ಎಲ್ಲ ಗ್ರಾಮ ಪಂಚಾಯಿತಿಗಳಿಂದ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಸಂಸ್ಥೆಗೆ ದೇಣಿಗೆ- ಗ್ರಾಮ ಪಂಚಾಯಿತಿ ಸದಸ್ಯರ ವಿರೋಧ
ಹೊಸಪೇಟೆ 21: ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳಿಂದ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಸಂಸ್ಥೆಗೆ ತಲಾ 5 ಸಾವಿರ ದೇಣಿಗೆಯನ್ನು ನೀಡುವ ಅದೇಶವನ್ನು ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ಸದಸ್ಯರ ಕ್ಷೇಮಾಭಿವೃದ್ಧಿ ಸಂಘ(ರಿ)ವು ಬಲವಾಗಿ ವಿರೋಧಿಸುತ್ತದೆ. ಈ ಆದೇಶವು ಗ್ರಾಮ ಪಂಚಾಯಿತಿಗಳ ಆಯವ್ಯಯ (ಛಣಜರಜಣ)ಕ್ಕೆ ಸಂಬಂಧಿಸಿದ ಕಾಯಿದೆಯ ಪ್ರಕರಣ 241 ಮತ್ತು 242 ಉಲ್ಲಂಘನೆಯಾಗಿದ್ದು. ತಾವು ಸದರಿ ಆದೇಶವನ್ನು ತಕ್ಷಣ ಹಿಂಪಡೆಯಬೇಕು ಎಂದು ತಮ್ಮನ್ನು ಆಗ್ರಹಿಸುತ್ತೇವೆ. ಗ್ರಾಮ ಪಂಚಾಯಿತಿ ನಿಧಿಯನ್ನು ಗ್ರಾಮ ಪಂಚಾಯಿತಿ ಅಂಗೀಕರಿಸಿದ ವಾರ್ಷಿಕ ಆಯವ್ಯಯ ಪತ್ರ ಅಥವಾ ಸಂದರ್ಭಾನುಸಾರ ಅಂಗೀಕರಿಸಿದ ಪುನರ್ವಿನಿಯೋಗ ಪತ್ರದಲ್ಲಿ ನಿಗದಿಗೊಳಿಸಿದಂತೆ ವೆಚ್ಚ ಮಾಡಬೇಕು ಎಂದು ಕಾಯಿದೆ ಸ್ಪಷ್ಟ ಪಡಿಸಿದೆ. ಹೀಗಿರುವಾಗ ಮೇಲಿನ ಉಲ್ಲೇಖದ ಆದೇಶಗಳು ಕರ್ನಾಟಕ ಗ್ರಾಮಸ್ವರಾಜ್ ಮತ್ತು ಪಂಚಾಯಿತಿ ರಾಜ್ ಕಾಯಿದೆಯನ್ನು ಉಲ್ಲಂಘಿಸುತ್ತವೆ. ಅಲ್ಲದೆ ಗ್ರಾಮ ಪಂಚಾಯಿತಿಗಳ ಲೆಕ್ಕ ಪರಿಶೋಧನೆಯ ಸಂದರ್ಭದಲ್ಲಿ ಈ ವೆಚ್ಚದ ಕುರಿತು ಉತ್ತರ ನೀಡುವುದು ಕಷ್ಟವಾಗುತ್ತದೆ.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ಸದಸ್ಯರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷರಾದ ಸಣ್ಣಕ್ಕಿ ಲಕ್ಷ್ಮಣ್ ಮಾತನಾಡಿ ನಮ್ಮ ಕರ್ನಾಟಕ ರಾಜ್ಯದ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಸದಸ್ಯರುಗಳು ನಮ್ಮನ್ನು ಸಂಪರ್ಕಿಸಿ ಗ್ರಾಮ ಪಂಚಾಯಿತಿಗಳಿಂದ ವಂತಿಕೆಯನ್ನು ಸಂಗ್ರಹಿಸುತ್ತಿದ್ದಾರೆಂದು ತಿಳಿಸಿರುತ್ತಾರೆ. ಹಾಗೂ ನಮ್ಮ ಗ್ರಾಮ ಪಂಚಾಯಿತಿಗೂ ವಂತಿಗೆ ಹಣವನ್ನು ನೀಡಬೇಕು ಎಂದು ಪತ್ರವು ಬಂದಿರುತ್ತದೆ. ಜಿಲ್ಲಾ ಪಂಚಾಯಿಗಳಿಂದ ಪ್ರತೀ ವರ್ಷ ರೂ.50,000/- ಹಾಗೂ ತಾಲೂಕು ಪಂಚಾಯಿತಿಗಳಿಂದ ರೂ.10,000/- ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳಿಂದ ಪ್ರತೀ ವರ್ಷ ಒಂದು ಗ್ರಾಮ ಪಂಚಾಯಿತಿಗೆ ರೂ.5000/-ಗಳಂತೆ ಒಟ್ಟು 5951 ಗ್ರಾಮ ಪಂಚಾಯಿಗಳಿಗೆ ಲೆಕ್ಕ ಹಾಕಿದರೆ ಒಟ್ಟು ಮೊತ್ತ ರೂ.2,97,55,000/-ಗಳಷ್ಟು ಹಣ ಸಂಗ್ರಹಣೆಯಾಗುತ್ತದೆ. ಈ ವಂತಿಕೆಯ ಹಣವನ್ನು ಸಂಗ್ರಹಣೆ ಮಾಡುತ್ತಿರುವುದು ಕಾಯ್ದೆಗೆ ವಿರುದ್ಧವಾಗಿದ್ದು ಆಯವ್ಯಯ (ಃಣಜರಜಣ)ಕ್ಕೆ ಸಂಬಂಧಿಸಿದ ಕಾಯ್ದೆಯ ಪ್ರಕರಣ 241 ಮತ್ತು 242ರ ಉಲ್ಲಂಘನೆ ಮಾಡುತ್ತಿರುವುದು ಹೊಸದೇನಲ್ಲಾ, ಕೆಲವು ವರ್ಷಗಳಿಂದ ಪಂಚಾಯತ್‌ರಾಜ್ ಆಯುಕ್ತಾಲಯದ ಅಧಿಕಾರಿಗಳು ಗ್ರಾ.ಪಂ.ಗಳನ್ನು ಹಣ ನೀಡುವ ಬ್ರಾಂಚ್ ಆಫೀಸ್‌ಗಳನ್ನಾಗಿ ಮಾಡಿಕೊಂಡು ಕಸ ವಿಲೇವಾರಿ ಘಟಕದ ವಾಹನ ಖರೀದಿ, ಬುಟ್ಟಿ ಖರೀದಿ, ಸೋಲಾರ್ ಖರೀದಿ, ಶುದ್ದ ಕುಡಿಯುವ ನೀರಿನ ಘಟಕಗಳ ನಿರ್ಮಾಣ, ಜೆ.ಜೆ.ಎಂ. ಯೋಜನೆ, ಕೂಸಿನ ಮನೆ, ಹೀಗೆ ಕಸವಿಲೇವಾರಿ ಘಟಕದ ವಾಹನ ಮತ್ತು ಡಸ್ಟ್‌ಬಿನ್ ಖರೀದಿ ನಂತರ ಕಸ ವಿಲೇವಾರಿ ಘಟಕಗಳೇ ನಿರ್ಮಾಣವಾಗಿರುವುದಿಲ್ಲ ಹಾಗೂ ವಾಹನಗಳ ನೊಂದಣಿ ಸಹ ಆಗಿರುವುದಿಲ್ಲ. ಸೋಲಾರ್ ಅಳವಡಿಕೆಗೆ ಇದೇ ರೀತಿಯಲ್ಲಿ ಆದೇಶವನ್ನು ಕಳುಹಿಸಿ ಸೋಲಾರ್ ಅಳವಡಿಸಿದ ನಂತರ ಸೋಲಾರ್‌ಗಳು ಸಂಪೂರ್ಣ ದುರಸ್ತಿಯಾಗಿರುತ್ತವೆ ಆದರೆ ಸದರಿ ಸೋಲಾರ್‌ಗಳಿಗೆ ಇನ್ನು ವ್ಯಾರೆಂಟ್ ಇದ್ದರು ಸಹ ಅದನ್ನು ಸರಿಪಡಿಸಲು ಕಂಪನಿಗಳೇ ಇರುವುದಿಲ್ಲ. ಶುದ್ದಕುಡಿಯುವ ನೀರಿನ ಘಟಕ ನಿರ್ಮಾಣವಾದ ನಂತರ ಟೆಂಡರ್ ಕರೆದಿರುತ್ತಾರೆ, ಟೆಂಡರ್ ಮುಗಿದ ನಂತರ ರೀ ಟೆಂಡರ್ ಮಾಡದೇ ರಾಜ್ಯಾದ್ಯಂತ ಶುದ್ದಕುಡಿಯುವ ನೀರಿನ ಘಟಕಗಳು ಹಾಳು ಬಿದ್ದಿರುತ್ತವೆ. ಕೂಸಿನ ಮನೆ ಮಾಡಿರುವುದು ಮಹಾತ್ಮಗಾಂದಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಆಕ್ಟ್ ಪ್ರಕಾರ ಕೂಲಿ ಕೆಲಸ ಮಾಡುವ ಸ್ಥಳದಲ್ಲಿ ತಾತ್ಕಾಲಿಕ ಶೆಡ್ ನಿರ್ಮಿಸಿ ಮಕ್ಕಳನ್ನು ನೋಡಿಕೊಳ್ಳುವುದಾಗಿರುತ್ತದೆ. ಆದರೆ ಈಗಿರುವ ಕೂಸಿನ ಮನೆ ಅವೈಜ್ಞಾನಿಕವಾಗಿದ್ದು, ಕೂಲಿ ಕೆಲಸ ಮಾಡದ ತಾಯಂದಿರ ಮಕ್ಕಳನ್ನು ಕೂಸಿನ ಮನೆಗೆ ತರುವ ಕೆಲಸವು ನಡೆದಿರುತ್ತದೆ. ಹಾಗೂ ತಾಲೂಕು ಪಂಚಾಯಿತಿಗಳಲ್ಲಿ ಖರೀದಿಸಿದ ಮಲತ್ಯಾಜ್ಯ ಹೀರುವ (ಖಣಛಿಞಟಿರ) ಯಂತ್ರದ ವಾಹನಗಳು ಕಾರ್ಯನಿರ್ವಹಿಸದೇ ಮೂಲೆಗುಂಪಾಗಿರುತ್ತವೆ. ಇದರಿಂದ ಗ್ರಾಮಗಳಲ್ಲಿ ಶೌಚಾಲಯಗಳನ್ನು ನಿರ್ಮಿಸಿಕೊಳ್ಳಲು ಸಾರ್ವಜನಿಕರು ಹಿಂದೇಟು ಹಾಕುತ್ತಿದ್ದು, ಶೌಚಾಲಯ ನಿರ್ಮಿಸಿಕೊಂಡರೂ ಸಹ ಇಂಗು ಗುಂಡಿಗಳಲ್ಲಿ ಮಲತ್ಯಾಜ್ಯವನ್ನು ಬೇರಡೆಗೆ ಸಾಗಿಸಲು ಆಗದೇ ಬಹಿರ್ದೆಸೆಗೆ ಹೋಗುವಂತಹ ಕೆಲಸವನ್ನು ಮಾಡುತ್ತಿದ್ದಾರೆ. ತಕ್ಷಣ ತಾಲೂಕು ಪಂಚಾಯಿತಿಯಲ್ಲಿರುವ ಮಲತ್ಯಾಜ್ಯ ಹೀರುವ (ಖಣಛಿಞಟಿರ) ಯಂತ್ರದ ವಾಹನವನ್ನು ಸರಿಪಡಿಸಿ ಗ್ರಾಮಗಳಿಗೆ ಸೇವೆಯನ್ನು ಒದಗಿಸುವ ಕೆಲಸವನ್ನು ಮಾಡಬೇಕಾಗಿದೆ. ಜೆ.ಜೆ.ಎಂ. ಜಲಜೀವನ ಮಿಷನ್ ಕಾಮಗಾರಿಯು ಅಪೂರ್ಣವಾಗಿದ್ದರು ಸಹ ಕೆಲ ಭ್ರಷ್ಟ ಅಧಿಕಾರಿಗಳು ಗುತ್ತಿಗೆದಾರರಿಗೆ ಎನ್.ಓ.ಸಿ ನೀಡುತ್ತಿದ್ದು (ಕೆಲಸ ಪೂರ್ಣವಾಗಿದೆ) ಎನ್ನುವ ದೃಢೀಕರಣ ನೀಡುತ್ತಿದ್ದಾರೆ. ಇದನ್ನು ಕೂಡಲೇ ತಡೆಗಟ್ಟಿ ಜಲಜೀವನ ಮಿಷಿನ್ ಕಾಮಗಾರಿಯನ್ನು ಸರಿಯಾದ ರೀತಿಯಲ್ಲಿ ಮೇಲ್ವಿಚಾರಣೆ ಮಾಡುವುದರಿಂದ ಗ್ರಾಮಗಳಿಗೆ ನೀರನ್ನು ಪೂರೈಸಿದರೆ ಕೇಂದ್ರ ಸರ್ಕಾರದ ಮಹತ್ವದ ಯೋಜನೆಗೆ ಬಲ ಬಂದಂತಾಗುತ್ತದೆ. ನಂತರ ಇ-ಸ್ವತ್ತು ಪಂಚತಂತ್ರ 2.0 ತಂತ್ರಾಂಶ ಬಂದ ನಂತರ ಅನೇಕ ತೊಂದರೆಗಳನ್ನು ಗ್ರಾಮಪಂಚಾಯಿತಿಗಳು ಅನುಭವಿಸುತ್ತಿದ್ದು, ಗ್ರಾಮಠಾಣಾದಲ್ಲಿ ಇರುವಂತಹ ಆಸ್ತಿಯು ಗ್ರಾಮಠಾಣದ ಹೊರಗಡೆ ಇದೆ ಎಂದು ತೋರಿಸುತ್ತಿರುವುದರಿಂದ ತೊಂದರೆಯಲ್ಲಿರುವಂತಹ ಸಾರ್ವಜನಿಕರಿಗೆ ಆ ಆಸ್ತಿಗಳನ್ನು ತಮ್ಮ ಕಷ್ಟಗಳಿಗೆ ಬಳಸಿಕೊಳ್ಳಲು ಆಗದೇ ಸಾಯುವಂತಹ ಪರೀಸ್ಥಿತಿ ಎದುರಾಗಿದೆ. ರಾಜ್ಯದ ಗ್ರಾಮಪಂಚಾಯಿತಿಗಳಿಗೆ 15ನೇ ಹಣಕಾಸು ಅನುದಾನ ವರ್ಷದ ಆರಂಭದಲ್ಲಿ ಬರದೇ ಮೊದಲನೇ ಕಂತು ನವೆಂಬರ್‌ನಲ್ಲಿ ಬಂದಿರುತ್ತದೆ. ಎರಡನೇ ಕಂತು ಬಿಡುಗಡೆಯಾಗದೆ ಗ್ರಾಮಪಂಚಾಯಿತಿ ಸದಸ್ಯರು ಗ್ರಾಮಗಳ ಅಭಿವೃದ್ದಿ ಮಾಡಲು ಆಗದೇ ಪರಿತಪಿಸುವಂತಾಗಿದೆ. ವಸತಿ ಯೋಜನೆ ಗ್ರಾಮ ಪಂಚಾಯಿತಿ ಸದಸ್ಯರು ಚುನಾಯಿತರಾಗಿ ಬಂದಾಗಿನಿಂದ ಇಲ್ಲಿಯವರೆಗೂ ರಾಜ್ಯ ಸರ್ಕಾರವು ವಸತಿ ಯೋಜನೆಗಳಲ್ಲಿ ಮನೆಗಳನ್ನು ನೀಡದೇ ಇರುವುದರಿಂದ ಗ್ರಾಮಗಳಲ್ಲಿ ಸಾರ್ವಜನಿಕರು ಹಾಳು ಬಿದ್ದಿರುವ ಮನೆಗಳಲ್ಲಿ ಮತ್ತು ಗುಡಿಸಲುಗಳಲ್ಲಿ ಭಯದಿಂದ ವಾಸಿಸುತ್ತಿದ್ದು, ಗ್ರಾಮ ಪಂಚಾಯಿತಿ ಸದಸ್ಯರಿಗೆ ಮನಬಂದಂತೆ ಬೈಯುತ್ತಿದ್ದು, ಗ್ರಾಮ ಪಂಚಾಯಿತಿ ಸದಸ್ಯರು, ತಲೆ ಎತ್ತಿಕೊಂಡು ತಿರುಗಾಡಲು ಸಾಧ್ಯವಾಗುತ್ತಿಲ್ಲ. ಕಾರಣ ರಾಜ್ಯ ಸರ್ಕಾರವು ಕೂಡಲೇ ಸ್ಪಂದಿಸುವ ಮುಖಾಂತರ ವಸತಿ ಯೋಜನೆಯಲ್ಲಿ ಮನೆಗಳನ್ನು ಮಂಜೂರು ಮಾಡಬೇಕೆಂದು ತಿಳಿಸಿದರು. ಹಾಗೂ ರಾಜ್ಯ ಸರ್ಕಾರವು ಮುಂಬರುವ ಬಜೆಟ್‌ನಲ್ಲಿ ಭಾರತ್ ಸ್ಕೌಟ್ಸ್ ಆಂಡ್ ಗೈಡ್ಸ್ ಸಂಸ್ಥೆಗೆ ಅನುದಾನವನ್ನು ನೀಡಬೇಕು ಎಂದು ಸರ್ಕಾವರನ್ನು ಕೇಳಿಕೊಳ್ಳುತ್ತಿದ್ದೇವೆ. ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿಗಳಲ್ಲಿ ಸರಿಯಾದ ಸಮಯಕ್ಕೆ ಚುನಾವಣೆ ನಡೆಯದೇ ಇರುವುದರಿಂದ ಗ್ರಾಮಗಳ ಅಭಿವೃದ್ದಿ ಕುಂಟಿತವಾಗಿರುತ್ತವೆ. ಸ್ಥಳಿಯ ಸರ್ಕಾರಗಳನ್ನು ಬಲಪಡಿಸಲು ತಕ್ಷಣವೇ ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆ ನಡೆಸಬೇಕೆಂದು ತಿಳಿಸಿರುತ್ತಾರೆ. ಈ ಸಂದರ್ಭದಲ್ಲಿ ಹೊಸಪೇಟೆ ತಾಲೂಕು ಅಧ್ಯಕ್ಷರಾದ ಗೋವಿಂದ ನಾಯ್ಕ್, ದೊರೆ, ತಳವಾರ್ ವಿಜಯಕುಮಾರ್, ತಾಯಪ್ಪ, ಪರ್ವತರೆಡ್ಡಿ, ಎಂ.ಲಕ್ಷ್ಮಣ, ಯಮನೂರ್ಪ.ಕೆ, ವೆಂಕಟೇಶ್ ನಾಯ್ಕ್, ಇನ್ನು ಮುಂತಾದವರು ಉಪಸ್ಥಿತರಿದ್ದರು.