ಪಟ್ಟಣದಲ್ಲಿ ಬ್ಯಾನರ್ ಬಂಟಿಂಗ್ಸ್ ಹಾಕಬೇಡಿ ಅಧ್ಯಕ್ಷರು ಮಾಜಿ ಶಾಸಕ ಸುರೇಶ್ ಗೌಡ ಪಾಟೀಲ
ಬ್ಯಾಡಗಿ 16: ಪಟ್ಟದಲ್ಲಿ ಮಾರ್ಚ್ 01 ರಿಂದ 7 ರವರೆಗೆ ನಡೆಯುವ ಗ್ರಾಮ ದೇವತೆ ದ್ಯಾಮವ್ವ ದೇವಿಯ ಜಾತ್ರಾ ಮಹೋತ್ಸವ ನಿಮಿತ್ತ ಸುಮಾರು ಹತ್ತೂವರೆ ಕಿಲೋ ಮೀಟರ್ ನಷ್ಟು ಮೆನ ಮೆನ ಜಾಗದಲ್ಲಿ 25 ಲಕ್ಷ ವೆಚ್ಚದಲ್ಲಿ ದೇವಿಯ ಲ್ಯೇಟ್ ಮೂಲಕ ಸಿಂಗರಿಸಲಾಗುವುದು ಕಾರಣ ಯಾವತ್ತೂ ಪಟ್ಟಣದ ಸಮಸ್ತ ನಾಗರಿಕರು ಬ್ಯಾನರ್ ಹಾಗೂ ಬಂಟಿಂಗ್ಸ್ ಹಾಕಬೇಡಿ ಬೇಡಿ ಎಂದು ಸಲಹೆ ನೀಡಿದರು.
ರವಿವಾರ ಪಟ್ಟಣದ ದ್ಯಾಮವ್ವ ದೇವಿಯ ದೇವಸ್ಥಾನದಲ್ಲಿ ನಡೆದ ಜಾತ್ರಾ ಮಹೋತ್ಸವದ ಆಹ್ವಾನ ಪತ್ರಿಕೆ ಬಿಡುಗಡೆ ಗೊಳಿಸುವ ಮೂಲಕ ಮಾತನಾಡಿದವರು ಪ್ರತಿ ಐದು ವರ್ಷಕ್ಕೊಮ್ಮೆ ನಡೆಯುವ ಜಾತ್ರೆ ಪಟ್ಟಣದ ಎಲ್ಲ ಸಮಾಜದವರು ಹಾಗೂ ಗುರು ಹಿರಿಯರ ಸಹಕರಿಸಿ ಜಾತ್ರೆಯನ್ನು ವಿಜೃಂಭಣೆಯಿಂದ ನಡೆಸಲು ಸಹಕರಿಸಬೇಕು ಎಂದು ಹೇಳಿದರು.
ಈ ವೇಳೆ ಜಾತ್ರಾ ಕಮಿಟಿ ಕಾರ್ಯದರ್ಶಿ ಗಂಗಣ್ಣ ಎಲಿ ಮಾತನಾಡಿ ಗ್ರಾಮ ದೇವತೆ ದ್ಯಾಮವ್ವ ದೇವಿಯ ಜಾತ್ರೆಯು ಮಾರ್ಚ್ 1 ರಂದು ಶನಿವಾರ ಮುಂಜಾನೆ 10 ಘಂಟೆಗೆ ಅಧ್ಯಕ್ಷರಿಂದ ಧ್ವಜಾರೋಹಣ ಕಾರ್ಯಕ್ರಮ ನಡೆಯಲಿದೆ.ಸಂಜೆ 6 ಘಂಟೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಕನ್ನಡ ಕೋಗಿಲೆಯ ವಿನ್ನರ್ ಖಾಸಿಂ ಅಲಿ ಇವೆಂಟ್ಸ್ ತಂಡದಿಂದ ದಿನ ನಿತ್ಯ ಜಾನಪದ ಕಾರ್ಯಕ್ರಮ ನಡೆಯಲಿವೆ.ಮಾರ್ಚ 02 ರಂದು ಬೆಳಗ್ಗೆ 8.00 ಘಂಟೆಗೆ ದೇವಿಯ ಘಟಸ್ಥಾಪನೆ.ದೇವಿಗೆ ಅಲಂಕಾರ.ಅಭಿಷೆಕ ನವಗ್ರಹ ಅಷ್ಟದಿಕ್ಪಾಲಕರ ಮತ್ತು ಸಪ್ತಸಭಾಪತಿಗಳ ಪೂಜೆ.ದುರ್ಗಾ ಹೋಮ ಪೂಜೆ ಕಾರ್ಯಕ್ರಮ ನಡೆಯಲಿದೆ.
ಮಾರ್ಚ03 ಸೋಮುವಾರ ರಂದು ಬೆಳಗ್ಗೆ 9.00 ಘಂಟೆಗೆ ಸಕಲದೇವತೆಗಳಿಗೆ ಉಡಿ ತುಂಬುವ ಕಾರ್ಯಕ್ರಮ ಮಧ್ಯಾಹ್ನ 2.00 ಘಂಟೆಗೆ ಅಂಕಿ ಹಾಕುವುದು ಅಂದು ಬೆಳಿಗ್ಗೆ 10.00 ಗಂಟೆಯಿಂದ ಸಂಜೆ 4.00 ಘಂಟೆವರೆಗೆ ಸಂತೆ ಮೈದಾನದಲ್ಲಿ ದೇಶಿ ತಳಿ ಜಾನುವಾರುಗಳ ಪ್ರದರ್ಶನ ನಡೆಯಲಿದೆ.ಮಾ.04.ಮಂಗಳವಾರ ಬೆಳಗ್ಗೆ 08.00ಘಂಟೆಯಿಂದ ಮಧ್ಯಾಹ್ನ 4 ಘಂಟೆವರೆಗೆ ಗ್ರಾಮ ದೇವತೆಗೆ ಊಡಿ ತುಂಬುವ ಕಾರ್ಯಕ್ರಮ.ನಂತರ ದೇವಿಯ ಮೆರವಣಿಗೆ ಸಾಯಂಕಾಲ 4.35 ರಿಂದ ಬೆಳಿಗ್ಗೆ 3.00 ಘಂಟೆಯ ವರೆಗೆ ಆಕರ್ಷಕ ಸಕಲ ಕಲಾತಂಡಗಳು ಹಾಗೂ ವಾದ್ಯ ವೈಭವಗಳೂಂದಿಗೆ ಸುಮಾರು 10.30 ಕಿಲೋ ಮೀಟರ್ ಮೆರವಣಿಗೆ ನಡೆಯಲಿದೆ.ಮಾ.05 ರಂದು ಬುಧುವಾರ ಬೆಳಗ್ಗೆ 3 ಕ್ಕೆ ಶ್ರೀ ದೇವಿಯ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ರಾಣಗೇರ ಕಾರ್ಯಕ್ರಮಗಳು ನಡೆಯಲಿವೆ.ಮಾ 06 ರ ಗುರುವಾರ ಮಧ್ಯಾಹ್ನ 3.00 ಗಂಟೆಗೆ ಗಡಿ ವೀಮೊಚನಾ ಕಾರ್ಯಕ್ರಮ ನಡೆಯಲಿದೆ.
ಮಾ07 ನೇ ಶುಕ್ರವಾರ ಬೆಳಗ್ಗೆ 8.00 ಗಂಟೆಗೆ ದೇವಿಯ ಮಂದಿರ ಪ್ರವೇಶ ರುದ್ರಾಭೀಷೆಕ ಬಿಲ್ವಾರ್ಚನೆ ಕುಂಕುಮಾರ್ಚನೆ ಉಡಿತುಂಬುವುದು. ನಂತರ ಮಹಾ ಮುಂಗಲ ಕಾರ್ಯಕ್ರಮ.ಸಂಜೆ 06 ಘಂಟೆಗೆ ಹುಕ್ಕೇರಿ ಮಠದ ಸದಾಶಿವ ಮಹಾಸ್ವಾಮಿಗಳು ಪೂಜ್ಯರ ದಿವ್ಯ ಸಾನಿಧ್ಯದಲ್ಲಿ ಅಭಿನಂದನಾ ಸಮಾರಂಭ ಮತ್ತು ಧರ್ಮ ಸಭೆ.ವಿಷೆಶ ದಾನಿಗಳಿಗೆ ಹಾಗೂ ಕಾರ್ಯಕರ್ತರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿವೆ ಕಾರಣ ಪಟ್ಟಣದ ಎಲ್ಲ ಸಮಾಜದ ನಾಗರಿಕರು ಸದ್ಭಕ್ತರು ಹಾಗೂ ಹಿರಿಯರ ತನು ಮನ ಧನದಿಂದ ಸೇವೆ ಸಲ್ಲಿಸಿ ದೇವಿ ಕೃಪೆಗೆ ಪಾತ್ರರಾಗಿರಿ ಎಂದು ಹೇಳಿದರು .ಈ ಸಂದರ್ಭದಲ್ಲಿ ಬಸಣ್ಣ ಛತ್ರದ.ಪುಟ್ಟಪ್ಪ ಛತ್ರದ.ಪ್ರಶಾಂತ ಹಾಲನಗೌಡ್ರ.ರಮೇಶ ಮೊಟೆಬೆನ್ನೂರ.ಶಂಭು ಮಠದ.ರಾಮಣ್ಣ ಕೋಡಿಹಳ್ಳಿ.ವಿನಯ ಹೀರೆಮಠ.ಅಪ್ಪಣ್ಣ ಶೆಟ್ಟರ.ಚಿಕ್ಕಪ್ಪ ಚತ್ರದ.ಹಾಗೂ ಎಲ್ಲಾ ಜಾತ್ರಾ ಕಮಿಟಿಯ ಸದಸ್ಯರು ಉಪಸ್ಥಿತರಿದ್ದರು.