ಡಾ. ಬಾಬಾಸಾಹೇಬ ಅಂಬೇಡ್ಕರ್ ಕಾರ್ಯ ಸದಾ ಸ್ಮರಣೀಯ : ಮಣ್ಣಣ್ಣವರ
ಶಿಗ್ಗಾವಿ : ಜಗಜ್ಯೋತಿ ಬಸವೇಶ್ವರರ ಅಂದಿನ ಕೈಲಾಸ ಮಂಟಪದ ಪರಿಕಲ್ಪನೆಯನ್ನು ಭಾರತೀಯರಿಗೆ ಪರಿಚಯಿಸುವ ಮಹತ್ತ ಕಾರ್ಯದಲ್ಲಿ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಕಾರ್ಯ ಸದಾ ಸ್ಮರಣೀಯ ಎಂದು ತಾಲೂಕ ಕಾಂಗ್ರೇಸ ವಕ್ತಾರ ಮಂಜುನಾಥ ಮಣ್ಣಣ್ಣವರ ಹೇಳಿದರು. ಪಟ್ಟಣದ ಅಂಬೇಡ್ಕರ್ ಸರಕಾರಿ ಸೇವೆಗಳ ಸಂಕೀರ್ಣದ ಎದುರಲ್ಲಿ ಇರುವ ಬಾಬಾ ಸಾಹೇಬ್ ಅಂಬೇಡ್ಕರ್ ಪುತ್ತಳಿಗೆ ಮಾಲಾರೆ್ಣ ಸಲ್ಲಿಸಿ ಮಾತನಾಡಿದ ಅವರು ಅಂಬೇಡ್ಕರ್ ಅವರ ಸ್ಮರಣೆ ಪ್ರತಿಯೊಬ್ಬ ಭಾರತೀಯನ ನಿತ್ಯ ಅವಿಭಾಜ್ಯ ಅಂಗವಾಗಬೇಕು ವಿದ್ಯಾರ್ಥಿಗಳು ವಿದ್ಯಾರ್ಥಿ ವಲಯ ಪರಿಣಾಮಕಾರಿಯಾಗಿ ಅಂಬೇಡ್ಕರ್ ಅವರ ತತ್ವ ಆದರ್ಶ ಪಾಲಿಸುವತ್ತ ಗಮನಹರಿಸಬೇಕು ಎಂದು ಅಭಿಪ್ರಾಯಪಟ್ಟರು ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರುಗಳಾದ ಬಸವರಾಜ ರಾಗಿ, ಶಂಕರ ಗಂಗಣ್ಣವರ, ಷಣ್ಮುಖಣ್ಣ ಉಳ್ಳಾಗಡ್ಡಿ, ಜಿಸಿ ಪಾಟೀಲ, ಗದಿಗೆಪ್ಪ ಬಳ್ಳಾರಿ, ರಾಜು ದಾನಗಲ್ಲ ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು.