ಸಂಗೀತಾ ಗರಗದಮಠಗೆ ಡಾಕ್ಟರೇಟ್ ಪದವಿ ಪ್ರದಾನ
Doctorate degree conferred on Sangeeta Garagadamath
ಸಂಗೀತಾ ಗರಗದಮಠಗೆ ಡಾಕ್ಟರೇಟ್ ಪದವಿ ಪ್ರದಾನ
ಬಾಗಲಕೋಟ 25: ನಗರದ ಬಿ. ವ್ಹಿ. ವ್ಹಿ ಸಂಘದ ಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯದ ಆಂಗ್ಲಭಾಷಾ ವಿಷಯದ ಉಪನ್ಯಾಸಕ ಸಂಗೀತಾ ಆರ್ ಗರಗದಮಠ ಅವರಿಗೆ ರಾಜಸ್ಥಾನದ ಅಲ್ವರ್ ದ ಸನ್ ರೈಸ್ ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿಯನ್ನು ನೀಡಿದೆ. ಡಾ. ಬಿ .ಓ. ಸತ್ಯನಾರಾಯಣ ರೆಡ್ಡಿರವರ ಮಾರ್ಗದರ್ಶನದಲ್ಲಿ ಅ ರಿಸರ್ಚ್ ಆನ್ ಅನ್ ಎಕ್ಸ್‌ಪೊಸಿಷನ್ ಆನ್ ವಾಲ್ಟ್ ವಿಟ್‌ಮನ್‌ಸ್ ಪೊಯೆಟ್ರಿ ಆನ್ ದ ಇನ್‌ಫ್ಲುವೆನ್ಸ್ ಆಫ್ ವೇದಿಕ್ ಫಿಲಾಸಫಿಎಂಬ ವಿಷಯದ ಮೇಲೆ ಸಂಶೋಧನೆ ಕೈಗೊಂಡಿದ್ದರು.
ಸಂಶೋಧನೆಯನ್ನು ಪೂರ್ಣಗೊಳಿಸಿದ ಸಂಗೀತಾ ಆರ್ ಗರಗದಮಠ ಇವರಿಗೆ ಬಿ. ವ್ಹಿ. ವ್ಹಿ ಸಂಘದ ಕಾರ್ಯಾಧ್ಯಕ್ಷ ಡಾ. ವೀರಣ್ಣ. ಸಿ. ಚರಂತಿಮಠ, ಬಿ. ವ್ಹಿ. ವ್ಹಿ ಸಂಘದ ಗೌರವ ಕಾರ್ಯದರ್ಶಿ ಮಹೇಶ ಎನ್. ಅಥಣಿ, ಕಾಲೇಜುಗಳ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಗುರುಬಸವ ಎಸ್. ಸುಳಿಭಾವಿ, ಬಿ. ವ್ಹಿ. ವ್ಹಿ ಸಂಘದ ಕಾಲೇಜುಗಳ ಆಡಳಿತ ಮಂಡಳಿಯ ಪದ ನಿಮಿತ್ತ ಕಾರ್ಯದರ್ಶಿ ಡಾ. ಎಸ್. ಎಮ್. ಗಾಂವಕರ, ಪ್ರಾಚಾರ್ಯ ಡಾ. ಜಗನ್ನಾಥ. ವಿ. ಚವ್ಹಾಣ, ಸಿಬ್ಬಂದಿ ಕಾರ್ಯದರ್ಶಿ ಡಾ. ಎಂ. ನಂಜುಂಡಸ್ವಾಮಿ ಹಾಗೂ ಮಹಾವಿದ್ಯಾಲಯದ ಬೋಧಕ, ಬೋಧಕೇತರ ಸಿಬ್ಬಂದಿಯವರು ಅಭಿನಂದಿಸಿದ್ದಾರೆ.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 