ಭಾರತ ಫುಟ್ಬಾಲ್ ತಂಡದ ತಾಂತ್ರಿಕ ನಿರ್ದೇಶಕರಾಗಿ ಡೋರು ಐಸಾಕ್ ನೇಮಕ


ನವದೆಹಲಿ, ಏ 26 ಸವಿಯೊ ಮೆಡೆರಿರಾ ಅವರ ಭಾರತ ಫುಟ್ಬಾಲ್ ತಂಡದ ತಾಂತ್ರಿಕ ನಿರ್ದೇಶಕರ ಸ್ಥಾನಕ್ಕೆ ರೋಮಾನಿಯಾದ ಡೋರು ಐಸಾಕ್ ಅವರನ್ನು ನೇಮಿಸಲಾಗಿದೆ. ಅಖಿಲ ಭಾರತೀಯ ಫುಟ್ಬಾಲ್ ಒಕ್ಕೂಟದ ಕಾರ್ಯ ನಿರ್ವಾಹಕ್  ಸಮಿತಿಯು ಅಂತಿಮವಾಗಿ ಭಾರತ ಫುಟ್ಬಾಲ್ ತಂಡದ ತಾಂತ್ರಿಕ ನಿರ್ದೇಶಕ  ಸ್ಥಾನದ ಜವಾಬ್ದಾರಿಯನ್ನು ಡೋರು ಐಸಾಕ್ ಅವರಿಗೆ ಅಧಿಕೃತವಾಗಿ ನೀಡಿದೆ ಗೋಲ್ ವೆಬ್ ಸೈಟ್ ವರದಿ ಮಾಡಿದೆ. ಸ್ಕಾಟ್ ಡೊನ್ನೆಲ್ ಅವರ ಸ್ಥಾನ ತೆರವಾದ ಬಳಿಕ ಸವಿಯೊ ಮೆಡೆರಿರಾ ಅವರು ತಾಂತ್ರಿಕ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದರು. ಇದೀಗ ಅವರ ಸ್ಥಾನಕ್ಕೆ ಐಸಾಕ್ ಅವರನ್ನು ನೇಮಕ ಮಾಡಲಾಗಿದೆ. ಸ್ಕಾಟ್ ಡೊನ್ನೆಲ್ ಮತ್ತೊಮ್ಮೆ ಈ ಹುದ್ದೆಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಅವರ ಅಜರ್ಿಯನ್ನು ಭಾರತ ಫುಟ್ಬಾಲ್ ಒಕ್ಕೂಟ ತಿರಸ್ಕರಿಸಿದೆ.