ಮಿರಜ ಪಟ್ಟಣದ ನಿರ್ಮಲ ವ್ಯಸನ ಮುಕ್ತಿ ಕೇಂದ್ರದಲ್ಲಿ ಡಾ. ಚಂದ್ರಶೇಖರ ಹಳಿಂಗಳೆ ಪತ್ರಕರ್ತರನ್ನು ಸನ್ಮಾನ
ಕಾಗವಾಡ 09 : ಸಂವಿಧಾನದ ನಾಲ್ಕನೇ ಅಂಗವಾಗಿರುವ ಪತ್ರಕರ್ತರು ಸಮಾಜದ ಅನೇಕ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಮೂಲಕ ಸರ್ಕಾರವನ್ನು ಎಚ್ಚರಿಸುವ ಕಾರ್ಯ ಮಾಡುತ್ತಾರೆಂದು ಮಿರಜನ ನಿರ್ಮಲ್ ವ್ಯಸನಮುಕ್ತಿ ಕೇಂದ್ರದ ಅಧ್ಯಕ್ಷ ಡಾ.ಚಂದ್ರಶೇಖರ ಹಳಿಂಗಳಿ ಅಭಿಪ್ರಾಯ ಪಟ್ಟಿದ್ದಾರೆ.
ಅವರು, ಮಂಗಳವಾರ ದಿ.07 ರಂದು ಮಹಾರಾಷ್ಟ್ರ ಪತ್ರಿಕಾ ದಿನಾಚರಣೆಯ ನಿಮಿತ್ಯ ಮಿರಜ್ ಪಟ್ಟಣದ ನಿರ್ಮಲ ಆಸ್ಪತ್ರೆ ಮತ್ತು ವ್ಯಸನಮುಕ್ತಿ ಕೇಂದ್ರದ ವತಿಯಿಂದ ಕರ್ನಾಟಕ ಮತ್ತು ಮಹಾರಾಷ್ಟ್ರದ ಪತ್ರಕರ್ತರನ್ನು ಸನ್ಮಾನಿಸಿ, ಮಾತನಾಡುತ್ತಿದ್ದರು. ನನ್ನ ಮತ್ತು ಪತ್ರಕರ್ತರ ಒಡನಾಟ ಕಳೆದ 2009 ರಿಂದ ಪ್ರಾರಂಭಗೊಂಡಿದ್ದು, ಮಹಾರಾಷ್ಟ್ರ ಹಾಗೂ ಕರ್ನಾಟಕದ ಪತ್ರಕರ್ತರು ನಿರ್ಮಲ್ ವ್ಯಸನ ಮುಕ್ತಿ ಕೇಂದ್ರದ ಸಮಸ್ಯೆಗಳಿಗೆ ಸ್ಪಂದಿಸಿ ಸಹಕರಿಸಿದ್ದಾರೆ. ನಿರ್ಮಲ ಆಸ್ಪತ್ರೆಯು ಇಂದು ಇಷ್ಟೊಂದು ಹೆಸರುವಾಸಿಯಾಗಿ ಬೆಳೆಯುವಲ್ಲಿ ಪತ್ರಕರ್ತರ ಸಹಕಾರ ಬಹಳಷ್ಟಿದೆ.ನಮ್ಮ ವ್ಯಸನಮುಕ್ತಿ ಕೇಂದ್ರದಲ್ಲಿ ಕೇವಲ ಮಹಾರಾಷ್ಟ್ರದ ರೋಗಿಗಳ ಜೊತೆಗೆ ಕರ್ನಾಟಕದ ಚಿಕ್ಕೋಡಿ, ಅಥಣಿ, ರಾಯಬಾಗ, ಜಮಖಂಡಿ, ವಿಜಯಪೂರದ ದುಷ್ಟಗಳಿಗೆ ಅಂಟಿಕೊಂಡ ಅನೇಕ ಯುವಕರನ್ನು ಉಪಚರಿಸಿ, ಗುಣಮುಖ ಮಾಡುತ್ತಿದ್ದೇವೆ. ಇದಕ್ಕೆ ಕರ್ನಾಟಕದ ಪತ್ರಕರ್ತರ ವಿಶೇಷ ಸಹಕಾರ ದೊರಕಿದೆ ಎಂದರು.
ಕಾರ್ಯಕ್ರಮದಲ್ಲಿ ಕಾಗವಾಡ ತಾಲೂಕಿನ ಪತ್ರಕರ್ತರಾದ ಸುಕುಮಾರ ಬನ್ನೂರೆ, ಬಸವರಾಜ ತಾರದಾಳೆ ಮತ್ತು ಮಿರಜ ಪಟ್ಟಣದ ಪತ್ರಕರ್ತರಾದ ಸದಾನಂದ ಓಂದೆ, ಕೆ.ಕೆ. ಜಾದವ್, ಜಾನಿಂದರ್ ಹುಲವಾನ, ಉತ್ತಮ ಪಾಟೀಲ, ಅಜೀತ ಸಾಳುಂಖೆ, ವಿನಾಯಕ ಪಾಟೀಲ, ಜಗದೀಶ ಧುಳಬುಡೆ, ಸಂದೀಪ ತೋಡಕರ ಇವರನ್ನು ಸನ್ಮಾನಿಸಿ, ಗೌರವಿಸಲಾಯಿತು.
ಈ ವೇಳೆ ನಿರ್ಮಲ್ ವ್ಯಸನ ಮುಕ್ತಿ ಕೇಂದ್ರದ ಪ್ರತಿನಿಧಿಗಳಾದ ಡಾ. ಪ್ರಕಾಶ ಮೋರೆ, ಡಾ. ದೀಪಕ ಮುಕಾದಂ, ಸಾಗರ ಜಾದವ, ವಿನಾಯಕ ಕವಡೆ ಸೇರಿದಂತೆ ಆಸ್ಪತ್ರೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.ಫೋಟೋ ಶಿರ್ಷಿಕೆ: (09 ಕಾಗವಾಡ-1) ಮಿರಜ ಪಟ್ಟಣದ ನಿರ್ಮಲ ವ್ಯಸನ ಮುಕ್ತಿ ಕೇಂದ್ರದಲ್ಲಿ ಡಾ. ಚಂದ್ರಶೇಖರ ಹಳಿಂಗಳೆ ಪತ್ರಕರ್ತರನ್ನು ಸನ್ಮಾನಿಸುತ್ತಿರುವ ದೃಶ್ಯ.