ಹಿಂದಿ ಕವನ ಸಂಕಲನದ ಪುಸ್ತಕವು ವಿಶ್ವ ದಾಖಲೆಗೆ ಅರ್ಹವಾಗಿದೆ.

    ದೇಶಾಧ್ಯಂತ ಬರೆದು ಕಳುಹಿಸಿದ ಸಾವಿರಾರು ಕವಿಗಳಲ್ಲಿ ಸುಮಾರು 5678 ಕವನಗಳಲ್ಲಿ ಇವರು ಬರೆದ ಕವನವೂ ಆಯ್ಕೆಯಾಗಿದೆ.  ಅಹಿಂದಿ ಪ್ರದೇಶದ ಜನರಿಗೆ ಹೆಚ್ಚಿನ ಅದ್ಯತೆ ನೀಡುವ ನಿಟ್ಟಿನಲ್ಲಿ ಈ ಭಾಗದಲ್ಲಿ ಇವರು ಸೂಕ್ತವೆಂದು ಸಂಸ್ಥೆ ಗೌರವ ನೀಡಿ ಕವನವನ್ನು ಪ್ರಕಟನೆ ಮಾಡಿ ಘೋಷಿಸಲಾಗಿದೆ. 

     ಡಾ.ವಸುಧಾ ಕಾಮತ ಅವರು ಕಳೆದ ಹಲವಾರು ವರ್ಷಗಳಿಂದ ಈ ಭಾಗದಲ್ಲಿ ಹಿಂದಿ ಭಾಷೆಯಲ್ಲಿ ಕವನ, ಕಿರುಕಥೆ, ಪ್ರಭಂದ, ಹಾಗೂ ವಿಶೇಷವಾದ ಲೇಖನಗಳನ್ನು ರಚಿಸಿ ರಾಷ್ಟ್ರ ಭಾಷೆಗೆ ಸಾಹಿತ್ಯ ಕ್ಷೇತ್ರದಲ್ಲಿ ಹೆಚ್ಚಿನ ಮಹತ್ವ ನೀಡುತ್ತಿರುವದನ್ನು ಮನಗಂಡು ಇವರ ಕೃತಿ ಆಯ್ಕೆ ಮಾಡಲಾಗಿದೆ. ಮುಂಬರುವ ದಿನಗಳಲ್ಲಿ ಇವರನ್ನು ನ್ಯೂ ದಿಲ್ಲಿಯಲ್ಲಿ ಸತ್ಕರಿಸಿ ಪುರಸ್ಕರಿಸಲಾಗುವದೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

    ಇವರ ಸಾಧನೆಗೆ ಸಂಸ್ಥೆಯ ಕಾಯರ್ಾಧ್ಯಕ್ಷ ಹಾಗೂ ಮಾಜಿ ಶಾಸಕ ಡಾ. ವಿಶ್ವನಾಥ ಪಾಟೀಲ, ಎಂ.ವಿ.ವಾಲಿ, ಶಾಸಕ ಮಹಾಂತೇಶ ಕೌಜಲಗಿ, ನಿದರ್ೇಶಕರಾದ ಡಾ.ವಿ.ಎಸ್.ಸಾಧುನವರ, ಎಸ್.ಸಿ.ಪಾಟೀಲ, ಬೋಮ್ಮನಾಯ್ಕ ಪಾಟೀಲ, ಸಂಜೀವಗೌಡ ಪಾಟೀಲ, ಆರ್.ಪಿ.ಬಡಸ, ಬಾಬು ಹರಕುಣಿ, ಆರ್.ಎಸ್.ಗಡತನವರ, ಡಿ.ಎಸ್.ಸಂಗೊಳ್ಳಿ ಪ್ರಾಚಾರ್ಯ ಎಂ.ಸಿ.ಬಿರಾದಾರ, ಹಾಗೂ ಉಪ ಪ್ರಾಚಾರ್ಯ ಎಂ.ಎನ್.ಕುಲಕಣರ್ಿ ಮತ್ತು ಸಂಸ್ಥೆಯ ಸಿಬ್ಬಂದಿ ವರ್ಗ, ಶಿಕ್ಷಕರ ವರ್ಗ ಅಭಿನಂದಿಸಿದೆ.