ಧಾರವಾಡ 16: ಕನ್ನಡದ ಕಟ್ಟಾಳು, ಅಪ್ರತಿಮ ಹೋರಾಟಗಾರ, ನಾಡು-ನುಡಿ ಸೇವೆಗಾಗಿ ತಮ್ಮ ಇಡೀ ಜೀವನವನ್ನೇ ಸಮರ್ಪಿ ಸಿದ ಮತ್ತು ಕನರ್ಾಟಕ ವಿದ್ಯಾವರ್ಧಕ ಸಂಘದ ಚುನಾಯಿತ ಅಧ್ಯಕ್ಷರಾಗಿ ಅರ್ಧಶತಮಾನಕ್ಕೂ ಹೆಚ್ಚು ಸೇವೆಗೈದು ವಿಶ್ವದಾಖಲೆ ನಿರ್ಮಿ ಸಿದ ನಾಡೋಜ ಡಾ. ಪಾಟೀಲ ಪುಟ್ಟಪ್ಪನವರು ಕನ್ನಡ ನಾಡು, ನುಡಿ, ಜಲ, ಗಡಿ, ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯ ರಕ್ಷಣೆಗಾಗಿ ಸುದೀರ್ಘ ಮತ್ತು ಆರೋಗ್ಯವಂತ ಆಯುಷಿಗಳಾಗಿ ಕರುನಾಡಿಗಾಗಿ ಇರಲಿ ಎಂದು ಕನರ್ಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಗಳು ಮತ್ತು ಖ್ಯಾತ ನ್ಯಾಯವಾದಿ ಪ್ರಕಾಶ ಎಸ್. ಉಡಿಕೇರಿ ಶುಭ ಕೋರಿದರು.
ಅತ್ಯಂತ ವಿಜೃಂಭಣೆಯಿಂದ ನಾಡೋಜ ಡಾ. ಪಾಟೀಲ ಪುಟ್ಟಪ್ಪನವರ 101ನೇ ವರ್ಷದ ಜನ್ಮದಿನದ ಸಂಭ್ರಮದ ಕಾರ್ಯಕ್ರಮದಲ್ಲಿ ನೆರೆದಿದ್ದ ಅಸಂಖ್ಯಾತ ಅಭಿಮಾನಿಗಳನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು. ನಾಡೋಜ ಡಾ. ಪಾಟೀಲ ಪುಟ್ಟಪ್ಪನವರು ಪ್ರತಿಯೊಂದು ಕಾರ್ಯವನ್ನು ದೂರದೃಷ್ಠಿಯಿಂದ ಆಲೋಚಿಸಿ, ಶಿಸ್ತುಬದ್ಧವಾಗಿ ಅತ್ಯಂತ ದಕ್ಷತೆ ಮತ್ತು ಬದ್ಧತೆಯಿಂದ ನಿರ್ವಹಿಸುವ ವಿಶೇಷವಾದ ಗುಣವನ್ನು ಹೊಂದಿರುತ್ತಾರೆ. ಎಂತಹ ಸಂಧಿಗ್ಧ ಪರಿಸ್ಥಿತಿ ಬಂದರೂ ಹಿಂದೆ ಸರಿಯದ ಅಪ್ರತಿಮ ಹೋರಾಟಗಾರ. ಪುಟ್ಟಪ್ಪನವರ ದಿಟ್ಟತನ ಪ್ರತಿಯೊಬ್ಬರಿಗೂ ಮಾದರಿ. ಇಂಥವರ ಬದುಕನ್ನು ಹತ್ತಿರದಿಂದ ನೋಡಿ ಅವರೊಡನೆ ಕಾರ್ಯನಿರ್ವಹಿಸುತ್ತಿರುವ ನಮ್ಮೆಲ್ಲರದು ಒಂದು ವಿಶೇಷ ಸೌಭಾಗ್ಯ ಎಂದು ಉಡಿಕೇರಿ ಹೇಳಿದರು.
ಕರ್ನಾ ಟಕ ವಿದ್ಯಾವರ್ಧಕ ಸಂಘದ ಗೌರವ ಉಪಾಧ್ಯಕರು, ಮಾಜಿ ಸಂಸದರು ಆದ ಪ್ರೊ. ಐ.ಜಿ. ಸನದಿ ಮಾತನಾಡಿ, ನಾಡೋಜ ಡಾ. ಪಾಟೀಲ ಪುಟ್ಟಪ್ಪನವರ ಹೋರಾಟದ ಜೀವನ ಒಂದು ಶತಕ ಪೂರೈಸಿದೆ ಎಂಬುದು ವಿಶ್ವದಾಖಲೆಯ ಜೊತೆಗೆ ಬಹುದೊಡ್ಡ ಸಂತಸದ ವಿಚಾರ. ಅವರು ಒಬ್ಬ ಮಹಷರ್ಿಯಂತೆ ತಮ್ಮ ಇಡೀ ಬದುಕನ್ನೇ ನಾಡು-ನುಡಿ, ಜಲ, ಭಾಷೆ, ಸಂಸ್ಕೃತಿಗಾಗಿ ಮೀಸಲಿಟ್ಟ ಆದರ್ಶ ಪುರುಷರು. ರಾಷ್ಟ್ರೀಯ ಭಾವೈಕ್ಯತೆ ಮತ್ತು ಅಖಂಡತೆ ಪ್ರಬಲವಾದವನ್ನು ಮಾಡಿದ ಇವರು ವಿಶ್ವದಲ್ಲೆಡೆ ಭ್ರಾತೃತ್ವ ಮೂಡಬೇಕು ಎಂದು 'ಲೋಕವೇ ತನ್ನ ಮನೆಯಾಗಬೇಕು' ಎಂದು ಉದ್ಘೋಷಿಸಿ ಅದರಂತೆ ನಡೆದುಕೊಂಡವರು ಎಂದರು.
ಸಂಘದ ಕಾರ್ಯಾ ಧ್ಯಕ್ಷ ಶಿವಣ್ಣ ಬೆಲ್ಲದ ಅವರ ನೇತೃತ್ವದಲ್ಲಿ ಗೌರವ ಉಪಾಧ್ಯಕ್ಷ ಸಂಕಮ್ಮ ಸಂಕಣ್ಣವರ, ಬಿ.ಎಲ್. ಪಾಟೀಲ, ಸಹ ಕಾರ್ಯದರ್ಶಿ ಸದಾನಂದ ಶಿವಳ್ಳಿ, ಕಾರ್ಯಕಾರಿ ಸಮಿತಿ ಸದಸ್ಯರಾದ ಪ್ರಫುಲ್ಲಾ ನಾಯಕ, ಶಾಂತೇಶ ಗಾಮನಗಟ್ಟಿ, ಶಂಕರ ಕುಂಬಿ, ಶಿವಾನಂದ ಭಾವಿಕಟ್ಟಿ, ವಿಶ್ವೇಶ್ವರಿ ಬ. ಹಿರೇಮಠ ಮುಂತಾದವರು ಸೇರಿ ನಾಡೋಜ ಡಾ. ಪಾಟೀಲ ಪುಟ್ಟಪ್ಪನವರನ್ನು ಅತ್ಯಂತ ಗೌರವದಿಂದ ಸನ್ಮಾನಿಸಿ, ಶುಭ ಕೋರಿದರು.
ಖ್ಯಾತ ಜಾನಪದ ಗಾಯಕ ಬಸವಲಿಂಗಯ್ಯ ಹಿರೇಮಠ ಮತ್ತು ವಿಶ್ವೇಶ್ವರಿ ಹಿರೇಮಠ ಜಾನಪದ ಗೀತೆಗಳನ್ನು ಹಾಡಿ, ಜನ್ಮದಿನೋತ್ಸವಕ್ಕೆ ವಿಶೇಷ ಮೆರಗು ತಂದರು.