ಡಾ.ಮನಮೋಹನ್ ಸಿಂಗ್ ನಿಧನ: ರೆಡ್ಡಿ ಶ್ರೀನಿವಾಸ್ ಸಂತಾಪ
ಕೊಪ್ಪಳ: ಭಾರತದ ಮಾಜಿ ಪ್ರಧಾನಿಡಾ.ಮನಮೋಹನ್ ಸಿಂಗ್ ನಿಧನಕ್ಕೆ ಕೊಪ್ಪಳ ಜಿಲ್ಲಾ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಅಧ್ಯಕ್ಷ ರೆಡ್ಡಿ ಶ್ರೀನಿವಾಸ್ ಸಂತಾಪ ಸೂಚಿಸಿದ್ದಾರೆ.ಡಾ. ಮನಮೋಹನ್ ಸಿಂಗ್ ಅವರು 2004ರಿಂದ 2014 ರವರೆಗೆ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ಎರಡು ಅವಧಿಗಳ ಕಾಲ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದ ಮನಮೋಹನ್ ಸಿಂಗ್ ದೇಶವನ್ನು ಪುನರ್ ರೂಪಿಸಿದ್ದರು,ಮನಮೋಹನ್ ಸಿಂಗ್ ದೇಶದ ಆರ್ಥಿಕತೆಗೆ ಹೊಸ ಚೈತನ್ಯ ತುಂಬಿದವರು’, ಜಗತ್ತಿನ ಆರ್ಥಿಕ ತಜ್ಞನನ್ನು ಕಳೆದುಕೊಂಡು ಭಾರತ ಬಡವಾಗಿದೆ ಎಂದು ಸಂತಾಪದಲ್ಲಿ ತಿಳಿಸಿದ್ದಾರೆ.