ಮಕ್ಕಳಿಗಾಗಿ ಆಸ್ತಿ ಮಾಡದೆ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ:ಪಟೇಲ್
ಕೊಪ್ಪಳ 27: ಇಂದಿನ ಮಕ್ಕಳೇ ಈ ನಾಡಿನ ಭಾವಿಪ್ರಜೇ ಗಳಾಗಿದ್ದು ಮಕ್ಕಳ ಭವಿಷ್ಯ ಉಜ್ವಲ ಗೊಳ್ಳಲು ಅವರಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಅಗತ್ಯ, ಪಾಲಕರು ಮಕ್ಕಳಿಗಾಗಿ ಯಾವುದೇ ಆಸ್ತಿ ಮಾಡದೆ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ ಅವರಿಗೆ ಉತ್ತಮ ಸಂಸ್ಕಾರ ಕಲಿಸಿಕೊಡಿ. ಗುಣಮಟ್ಟದ ಶಿಕ್ಷಣ ಕೊಡಿಸುವಂತಹ ಕೆಲಸ ಮಾಡಿ ಎಂದು ಕೊಪ್ಪಳ ನಗರಸಭೆಯ ಅಧ್ಯಕ್ಷ ಅಮ್ಜದ್ ಪಟೇಲ್ ಹೇಳಿದರು, ಅವರು ಬುಧವಾರ ಬೆಳಿಗ್ಗೆ ನಗರದ ಸರದಾರಗಲ್ಲಿ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲಾ ಅವರಣದಲ್ಲಿ ಏರಿ್ಡಸಿದ ಉರ್ದು ಶಾಲಾ ವಿದ್ಯಾರ್ಥಿಗಳ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು, ಮುಂದುವರೆದು ಮಾತನಾಡಿದ ಅವರು ಉರ್ದು ಭಾಷೆ ಯಾವುದೇ ಒಂದು ಜನಾಂಗಕ್ಕೆ ಸೀಮಿತವಾದ ಭಾಷೆಯಲ್ಲ ಇದು ನಮ್ಮ ಭಾರತದ ಪ್ರತಿಯೊಬ್ಬ ಭಾರತೀಯ ಭಾಷೆಯಾಗಿದೆ ಇಲ್ಲೇ ಹುಟ್ಟಿ ಬೆಳೆದ ಭಾಷೆ ಇದಾಗಿದೆ ಜಗತ್ತಿ ನಲ್ಲಿ ಎರಡನೇ ಅತಿ ದೊಡ್ಡ ಭಾಷೆ ಉರ್ದು ಭಾಷೆಯಾಗಿದೆ ಎಂದರು.
ಹಿಂದುಳಿದ ಅಲ್ಪಸಂಖ್ಯಾತ ಸಮುದಾಯವನ್ನು ಮುಖ್ಯ ವಾಹಿನಿಗೆ ತರಲು ಮತ್ತು ಅವರಿಗೆ ಮಾತ್ರು ಭಾಷೆಯಲ್ಲಿಯೇ ಶಿಕ್ಷಣ ಕಲಿಯಲು ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸಿದೆ ಸ್ಥಳೀಯ ಶಾಸಕ ಕೆ ರಾಘವೇಂದ್ರ ಹಿಟ್ನಾಳ ರವರು ಕೂಡ ಅತ್ಯಂತ ಕಾಳಜಿ ವಹಿಸಿ ನಮ್ಮ ಸಮುದಾಯದ ಬೇಕು ಬೇಡಿಕೆಗಳ ಈಡೇರಿಕೆಗಾಗಿ ಪ್ರಮಾಣಿಕ ಪ್ರಯತ್ನ ಮಾಡುತ್ತಾ ಬಂದಿದ್ದಾರೆ ನಮ್ಮ ಸಮಾಜ ಇಂದು ಶಿಕ್ಷಣಕ್ಕೆ ಹೆಚ್ಚಿನ ಒತ್ತುಕೊಟ್ಟು ಅಭಿವೃದ್ಧಿ ಹೊಂದಬೇಕು ಈ ದಿಶೆಯಲ್ಲಿ ಪ್ರತಿಭಾ ಕಾರಂಜಿ ಕಾರ್ಯಕ್ರಮ ನಡೆಯುತ್ತಿರುವುದು ಉತ್ತಮ ಬೆಳವಣಿಗೆ ಇದರಿಂದ ಮಕ್ಕಳಲ್ಲಿ ಅಡಗಿರುವ ಪ್ರತಿಭೆಗಳನ್ನು ಗುರುತಿಸುವಂತಹ ವೇದಿಕೆ ಇದಾಗಿದೆ ಎಂದು ಕೊಪ್ಪಳ ನಗರಸಭೆಯ ಅಧ್ಯಕ್ಷ ಅಮ್ಜದ್ ಪಟೇಲ್ ಹೇಳಿದರು.
ಸಮಾರಂಭದ ಉದ್ಘಾಟನೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಟಿಎಸ್ ಶಂಕ್ರಯ್ಯ ನೆರವೇರಿಸಿ ಮಾತನಾಡಿದರು ,ವೇದಿಕೆ ಮೇಲೆ ಮುಖ್ಯ ಅತಿಥಿಗಳಾಗಿ ಯುವ ನಾಯಕ ಕೆ ಸೋಮಶೇಖರ್ ಹಿಟ್ನಾಳ್ ನಿವೃತ ಉರ್ದು ಪ್ರಾಧ್ಯಾಪಕ ಅನ್ವರ್ ಹುಸೇನ್, ನಗರ ಕಾಂಗ್ರೆಸ್ ಅಧ್ಯಕ್ಷ ಎಂ ಪಾಷಾ ಕಾಟನ್ ಸಮಾಜಸೇವಕರಾದ ಮಾನ್ವಿ ಪಾಷಾ ಹುಸೇನ್ ಪೀರಾ ಮುಜಾವರ್, ಸಲೀಂ ಆಲ್ವಂಡಿ, ನಿವೃ ತ ವೃತ್ತಿ ಶಿಕ್ಷಕ ಅಮೀರ್ ಹಮ್ ಜಾ ನದಾಫ್ ಉಪಪ್ರಚಾರ್ಯರಾದ ಎಂಎ ಕೈಯುಂ, ಖಾದರ್ ಸಾಬ್ ಕುದುರೆಮೋತಿ ಶಾಬುದ್ದೀನ್ ಸಾಬ್ ನೂರ್ ಬಾಷಾ ಕ್ಷೇತ್ರ ಸಮನ್ವಯ ಅಧಿಕಾರಿ ಪ್ರಕಾಶ್, ಹಿರಿಯ ಪತ್ರಕರ್ತ ಸಾಧಿಕ್ ಅಲಿ, ಶಿಕ್ಷಣ ಇಲಾಖೆಯ ವಿವಿಧ ಅಧಿಕಾರಿಗಳಾದ ಸಿಆರ ಪೀ ಹನುಮಂತಪ್ಪ ಕುರಿ, ಯ ಲ್ಲಪ್ಪ, ಸೈಲಾನ್ ಬಾಷಾ, ಉರ್ದು ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ನಫೀಸ ಪಠಾನ್, ಉರ್ದು ಸಿ ಆರ್ ಪಿ ಮೈನುದ್ದೀನ್ ಅತ್ತಾರ್ ಹನುಮಂತಪ್ಪ ಕೆ ಆರ್, ಹುಲುಗಪ್ಪ ಭಜಂತ್ರಿ ವಿಕಲಚೇತನ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಬೀರ್ಪ ಅಂಡಗಿ ಇಸಿಓ ವೈ ಶಂಪೋಯನ ಬಸ್ಸನಗೌಡ, ಹೋಳಿ ಬಸಯ್ಯ, ಬಾಳಪ್ಪ ಕಾಳಿ, ಶಿವಪ್ಪ ಜೋಗಿ, ಶ ಮ್ ಶಾದ್ ಬೇಗಂ, ಶರಣಪ್ಪ ಗೌಡ ಪಾಟೀಲ್ ಮತ್ತು ಮುಸ್ಲಿಂ ಸಮಾಜದ ಹಿರಿಯ ಉರ್ದು ಸಾಹಿತಿ ಎಂ ಎ ಮಾಜಿ ಸಿದ್ದಿಕಿ ಅಲಿಯಾಸ್ ನಿಸಾರ್ ಮಾಸ್ಟರ್ ಸೇರಿದಂತೆ ಅನೇಕರು ಉಪಸಿದ್ಧರಿದ್ದು ನಂತರ ವಿವಿಧ ಉರ್ದು ಶಾಲಾ ವಿದ್ಯಾರ್ಥಿಗಳಿಂದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು, ಅಚ್ಚುಕಟ್ಟಾದ ವ್ಯವಸ್ಥೆ ಮಾಡಲಾಗಿತ್ತು ಶಾಲಾ ವಿದ್ಯಾರ್ಥಿಗಳು ಸಂಭ್ರಮದಿಂದ ಪಾಲ್ಗೊಂಡಿದ್ದರು, ಸಹ ಶಿಕ್ಷಕರು ಆಯಾ ಶಾಲಾ ಮುಖ್ಯ ಶಿಕ್ಷಕರು ಒಳ್ಳೆಯ ವ್ಯವಸ್ಥೆ ಮಾಡಿ ಮಕ್ಕಳ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮಕ್ಕೆ ಶ್ರಮಿಸಿದರು ,ಕಾರ್ಯಕ್ರಮ ಯಶಸ್ವಿಗೊಳಿಸಿದ್ದಕ್ಕೆ ಸರಕಾರಿ ಉರ್ದು ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷರಾದ ನಫೀಸ್ ಪಠಾನ್ ಮತ್ತು ಉರ್ದು ಸಿಆರ್ ಪೀ ಮೈನುದ್ದೀನ್ ಅತ್ತಾರ ರವರು ಪ್ರತಿಯೊಬ್ಬರಿಗೆ ಅಭಿನಂದಿಸಿದರು,