ಹಾವೇರಿ 25: ಹಾವೇರಿ ಜಿಲ್ಲೆ ಹೃದಯವಂತರ ನಾಡು, ಆಧ್ಯಾತ್ಮಿಕ, ಸಾಮಾಜಿಕ, ಮಾನವೀಯ ಮೌಲ್ಯಯುಳ್ಳ ಜನ ಈ ಜಿಲ್ಲೆಯಲ್ಲಿ ಹೆಚ್ಚಾಗಿದ್ದಾರೆ. ಇಂತಹ ಜಿಲ್ಲೆಯಲ್ಲಿ ಕೆಲಸ ಮಾಡಲು ನನಗೆ ಅತ್ಯಂತ ಖುಷಿ ತಂದಿದೆ. ತೃಪ್ತಿಯಾದಕ ಸೇವೆ ಸಲ್ಲಿಸಿ ವಗರ್ಾವಣೆಯಾಗುತ್ತಿದೆ ಎಂದು ನಿರ್ಗಮಿತ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಅವರು ಹೇಳಿದರು.
ತೋಟಗಾರಿಕೆ ಇಲಾಖೆಯ ನಿದರ್ೆಶಕರಾಗಿ ವಗರ್ಾವಣೆಗೊಂಡಿರುವ ಡಾ.ಎಂ.ವಿ.ವೆಂಕಟೇಶ್ ಅವರಿಗೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ಜನಪ್ರತಿನಿಧಿಗಳು, ಜಿಲ್ಲೆಯ ಅಧಿಕಾರಿಗಳು, ಸಾಹಿತಿಗಳು ಆತ್ಮೀಯವಾಗಿ ಬೀಳ್ಕೊಡುಗೆ ನೀಡಿದರು.
ಈ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಹಾವೇರಿಯಲ್ಲಿ ಎರಡು ವರ್ಷ ಎಂಟು ತಿಂಗಳು ಕಾರ್ಯನಿರ್ವಹಿಸಿದ್ದು, ಅವಿಸ್ಮರಣೀಯ ದಿನಗಳು. ನನ್ನ ಸೇವಾ ಅವಧಿಯಲ್ಲಿ ಸುವಣರ್ಾಕ್ಷರದಲ್ಲಿ ಬರೆದಿರುವ ದಿವಸ. ಇಲ್ಲಿಯ ಜನಪ್ರತಿನಿಧಿಗಳು, ಮಾಧ್ಯಮ ಮಿತ್ರರು, ಸಾರ್ವಜನಿಕರು, ಅಧಿಕಾರಿ ವರ್ಗ ಹೆಜ್ಜೆ ಹೆಜ್ಜೆಗೂ ಬೆಂಗಾವಲಾಗಿ ನಿಂತು ನನ್ನ ಕೆಲಸಕ್ಕೆ ಪ್ರೋತ್ಸಾಹಿಸಿದ ಕಾರಣ ಉತ್ತಮ ಸೇವೆ ಸಲ್ಲಿಸಲು ಸಾಧ್ಯವಾಗಿದೆ. ಇಡೀ ರಾಜ್ಯಕ್ಕೆ ಮಾದರಿಯಾದಂತಹ ಕೆಲಸ ಮಾಡಲು ಸಾಧ್ಯವಾಗಿದೆ ಎಂದು ಸ್ಮರಿಸಿದರು.
ವೈದ್ಯನಾಗಿ ಸೇವೆ ಸಲ್ಲಿಸುತ್ತಿದ್ದ ನಾನು ಐಎಎಸ್ ಅಧಿಕಾರಿಯಾದಾಗ ರಾಜಧಾನಿಯಿಂದ ದೂರದ ಜಿಲ್ಲೆಯಲ್ಲಿ ಕೆಲಸಮಾಡಬೇಕು. ಆಗ ಮಾತ್ರ ಒಳ್ಳೆಯ ಹಾಗೂ ನಿಷ್ಠೂರವಾಗಿ ಕೆಲಸಮಾಡಲು ಸಾಧ್ಯ ಎಂದು ನಂಬಿದವನು. ಈ ನಿಟ್ಟಿನಲ್ಲಿ ಹಾವೇರಿಯಂತಹ ದೂರದ ಜಿಲ್ಲೆಯಲ್ಲಿ ಕೆಲಸಮಾಡುವಾಗ ಉತ್ತಮ ಕೆಲಸಮಾಡಿದ್ದೇನೆ. ಕೆಲವೊಮ್ಮೆ ನಿಷ್ಠೂರವಾಗಿ ನಡೆದುಕೊಂಡಿದ್ದೇನೆ. ಈ ಸಂದರ್ಭದಲ್ಲಿ ಯಾರಿಗಾದರೂ ನೋವು ಆಗಿದ್ದಾರೆ ವಿಷಾಧಿಸುತ್ತೇನೆ ಎಂದು ಹೇಳಿದರು.
ಸಕರ್ಾರಿ ಸೇವೆಯಲ್ಲಿ ವಗರ್ಾವಣೆ ಸಹಜ ಪ್ರಕ್ರಿಯೆ. ಹೊಸ ನೀರು ಬರಬೇಕು, ಹಳೆ ನೀರು ಹರಿಯಬೇಕು. ಆಗ ಮಾತ್ರ ಜಿಲ್ಲೆ ನಿರಂತರ ಬದಲಾವಣೆಯಿಂದ ಅಭಿವೃದ್ಧಿ ಹೊಂದುತ್ತದೆ. ಕೃಷಿ ಕುಟುಂಬದಿಂದ ಬಂದನಾನು ಬಡವರಿಗೆ, ರೈತರಿಗೆ ಅನುಕೂಲಕರವಾದ ಕೆಲಸಮಾಡಬೇಕೆಂಬ ತುಡಿತ ಹೊಂದಿದ್ದೆ. ಪುಣ್ಯಕೋಟಿ ಕಾರ್ಯಕ್ರಮ, ಚಿಕ್ಕೇರೂರ- ಬ್ಯಾಡಗಿ ರಸ್ತೆ ಅಗಲೀಕರಣ, ಕೇಸಿಪ್ ರಸ್ತೆ ಉನ್ನತೀಕರಣ, ಗದಗ-ಹೊನ್ನಾಳಿ ಹೈವೇ, ಚಿತ್ರದುರ್ಗ-ಹುಬ್ಬಳ್ಳಿ ರೈಲ್ವೆ ದ್ವಿಪಥ ಮಾರ್ಗ, ಹಾವೇರಿ-ಶಿರಸಿ ರಸ್ತೆ ಉನ್ನತೀಕರಣಕ್ಕೆ ಅಗತ್ಯವಾದ ಕಾರ್ಯವನ್ನು ತತ್ವರಿತವಾಗಿ ಕೈಗೊಳ್ಳಲಾಗಿದೆ. ಕೆರೆ ತುಂಬಿಸುವ ಯೋಜನೆ, ಉದ್ಯೋಗ ಖಾತ್ರಿ ಯೋಜನೆ, ಹೊಗೆಮುಕ್ತ ಗ್ರಾಮಗಳ ರಚನೆಯಂತಹ ಕಾರ್ಯಕ್ರಮ ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಪ್ರಧಾನ ಮಂತ್ರಿಗಳ ಪ್ರಶಂಸೆಗೂ ಕಾರಣವಾಗಿವೆ. ಹಾವೇರಿಯಲ್ಲಿ ಜಾರಿಗೊಳಿಸಿದ ಯೋಜನೆಗಳ ಬಗ್ಗೆ ಇಡೀ ರಾಜ್ಯದ ಹಿರಿಯ ಅಧಿಕಾರಿಗಳು ಪ್ರಶಂಸೆವ್ಯಕ್ತಪಡಿಸಿದ್ದಾರೆ. ವಿಡಿಯೋ ಕಾನ್ಫರೆನ್ಸ್ನಲ್ಲಿ ಹಾವೇರಿ ಮಾದರಿಯನ್ನು ಇತರ ಜಿಲ್ಲೆಗಳು ಅಳವಡಿಸಿಕೊಳ್ಳಿ ಎಂದು ಹೇಳುವ ಹಂತಕ್ಕೆ ಜಿಲ್ಲೆಯಲ್ಲಿ ಉತ್ತಮ ಕೆಲಸವಾಗಿವೆ ಎಂದು ಹೇಳಿದರು.
ಹಾವೇರಿಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯನ್ನು ನಿಗಿಸುವ ನಿಟ್ಟಿನಲ್ಲಿ 24*7 ಕುಡಿಯುವ ನೀರಿನ ವ್ಯವಸ್ಥೆ, ಹೆಗ್ಗೇರಿ ಕೆರೆ ತುಂಬಿಸುವ ಯೋಜನೆ, ಗ್ಲಾಸ್ಹೌಸ್ ನಿಮರ್ಾಣ, ಗಾಂಧಿ ಭವನ ನಿಮರ್ಾಣ, ವಿಜ್ಞಾನ ನಿಮರ್ಾಣದಂತಹ ಹಲವು ಕಾಮಗಾರಿಗಳಿಗೆ ಜನಪ್ರತಿನಿಧಿಗಳ ಸಹಕಾರದಿಂದ ಆರಂಭಗೊಳಿಸಲಾಗಿದೆ. ಬೆಳೆವಿಮೆ ಸಮಸ್ಯೆ, ರೈತ ಹೋರಾಟಗಳು, ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆಗಳು ಗಣನೀಯವಾಗಿ ಕಡಿಮೆಯಾಗಿವೆ. ಈ ಎಲ್ಲ ಕೆಲಸಗಳು ಕೇವಲ ನನ್ನಿಂದಮಾತ್ರವಾಗಿಲ್ಲ. ಜಿಲ್ಲೆಯ ಜನಪ್ರತಿನಿಧಿಗಳು, ಪ್ರತಿಯೊಬ್ಬ ಅಧಿಕಾರಿಗಳು ನೆರವಾಗಿದ್ದಾರೆ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಮಾಜಿ ಸಚಿವ ರುದ್ರಪ್ಪ ಲಮಾಣಿ ಅವರು ಮಾತನಾಡಿ, ಅತ್ಯಂತ ಸರಳ ಹಾಗೂ ಕ್ರಿಯಾಶೀಲ ಅಧಿಕಾರಿಯಾದ ಡಾ.ವೆಂಕಟೇಶ್ ಅವರು ಇಡೀ ರಾಜ್ಯಕ್ಕೆ ಮಾದರಿಯಾದ ಕೆಲಸವನ್ನು ಹಾವೇರಿ ಜಿಲ್ಲೆಯಲ್ಲಿ ಮಾಡಿದ್ದಾರೆ. ನೀರಾವರಿ ಯೋಜನೆಗಳು, ಕೆರೆ ತುಂಬಿಸುವ ಯೋಜನೆಗಳು, ಸ್ಮಶಾನಯುಕ್ತ ಗ್ರಾಮಗಳು, ಪೋಡಿಮುಕ್ತ ಗ್ರಾಮಗಳು, ರೈತರ ಸಮಸ್ಯೆಗಳ ನಿವಾರಣೆ ಸೇರಿದಂತೆ ಹಲವು ಗುರುತರವಾದ ಉತ್ತಮ ಕೆಲಸವನ್ನು ಮಾಡಿ ಜನರ ಮನಸ್ಸನ್ನು ಗೆದ್ದಿದ್ದಾರೆ. ಅವ್ಯವಸ್ಥೆಯ ಆಗರವಾಗಿದ್ದ ಹಾವೇರಿ ನಗರದ ಅಭಿವೃದ್ಧಿಗೆ ವಿಶೇಷ ಕಾಳಜಿ ವಹಿಸಿದ್ದಾರೆ. ಮುಖ್ಯಮಂತ್ರಿಗಳ 50 ಕೋಟಿ ರೂ. ವಿಶೇಷ ಅನುದಾನದಲ್ಲಿ ನಗರದ ಎಲ್ಲ ರಸ್ತೆಗಳ ಅಭಿವೃದ್ಧಿ, ವಿಜ್ಞಾನ ಭವನ, ರಂಗ ಮಂದಿರ ನಿಮರ್ಾಣ, ಗಾಜಿನಮನೆ ಸೇರಿದಂತೆ ಹಲವು ವಿಶೇಷ ಕಾರ್ಯಕ್ರಮವನ್ನು ರೂಪಿಸಿ ಚಾಲನೆ ನೀಡಿದ್ದಾರೆ. ಜಿಲ್ಲೆಯ ಜನತೆಯ ಪರವಾಗಿ ವಿಶೇಷ ಅಭಿನಂದನೆ ಸಲ್ಲಿಸುತ್ತೇನೆ. ರಾಜ್ಯ ಮಟ್ಟದಲ್ಲಿ ಉನ್ನತ ಹುದ್ದೆಗೇರಿಗೆ ಈ ರಾಜ್ಯದ ಮುಖ್ಯ ಕಾರ್ಯದಶರ್ಿಯಾಗಲಿ ಎಂದು ಹಾರೈಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ನೂತನ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ, ಜಿ.ಪಂ.ಅಧ್ಯಕ್ಷ ಎಸ್.ಕೆ.ಕರಿಯಣ್ಣನವರ ಮಾಜಿ ಅಧ್ಯಕ್ಷ ಹಾಗೂ ಜಿ.ಪಂ.ಸದಸ್ಯ ಕೊಟ್ರೇಶಪ್ಪ ಬಸೇಗಣ್ಣಿ, ಜಿ.ಪಂ.ಮುಖ್ಯ ಕಾರ್ಯನಿವರ್ಾಹಣಾಧಿಕಾರಿ ಕೆ.ಲೀಲಾವತಿ, ಉಪ ಕಾರ್ಯದಶರ್ಿ ಜಿ.ಗೋವಿಂದಸ್ವಾಮಿ, ಹಾವೇರಿ ಉಪವಿಭಾಗಾಧಿಕಾರಿ ತಿಪ್ಪೇಸ್ವಾಮಿ, ತುಂಗಾ ಮೇಲ್ದಂಡೆ ಯೋಜನೆಯ ವಿಶೇಷ ಭೂಸ್ವಾಧಿನಾಧಿಕಾರಿ ಸಿದ್ದು ಹುಲ್ಲೋಳಿ, ಕೃಷಿ ಜಂಟಿ ನಿದರ್ೆಶಕ ಮಂಜುನಾಥ್, ತೋಟಗಾರಿಕೆ ಇಲಾಖೆ ಉಪನಿದರ್ೆಶಕ ಶರಣಪ್ಪ ಭೋಗಿ ಮಾತನಾಡಿದರು. ಅಪರ ಜಿಲ್ಲಾಧಿಕಾರಿ ವಿನೋದ ಹೆಗ್ಗಳಗಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ವೇದಿಕೆಯಲ್ಲಿ ಸವಣೂರ ಮೋನಿಕಾ ಡಾ.ವೆಂಕಟೇಶ್, ಜಿಲ್ಲಾಧಿಕಾರಿಗಳ ಮಾತೃಶ್ರೀ ರಂಗಮ್ಮ ಉಪಸ್ಥಿತರಿದ್ದರು. ವಿಕಲಚೇತನರ ಕಲ್ಯಾಣಾಧಿಕಾರಿ ಮಲ್ಲಿಕಾಜರ್ುನ ಮಠದ ಸ್ವಾಗತಿಸಿದರು. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರಕಾಶ ರಾಠೋಡ ವಂದಿಸಿದರು. ನಾಗರಾಜ ನಡುವಿನಮಠ ಕಾರ್ಯಕ್ರಮ ನಿರೂಪಿಸಿದರು.