ಹಾವೇರಿ 04: ಬಸವಾದಿ ಶರಣರು ತಮ್ಮ ಅನುಭವಗಳ ಮೂಲಕ ಅರಿವಿನ ದೀಪವನ್ನು ಹಚ್ಚುವ ಕೆಲಸವನ್ನು ಮಾಡಿದರು ಎಂದು ಬಸವ ಶಾಂತಲಿಂಗ ಶ್ರೀಗಳು ಹೇಳಿದರು.
ನಗರದ ಬಸವ ಕೇಂದ್ರ ಹೊಸಮಠದಲ್ಲಿ ನಡೆದ ಆರದಿರಲಿ ಅರಿವಿನ ದೀಪ ಅರಳುತಿರಲಿ ಅನುಭಾವ ಪುಷ್ಟ ಕಾರ್ಯಕ್ರಮ ಹಾಗೂ ತಿಂಗಳ ಶರಣ ಸಂಗಮ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿ ಮಾತನಾಡಿದ ಶರಣರು ಲಿಂಗ, ಜಂಗಮ, ಪಾದೋದಕಗಳ ಕುರಿತು ಹಲವಾರು ಚಿಂತನ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ಹನ್ನೆರಡೇ ಶತಮಾನದಲ್ಲಿಯೇ ಶರಣರು ಸ್ತ್ರೀ ಸಮಾನತೆಗಾಗಿ ಅನುಭಾವ ಮಂಟಪದಲ್ಲಿ ಸ್ತ್ರೀಯರಿಗೆ ಅವಕಾಶ ಕಲ್ಪಿಸಿಕೊಟ್ಟು ಸ್ತ್ರೀ ಸಮಾನತೆಗಾಗಿ ಪ್ರಯತ್ನ ನಡೆಸಿದ್ದಾರೆ ಎಂದರು.
ಮೊದಲು ನೀನು ಬೆಳಗು ನಂತರ ಸಮಾಜವನ್ನು ಬೆಳಗಿಸು ಎಂದು ಸಮಾಜದ ಎಲ್ಲಾ ವರ್ಗದವರನ್ನು, ಜಾತಿ, ಕುಲ, ಬೇಧ-ಭಾವ ಮಾಡದೇ ಸರ್ವರನ್ನು ಒಗ್ಗೂಡಿಸಿ ಸಮಾಜದ ಸ್ವಾಸ್ಥ್ಯಕಾಪಾಡುವ ಕೆಲಸವನ್ನು ಮಾಡಿದ್ದಾರ ಬಸವಾದಿ ಪ್ರಮಥರು ತಮ್ಮ ವಚನಗಳಲ್ಲಿ ಕಾಯಕದ ಮಹತ್ವವನ್ನು ತಿಳಿಸಿಕೊಟ್ಟಿದ್ದು, ಅದನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಮಾಜ ಕಲ್ಯಾಣ ಇಲಾಖೆಯ ಉಪನಿದರ್ೇಶಕಿ ಡಾ|| ಬಿ.ವಿ. ಚೈತ್ರಾ ಮಾತನಾಡಿ, ಶಾಲಾ-ಕಾಲೇಜುಗಳು ಹಾಗೂ ಆಧುನಿಕ ತಂತ್ರಜ್ಞಾನಗಳು ಪ್ರತಿಯೊಬ್ಬರಿಗೂ ಜ್ಞಾನವನ್ನು ನೀಡುವ ಕೆಲಸಗಳ ನಿರ್ವಹಿಸುತ್ತಿವೆ ಆದರೆ ಮಠಗಳು ಸಮಾಜವನ್ನು ವಿವೇಕವಂತರನ್ನಾಗಿಸುವ ಕೆಲಸವನ್ನು ಮಾಡುತ್ತಿವೆ. ಹೀಗಾಗಿ ಶರಣರು ಇಂತಹ ಹಲವಾರು ಹತ್ತು ಹಲವು ಸಮಾಜ ಮುಖಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸಮಾಜವನ್ನು ತಿದ್ದುವ, ವಿವೇಕವಂತರನ್ನಾಗಿರುವ ಕೆಲಸವನ್ನು ಮಾಡಬೇಕೆಂದರು.
ಕಾರ್ಯಕ್ರಮದಲ್ಲಿ ಗದುಗಿನ ಡಾ|| ಸಿದ್ದಲಿಂಗ ಶ್ರೀಗಳಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು. ಇಂದಿರಾ ಕೊಪ್ಪದ ಉಪನ್ಯಾಸ ನೀಡಿದರು. ರತ್ನಾ ಸ್ವಾಗತಿಸಿದರು. ಮಲ್ಲಿಕಾಜರ್ುನ ಹಿಂಚಿಗೇರಿ ನಿರೂಪಿಸಿದರು. ವಚನ ಸಂಗೀತವನ್ನು ವೈಷ್ಣವಿ ನಡೆಸಿಕೊಟ್ಟರು.