ಪ್ರತಿಭಟನೆಯಲ್ಲಿ ಅಂಬೇಡ್ಕರ್ರ ಭಾವಚಿತ್ರ ಬಳಸಬೇಡಿ: ಕಾಳೆ

ಧಾರವಾಡ 25: ದಲಿತ ಮುಖಂಡರು ಜನರಿಗೆ ಜಾಗೆ ಸಮಸ್ಯೆ ಮತ್ತು ಜಮೀನುಗಳಿಗೆ ಸಂಬಂಧಪಟ್ಟಂತೆ ಪ್ರತಿಭಟನೆ ಮಾಡುವಾಗ ಬಾಬಾ ಸಾಹೇಬ ಅಂಬೇಡ್ಕರ್ ರವರ ಭಾವಚಿತ್ರವನ್ನು ಅಲ್ಲಿ ಹಾಕಿ ಡಾ: ಅಂಬೇಡ್ಕರವರಿಗೆ ಅವಮಾನ ಮಾಡಬಾರದು. ಸಂಬಂಧಪಟ್ಟ ಪೊಲೀಸ್ ಠಾಣೆ ಅಧಿಕಾರಿರವರಿಗೆ ಭೇಟಿಯಾಗಿ ವಿಷಯ ತಿಳಿಸಿ ಸಮಸ್ಯೆ ಪರಿಹರಿಸಿಕೊಳ್ಳಲು ಶಿವಳ್ಳಿ ಗ್ರಾಮದ ಪರಮೇಶ್ವರ ಕಾಳೆ ಕೋರಿದರು. 

ಧಾರವಾಡ ಜಿಲ್ಲಾ ಪೊಲೀಸ್ ಹೆಡ್ಕ್ವಾರ್ಟರ್ಸ್ನ ದುಗರ್ಾದೇವಿ ಕಲ್ಯಾಣಮಂಟಪದಲ್ಲಿ ನವಂಬರ್ 24 ರಂದು ಜರುಗಿದ ಜಿಲ್ಲಾ ಪೊಲೀಸ್ ಅಧೀಕ್ಷಕಿ ವತರ್ಿಕಾ ಕಟಿಯಾರ್ ಅವರ ಅಧ್ಯಕ್ಷತೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕುಂದುಕೊರತೆ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.


ಕುಂದಗೋಳ ತಾಲೂಕಿನ ವಿಠಲಾಪೂರ ಗ್ರಾಮದ ಲಕ್ಷ್ಮವ್ವ ಹರಿಜನ ರವರು ಪೊಲೀಸ್ ಅಧೀಕ್ಷಕರಿಗೆ ಭೇಟಿಯಾಗಿ ಈಗಾಗಲೇ ತಮ್ಮ ಗ್ರಾಮದಲ್ಲಿ ಮನೆ ಕಟ್ಟಿಕೊಡುವುದಾಗಿ ಧಾರವಾಡ ಜಿಲ್ಲಾಡಳಿತದಿಂದ ಭರವಸೆ ನೀಡಿದ್ದರು. ಆದರೆ ಇಲ್ಲಿಯವರೆಗೂ ಮನೆ ಕಟ್ಟಿಕೊಟ್ಟಿರುವುದಿಲ್ಲ ಅಂತಾ ತಿಳಿಸಿ ಬೇಗನೆ ಮನೆ ಕಟ್ಟಿಕೊಡುವಂತೆ ಕೋರಿಕೊಂಡರು. 

ಸಭೆಯಲ್ಲಿ ಹಾಜರಿದ್ದ ದಲಿತ ಮುಖಂಡರು ತಮ್ಮ ತಮ್ಮ ಗ್ರಾಮಗಳಲ್ಲಿ ಕುಡಿಯುವ ನೀರು, ಚರಂಡಿ ಮತ್ತು ರಸ್ತೆ ಸಮಸ್ಯಗಳನ್ನು ಸರಿಪಡಿಸಿಕೊಡಬೇಕು ಎಂದು ಹೇಳಿದರು. 

ಸಭೆಯಲ್ಲಿ ಉಪಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ನಾಯ್ಕ ಮತ್ತು ಜಿಲ್ಲೆಯ ಎಲ್ಲ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಗಳು ಮತ್ತು ಜಿಲ್ಲಾ ದಲಿತ ಸಂಘಟನೆಯ ಸಂಚಾಲಕ ಅಶೋಕ ದೊಡ್ಡಮನಿ, ಅಜರ್ುನ ವಡ್ಡರ ಮತ್ತು ಮುಖಂಡರಾದ ರಮೇಶ ಚಲವಾದಿ, ಈರಣ್ಣ ಶಿಡಗಂಟಿ, ಬಿ.ಬಿ.ಹೊನ್ನಕುಂದರಿ, ನಾಗರಾಜ ಕಾಳೆ, ರಾಘವೆಂದ್ರ ರಾಮಗಿರಿ, ಅಂದಾನೆಪ್ಪ ಕಾಳೆ, ಪ್ರವೀಣ ಪವಾರ, ಬಸವರಾಜ ಮಾದರ, ವೆಂಕಟೇಶ ಸಕ್ಬಾಲ್, ಫಕ್ಕೀರಪ್ಪ ಕಾಳೆ, ಮಲ್ಲಪ್ಪ ಹಳಕಟ್ಟಿ, ಗದಿಗೆಪ್ಪ ಹಂಚಿನಮನಿ ಹಾಗೂ ಚಂದ್ರು ಹುಲ್ಲಣ್ಣವರ  ಭಾಗವಹಿಸಿದ್ದರು.