ಡಾ. ಎಸ್.ಕೆ.ಕೊಪ್ಪಾ ಅವರ ಬದುಕು - ಬರಹ ಮಾದರೀಯ
ವಿಜಯಪುರ 11: ಡಾ. ಎಸ್.ಕೆ.ಕೊಪ್ಪಾ ಅವರ ಬದುಕು ಮತ್ತು ಸಾಹಿತ್ಯವು ನಾಡಿನ ಜನತೆಗೆ ಸಂದೇಶ ನೀಡುವಂತಹದು. ಅವರ ಶೋಧಿತ ಕೃತಿ ‘ತರ್ದವಾಡಿ ನಾಡು’. ಶಾಸನ, ಸಂಶೋಧನೆ, ಸಂಸ್ಕೃತಿ, ಉದಾರತೆ ಮತ್ತು ಹೋರಾಟದ ಅಂಶಗಳು ಒಳಗೊಂಡಿರುವುದರಿಂದ ನಮ್ಮ ಇರುವಿಕೆಯ ಮೇಲೆ ಬಹಳಷ್ಟು ಪರಿಣಾಮ ಬೀರುತ್ತವೆ. ಅಷ್ಟೇ ಅಲ್ಲ ಸಂಶೋಧಕರಿಗೆ ಅವರ ಇನ್ನೀತರ ಕೃತಿಗಳು ಕೂಡಾ ಮಾರ್ಗದರ್ಶಿಯಾಗಿವೆ. ಈ ಕೇಂದ್ರ ಎಂದು ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಡಿ.ವಿ.ಪರಶಿವಮೂರ್ತಿಯವರು ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.
ಡಾ. ಫ.ಗು.ಹಳಕಟ್ಟಿ ಸಂಶೋಧನ ಕೇಂದ್ರದಲ್ಲಿ ಆಯೋಜಿಸಿದ್ದ ಸಂದರ್ಭದಲ್ಲಿ ವಿಚಾರಗಳನ್ನು ಹಂಚಿಕೊಂಡು ಈ ಸಂಶೋಧನ ಕೇಂದ್ರವು ಉಳಿದವುಗಳಿಗೆ ಮಾದರಿಯಾಗಿದೆ ಎಂದರು.
ಡಾ. ಎಂ.ಎಂ.ಪಡಶೆಟ್ಟಿಯವರು, ಕೊಪ್ಪಾ ಅವರನ್ನು ವಿದ್ಯಾರ್ಥಿ ಜೀವನದಿಂದ ತಿಳಿದವನು. ಅವರ ಒಡನಾಟವು ಸಂಶೋಧನೆ, ಸಂಪಾದನೆ, ಪ್ರಕಟನೆ, ಬೋಧನೆ ಮತ್ತು ಚಿಂತನೆಯ ಮೂಲಕ ವಿಚಾರಗಳು ವ್ಯಕ್ತ ಆಗಿರುವುದರಿಂದ ಎಂತಹ ಪ್ರಸಂಗದಲ್ಲೂ ನಮ್ಮ ಅನುಸಂಧಾನವು ಇರುತ್ತಿತ್ತು ಎಂದರು.
ಡಾ. ಗುರುಪಾದ ಮರಿಗುದ್ದಿಯವರು ಮಾತನಾಡುತ್ತ ‘ತರ್ದವಾಡಿ ಪುಸ್ತಕ’ವು ಬಹಳಷ್ಟು ಜನರಿಂದ ಮೆಚ್ಚುಗೆ ಪಡೆದಿದೆ. ಇದರಲ್ಲಿ ಅಂದಂದಿನ ಕಾಲದ ಸಾಂಸ್ಕೃತಿಕ ಪ್ರಜ್ಞೆಯನ್ನು 350 ಶಾಸನ ಅಧ್ಯಯನ ಮಾಡಿರುವದರಿಂದ ಅಲ್ಲಿ ವಿಶಾಲ ಅರ್ಥವನ್ನು ಹೊಂದಿದ ಅಪರೂಪದ ಗ್ರಂಥವಾಗಿದೆ ಎಂದರು. ಶಾಸನಗಳು ಹೇಳುವ ತ್ಯಾಗ, ವೀರ, ಮಾಸ್ತಿ, ದಾನ, ನಿಷಧಿಗಲ್ಲುಗಳನ್ನು ಅಧ್ಯಯನ ಮಾಡಿದ್ದಾರೆ.
ಡಾ. ರವೀಂದ್ರನಾಥ ಕೆ. ಅವರು ಡಾ. ಕೊಪ್ಪಾ ಅವರ ಇತರೆ ಕೃತಿಗಳ ಬಗ್ಗೆ ಮಾತನಾಡುತ್ತ ಶರಣರ ಚರಿತ್ರೆಗಳನ್ನು ಬರೆಯುವಾಗ ಸಂಶೋಧನಾತ್ಮಕ ಲೇಖನಗಳನ್ನು ಬರೆದು ಸಾಹಿತ್ಯ ಕ್ಷೇತ್ರಕ್ಕೆ ಬೆಳಕು ಚಲ್ಲಿದವರು. ಹೀಗಾಗಿ ಕೊಪ್ಪಾ ಅವರ ಒಬ್ಬ ದಾರ್ಶನಿಕ ಮತ್ತು ವಿದ್ವಾಂಸರು ಎಂದು ಹೇಳಿದರೆ ಅತಿಶಯೋಕ್ತಿಯಾಗಲಾರದು.
ವಿಚಾರ ಸಂಕಿರಣ ಕೇಂದ್ರ ಬಿಂದು ಡಾ. ಎಸ್.ಕೆ.ಕೊಪ್ಪ ಅವರು ಮಾತನಾಡುತ್ತಾ ಡಾ. ಎಂ.ಎಂ.ಕಲಬುರ್ಗಿ, ಪ್ರೊ. ಎ.ಎಸ್.ಹಿಪ್ಪರಗಿ, ಪ್ರೊ. ಎನ್.ಜಿ.ಕರೂರಂತವರಿಂದ ಹೆಚ್ಚು ಕಲಿಯಲು ಸಾಧ್ಯವಾಯಿತು. ಪರಿಸರವು ಕೂಡಾ ನನಗೆ ಅಧ್ಯಯನ ಮಾಡಲು ಅನುಕೂಲವಾಗಿತ್ತು ಎಂದು ಕೃತಜ್ಞತಾ ಪೂರ್ವಕ ಮಾತುಗಳನ್ನಾಡಿದರು.
ಅಧ್ಯಕ್ಷರಾದ ಡಾ. ಕೃಷ್ಣ ಕೊಲ್ಹಾರಕುಲಕರ್ಣಿಯವರು ಮಾತನಾಡುತ್ತ ಶರಣ ಸಾಹಿತ್ಯವು ಎಲ್ಲ ಸಾಹಿತ್ಯದ ಅಂಶಗಳು ಅದರಲ್ಲಿವೆ. ಕೊಪ್ಪಾ ಅವರು ಸಂಶೋಧನ ಮಾರ್ಗದರ್ಶಕರಾಗಿ ಒಳ್ಳೆಯ ಕೆಲಸ ಮಾಡಿದ್ದಾರೆಂದರು.
ಕೊನೆಗೆ ಸಂವಾದದಲ್ಲಿ ಭಾಗವಹಿಸಿದ ಡಾ. ಸಿದ್ದಣ್ಣ ಉತ್ನಾಳ, ಡಾ. ಎಂ.ಎಸ್.ಮಾಗಣಗೇರಿ, ಡಾ. ಶ್ರೀಮತಿ ಉಷಾದೇವಿ ಹಿರೇಮಠ, ಡಾ. ವಿ.ಎಂ.ಬಾಗಾಯತ, ಡಾ. ಚೈತನಾ ಸಂಕೊಂಡ, ಶ್ರೀಮತಿ ಶಾರದಾ ಐಹೊಳ್ಳಿ ಇವರು ಡಾ. ಕೊಪ್ಪಾ ಅವರ ಸಾಹಿತ್ಯಿಕ, ಕಾರ‌್ಯಗಳ ಕುರಿತು ಚರ್ಚಿಸಿ ಸಂವಾದವನ್ನು ಯಶಸ್ವಿಗೊಳಿಸಿದರು. ಡಾ. ವಿ.ಡಿ.ಐಹೊಳ್ಳಿ ಸಂವಾದ ಕಾರ್ಯಕ್ರಮ ನಡೆಸಿಕೊಟ್ಟರು. ಪ್ರೊ. ಅಮರೇಶ ಸಾಲಕ್ಕಿ ಕಾರ‌್ಯಕ್ರಮ ನಿರೂಪಿಸಿದರು. ಶ್ರೀ ಮನು ಪತ್ತಾರ ವಂದಿಸಿದರು. ಶ್ರೀ ಬಿ.ಎಂ.ಪಾಟೀಲ ವಚನಗಾಯನ ಮಾಡಿದರು. ಡಾ. ಎಂ.ಎಸ್.ಮದಭಾವಿ ಅತಿಥಿಗಳನ್ನು ಪರಿಚಯಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಕಾರ‌್ಯಕ್ರಮದಲ್ಲಿ ಪ್ರೊ. ಎನ್.ಜಿ.ಕರೂರ, ವಿ.ಸಿ.ನಾಗಠಾಣ, ಸಹದೇವ ನಾಡಗೌಡ, ಪ್ರೊ. ಎನ್.ಬಿ.ದೊಡಮನಿ, ಎಸ್.ಎನ್.ಶಿವಣಗಿ, ಎಸ್.ವಾಯ್.ಗದಗ, ಮಹಾದೇವ ಹಾಲಳ್ಳಿ, ಕೆ.ಎಸ್.ಬಿರಾದಾರ, ಸುಭಾಸ ಕನ್ನೂರ, ಕಣಬೂರ, ಸಕ್ರಿ, ಎನ್.ಕೆ.ಕುಲಕರ್ಣಿ, ಪಿ.ಎಸ್.ಕನಮಡಿ, ಡಾ. ಶಿರಹಟ್ಟಿ, ಎಸ್.ಎಸ್.ಮಜ್ಜಗಿ, ಎಂ.ಆಯ್.ಮದಭಾವಿ, ಡಾ. ಎಸ್.ಎಸ್.ತರಡಿ, ಕೊಪ್ಪಾ ಅವರ ಕುಟುಂಬ ಮತ್ತು ಜೆ.ಎಸ್.ಎಸ್., ಬಂಜಾರಾ, ಎಸ್.ಎಂ.ಆರ್.ಕೆ. ಪ್ರೆಸಿಡೆನ್ಸಿ, ಅಂಜುಮನ ಬಿ.ಇಡಿ. ಕಾಲೇಜುಗಳ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.