ಡಾ. ಶಿವಬಸವ ಮಹಾಸ್ವಾಮಿಗಳ 135 ನೇ ಜಯಂತಿ ಮಹೋತ್ಸವ

ಜಯಂತಿ ಮಹೋತ್ಸವ

ಡಾ. ಶಿವಬಸವ ಮಹಾಸ್ವಾಮಿಗಳ 135 ನೇ ಜಯಂತಿ ಮಹೋತ್ಸವ 

ಬೆಳಗಾವಿ 25 : ನಾಡಿನ ಬಡ ಮಕ್ಕಳಿಗೆ ಅನ್ನ, ಆಶ್ರಯ ನೀಡುವುದರ ಮೂಲಕ ಕಾಯಕಯೋಗಿ, ಮಹಾಪ್ರಸಾದಿ ಎನಿಸಿದ್ದ ನಾಗನೂರು ರುದ್ರಾಕ್ಷಿ ಮಠದ ಡಾ. ಶಿವಬಸವ ಮಹಾಸ್ವಾಮಿಗಳವರ 135 ನೇ ಜಯಂತಿ ಮಹೋತ್ಸವ  ಅಂಗವಾಗಿ  ನವೆಂಬರ್ 26ರಿಂದ ಡಿಸೆಂಬರ್ 4 ರ ವರೆಗೆ ಸಂಜೆ 6 ಗಂಟೆಗೆ ಸಿದ್ಧರಾಮೇಶ್ವರ ಶಿಕ್ಷಣ ಸಂಸ್ಥೆಯ ಆರ್ ಎನ್ ಶೆಟ್ಟಿ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ಮಣಕವಾಡದ ಅಭಿನವ ಮೃತ್ಯುಂಜಯ ಮಹಾಸ್ವಾಮಿಗಳಿಂದ ಶರಣರ ಅನುಭವ ಕುರಿತು ಪ್ರವಚನ ನಡೆಯಲಿದೆ. ಮುಂದುವರೆದು ಶ್ರೀಗಳ ಜಯಂತಿ ಮಹೋತ್ಸವದ ಅಂಗವಾಗಿ ಡಿಸೆಂಬರ್ 5 ರಿಂದ ಡಿಸೆಂಬರ್ 8ರವರೆಗೆ  ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಇಲ್ಲಿ ಕನ್ನಡ ನುಡಿಶ್ರೀ, ಸೇವಾರತ್ನ, ಆತ್ಮಸ್ವಾಸ್ಥ್ಯ ಶ್ರೀ, ಪ್ರಸಾದಶ್ರೀ ಮುಂತಾದ ಪ್ರಶಸ್ತಿಗಳನ್ನು ನಾಡಿನ ಸಾಧಕರಿಗೆ ನೀಡಲಾಗುವುದು ಎಂದು ನಾಗನೂರು ರುದ್ರಾಕ್ಷಿ ಮಠದ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ತಿಳಿಸಿದ್ದಾರೆ.