ಡಾ.ಪ್ರಭುಗೌಡ ಹುಟ್ಟು ಹಬ್ಬ: ಅಭಿಮಾನಿ ಬಳಗದಿಂದ ಹಣ್ಣು ಹಂಪಲು ವಿತರಣೆ

Dr. Prabhu Gowda's birthday celebration: Distribution of fruits by fans

ಡಾ.ಪ್ರಭುಗೌಡ ಹುಟ್ಟು ಹಬ್ಬ: ಅಭಿಮಾನಿ ಬಳಗದಿಂದ ಹಣ್ಣು ಹಂಪಲು ವಿತರಣೆ 

ದೇವರಹಿಪ್ಪರಗಿ 02:: ಅಂದರ ಬಾಳಿಗೆ ಬೆಳಕಾದ ಡಾ. ಪ್ರಭುಗೌಡ ಲಿಂಗದಳ್ಳಿ (ಚಬನೂರ) ಅವರ 55ನೇ ಹುಟ್ಟುಹಬ್ಬ ಅಂಗವಾಗಿ ಅವರ ಅಭಿಮಾನಿ ಬಳಗ ವತಿಯಿಂದ ಸರ್ಕಾರಿ ಆಸ್ಪತ್ರೆಯಲ್ಲಿನ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಮಾಡುವುದರ  ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು. 

ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ರವಿವಾರದಂದು ಡಾ. ಪ್ರಭುಗೌಡ ಅವರ ಅಭಿಮಾನಿ ಬಳಗದ ಮುಖಂಡರಾದ ಕಾಶಿನಾಥ ಕೋರಿ ಅವರು ಮಾತನಾಡಿ, ಸರಳ ಸಜ್ಜನ ವ್ಯಕ್ತಿ, ದೀನ ದಲಿತರ ನಾಯಕ, ಯುವಕರ ಹೃದಯವಂತ ಡಾ.ಪ್ರಭುಗೌಡ ಅವರು, ರಾಜಕೀಯ ಪ್ರವೇಶ ಮಾಡುವುದಕ್ಕಿಂತ ಮುಂಚೆ ಸಾರ್ವಜನಿಕರ ಮದ್ಯ ಬೆರೆತು ಜನರ ಕಷ್ಟ ನಷ್ಟಗಳನ್ನು ಅರಿತು ರಾಜಕೀಯ ಹಿನ್ನಲೆಯ ಮನೆತನದಿಂದ ಬಂದ ಅವರು ಇತ್ತೀಚೆಗೆ ರಾಜಕೀಯ ಪ್ರವೇಶ ಪಡೆದು ಅಂದಿನಿಂದ ಇಂದಿನವರೆಗೂ ನಿರಂತರವಾಗಿ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ, ಜನರ ಸೇವೆಯಲ್ಲಿ ತೊಡಗಿರುವಂತಹ ಧೀಮಂತ ನಾಯಕರಾಗಿದ್ದಾರೆ. 

ಯಾವುದೇ ರೀತಿಯ ಕಷ್ಟಕಾರ​‍್ಪಣಯಗಳನ್ನು ಹೇಳಿಕೊಂಡು ಬಂದರೆ ಸಾಕು  ಅಂಥವರಿಗೆ ಕೂಡಲೇ ಸ್ಪಂದಿಸಿ ಅವರಿಗೆ ಸಹಾಯ ಮಾಡುವ ಸಮೃದ್ಧಿ ಮನಸುಳ್ಳಂತಹ ವ್ಯಕ್ತಿ ಅಂದರೆ ಅದು ಡಾ. ಪ್ರಭುಗೌಡ ಲಿಂಗದಳ್ಳಿ ಅವರು ಇವತ್ತು ಅವರ 55ನೇ ಹುಟ್ಟು ಹಬ್ಬವನ್ನು ಅಭಿಮಾನಿ ಬಳಗದ ವತಿಯಿಂದ ಸರಳವಾಗಿ ಇಡೀ ಕ್ಷೇತ್ರದ ಸರ್ಕಾರಿ ಆಸ್ಪತ್ರೆಯಲ್ಲಿನ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಮಾಡುತ್ತಿದ್ದೇವೆ. ನಮ್ಮ ನಾಯಕರು ಹುಟ್ಟು ಹಬ್ಬವನ್ನು ಸರಳ ರೀತಿಯಲ್ಲಿ ಆಚರಣೆ ಮಾಡಿರಿ ಮತ್ತು ಯಾವುದೇ ಕಾರಣಕ್ಕೂ  ಅದ್ದೂರಿ ಆಡಂಬರದಿಂದ ಆಚರಣೆ ಮಾಡೋಕೂಡದು ಎಂದು ಕರೆಯನ್ನು ನೀಡಿದ್ದಾರೆ ಎಂದು ಹೇಳಿದರು. 

ಮುಖಂಡರಾದ ಪ್ರಕಾಶ ಮಲ್ಹಾರಿ, ಮುರ್ತೂಜ ತಾಂಬೋಳಿ, ಮುನೀರ್ ಬಿಜಾಪುರ, ರಹಿಮಾನ್ ಕನಕಲ್, ಭೀಮಶಂಕರ ಮಿಂಚನಾಳ ಸೇರಿದಂತೆ ಕಾಂಗ್ರೆಸ್ ಪಕ್ಷದ ಮುಖಂಡರು, ಕ್ಷೇತ್ರದ ಪ್ರತಿಯೊಂದು ಗ್ರಾಮದ ಅಭಿಮಾನಿ ಬಳಗ ಸದಸ್ಯರು ಹಾಗೂ ಮಹಿಳೆಯರು ಇದ್ದರು.