ನಾಳೆ ಗದಗದಲ್ಲಿ ಜ್ಞಾನೇಶ್ವರಿ ಪೀಠದ ಉಭಯ ಶ್ರೀಗಳ ದೈವಜ್ಞ ದರ್ಶನ ಕಾರ್ಯಕ್ರಮ
Divine darshan program of the two saints of the Jnaneshwari Peetha in Gadag tomorrow
ಗದಗ 14:- ಶ್ರೀಮದ್ ಜಗದ್ಗುರು ಶಂಕರಾಚಾರ್ಯರು 'ಸಂಸ್ಥಾನ ದೈವಜ್ಞ ಬ್ರಾಹ್ಮಣ ಮಠಾದೀಶರಾದ ಪರಮ ಪೂಜ್ಯ ಸಚ್ಚಿದಾನಾಂದ ಜ್ಞಾನೇಶ್ವರ ಭಾರತೀ ಮಹಾಸ್ವಾಮಿಗಳವರ ಹಾಗೂ ಪರಮ ಪೂಜ್ಯ ಸುಜ್ಞಾನೇಶ್ವರ ಭಾರತೀ ಸ್ವಾಮಿಜಿಗಳವರ ದೈವಜ್ಞ ದರ್ಶನ ಕಾರ್ಯಕ್ರಮವನ್ನು ದೈವಜ್ಞ ಸಮಾಜೋನ್ನತಿ ಸಂಘ (ರಿ) ಗದಗ-ಬೆಟಗೇರಿ, ದೈವಜ್ಞ ಮಹಿಳಾ ಮಂಡಳಿ ಗದಗ-ಬೆಟಗೇರಿ, ಗೈವಜ್ಞ ಯುವಕ ಮಂಡಳಿ ಗದಗ-ಬೆಟಗೇರಿ ಇವರ ಸಂಯುಕ್ತಾಶ್ರಯದಲ್ಲಿ ಇದೇ ದಿನಾಂಕ 16-12-2025 ರ ಮಂಗಳವಾರ ದಂದು ಸಾಯಂಕಾಲ 4 ಘಂಟೆಗೆ ಗದಗ ಶಹರದ ಹುಬ್ಬಳ್ಳಿ ರಸ್ತೆ ಮುಳಗುಂದ ನಾಕಾದಲ್ಲಿರುವ ವಿಠ್ಠಲಾರೋಢ ಸಮುದಾಯ ಭವನದಲ್ಲಿ ದೈವಜ್ಞ ಬ್ರಾಹ್ಮಣ ಉಭಯ ಶ್ರೀಗಳಿಂದ ದೈವಜ್ಞ ದರ್ಶನ ಕಾರ್ಯಕ್ರಮವನ್ನು ಆಯೋಜಿಸಲಾಗಿರುತ್ತದೆ.
ಸಮಸ್ತ ಗದಗ ಬೆಟಗೇರಿ ಅವಳಿ ನಗರದ ದೈವಜ್ಞ ಬ್ರಾಹ್ಮಣ ಸಮಾಜ ಭಾಂದವರು ಉಭಯ ಶ್ರೀಗಳ ದೈವಜ್ಞ ದರ್ಶನ ಕಾರ್ಯಕ್ರಮದಲ್ಲಿ ಪುರುಷರು ಬಿಳಿ ಶರ್ಟು ಮತ್ತು ಬಿಳಿ ಲುಂಗಿ ಕೇಸರಿ ಶಲ್ಯ. ಯುವಕ ಮಂಡಳಿಯವರಿಗೆ ಬಿಳಿ ಜುಬ್ಬಾ ಮತ್ತು ಕೇಸರಿ ಶಲ್ಯ. ಧರಿಸಿಕೊಂಡು ಕಾರ್ಯಕ್ರಮದಲ್ಲಿ ಭಾಗವಹಿಸಿ ಜ್ಞಾನೇಶ್ವರಿ ದೇವಿಯ ಹಾಗೂ ಉಭಯ ಶ್ರೀಗಳ ಕೃಪಾಶಿರ್ವಾದಕ್ಕೆ ಪಾತ್ರರಾಗಲು ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ದೈವಜ್ಞ ದರ್ಶನ ಉತ್ಸವ ಸಮಿತಿ, ದೈವಜ್ಞ ಸಮಾಜೊನ್ನತಿ ಸಂಘ(ರಿ), ದೈವಜ್ಞ ಮಹಿಳಾ ಮಂಡಳಿ, ದೈವಜ್ಞ ಯುವಕ ಮಂಡಳಿಯ ವತಿಯಿಂದ ಸಮಸ್ತ ಸಮಾಜ ಭಾಂಧವರಲ್ಲಿ ವಿನಂತಿಸಲಾಗಿರುತ್ತದೆ.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 