ಸಾಧನೆಯ ಗುರಿಯಿದ್ದಾಗ ಛಲ ಬಿಡದಿರಿ: ರಾಠೋಡ ಹೇಳಿದರು
ಹಿಟ್ನಳ್ಳಿ 19: ಸಾಧನೆಗಾಗಿ ಸಾಧಿಸುವ ಸಮಯದಲ್ಲಿ ಸತ್ತರು ಚಿಂತೆಯಿಲ್ಲ ಸಾಧಿಸುವ ಛಲ ಬಿಡಬಾರದೆಂದು ಯುವ ಕ್ರೀಡಾ ಪಟು ಹಾಗೂ ಹಿಟ್ನಳ್ಳಿ ಗ್ರಾಮ ಪಂಚಾಯತ ಸದಸ್ಯರು ಆಗಿರುವ ಪ್ರಶಾಂತ ವ್ಹಿ ರಾಠೋಡ ಹೇಳಿದರು.
ಅವರು ದೇವರಹಿಪ್ಪರಗಿ ತಾಲೂಕಿನ ಹಿಟ್ನಳ್ಳಿ ಗ್ರಾಮ ಪಂಚಾಯತ ವತಿಯಿಂದ ಅಭಿನಂದನಾ ಸಮಾರಂಭದ ಅಭಿನಂದನೆಗಳನ್ನು ಸ್ವೀಕರಿಸಿ ಮಾತನಾಡಿದ ಅವರು ವಾರಣಾಸಿಯಲ್ಲಿ ನಡೆದ ರಾಷ್ಟ್ರಮಟ್ಟದ ಟೆನಿಸ್ ಫೆೆರಡೆಶನ್ ಕಪ್ ನಲ್ಲಿ ಕರ್ನಾಟಕ ತಂಡದಿಂದ ಭಾಗವಹಿಸಿ ರಾಷ್ಟ್ರಮಟ್ಟದಲ್ಲಿ ವಿಜೇತರಾಗಿರುವ ಪ್ರಶಾಂತ ಅವರು ಸ್ವ-ಗ್ರಾಮ ಹಿಟ್ನಳ್ಳಿ ತಾಂಡಾಕ್ಕೆ ಆಗಮಿಸಿದ ನಂತರ ಹಿಟ್ನಳ್ಳಿ ಗ್ರಾಮ ಪಂಚಾಯತ ವತಿಯಿಂದ ಅಭಿನಂದನೆಯನ್ನು ಸ್ವೀಕರಿಸಿ ಸಾಧನೆಗೆ ಅಸಾಧ್ಯವಾದದ್ದು ಯಾವುದು ಇಲ್ಲವೆಂದು ಹೇಳಿದರು.
ಎರಡನೆ ತಂಡದಿಂದ ಆಯ್ಕೆಯಾದ ಯುವ ಕ್ರೀಡಾ ಪಟು ಶಿವರಾಜ ರಾಠೋಡ ಇವರನ್ನು ಕೂಡಾ ಪಂಚಾಯತಿ ವತಿಯಿಂದ ಸನ್ಮಾನಿಸಲಾಯಿತು.
ಗ್ರಾಮ ಪಂಚಾಯತಿ ಅಧ್ಯಕ್ಷೆ ರತ್ನಾಬಾಯಿ ಮಾದರ, ಉಪಾಧ್ಯಕ್ಷ ಮಲ್ಲು ದೊಡಮನಿ, ಪಂಚಾಯತ ಅಭಿವೃದ್ಧಿ ಅಧಿಕಾರಿ ವಿನೋದ ರಾಠೋಡ, ಸದಸ್ಯರುಗಳಾದ ಕಸ್ತೂರಿಬಾಯಿ ದೊಡಮನಿ, ಸಾಹೇಬಗೌಡ ಇಂಗಳಗಿ, ಲಾಳೆಸಾಹೆಬ ಚಟ್ಟರಕಿ, ಸೀತಾರಾಮ ರಾಠೋಡ, ಅನೀಲ ರಾಠೋಡ, ಗಡ್ಡೆಪ್ಪ ಹೊಸಮನಿ, ದಯಾನಂದ ನಾಯಿಕ, ಸಂಜೀವ ಹೊಸಮನಿ ಹಾಗೂ ಊರಿನ ಗಣ್ಯರಾದ ಶೇಟ್ಟಿ ರಾಠೋಡ, ವೇಣು ರಾಠೋಡ, ಶರಣು ನಾಯ್ಕೋಡಿ, ಪಂಚಾಯತಿ ಎಲ್ಲಾ ಸಿಬ್ಬಂದಿ ವರ್ಗದವರು ಮತ್ತು ಎಸ್‌ಡಿಎ ಗೀತಾ ದೇಸಾಯಿ, ಗ್ರಾಮ ಪಂಚಾಯತ ಗ್ರಂಥಾಲಯ ಮೇಲ್ವಿಚಾರಕ ರಮೇಶ ಕುಂಬಾರ ಉಪಸ್ಥಿತರಿದ್ದರು. ವೇಣು ರಾಠೋಡ ನಿರೂಪಿಸಿ ವಂದಿಸಿದರು.