ಜಿಲ್ಲಾ ಆಸ್ಪತ್ರೆ ವೈದ್ಯ ಸುನೀಲ್ ಕಿಡ್ನಾಪ
ಬಳ್ಳಾರಿ 25: ರಂದು ನಗರದ ಜಿಲ್ಲಾ ಆಸ್ಪತ್ರೆಯ ಮಕ್ಜಳ ವೈದ್ಯ ಡಾ.ಸುನೀಲ್ ಅವರನ್ನು ಇಂದು ಬೆಳಿಗ್ಗೆ ಇಲ್ಲಿನ ಸತ್ಯನಾರಾಯಣ ಪೇಟೆಯ ಶನೇಶ್ವರ ಗುಡಿ ಬಳಿ ವಾಕಿಂಗ್ ಮಾಡುವಾಗ ಕಿಡ್ನಾಪ್ ಮಾಡಿದ್ದು ಆರು ಕೋಟಿ ರೂಗಳಿಗೆ ಅಪಹರಣಕಾರರು ಬೇಡಿಕೆ ಇಟ್ಟಿದ್ದಾರಂತೆ.ಟಾಟಾ ಇಂಡಿಗೋ ಕಾರಿನಲ್ಲಿ ಬಂದಿದ್ದ ಅಪಹರಣಕಾರರು ವೈದ್ಯರನ್ನು ತಕ್ಷಣ ಬಾಯಿಮುಚ್ಚಿ ಕಾರಿನಲ್ಲಿ ಕೂಡಿಸಿಕೊಂಡು ತೆರಳಿದ್ದಾರಂತೆ. ಇವರ ಸಹೋದರ ವೇಣು ಅವರು ಜಿಲ್ಲಾ ಮದ್ಯ ಮಾರಾಟಗಾರರ ಸಂಘದ ಅಧ್ಯಕ್ಷರಂತೆ.ಇವರ ಬಳಿ ಹೆಚ್ಚಿನ ಹಣ ಇದೆಂದು ಕಿಡ್ನಾಪ್ ಮಾಡಲಾಗಿದೆಂದು ಹೇಳಲಾಗುತ್ತಿದೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಪರೀಶೀಲನೆ ನಡೆಸಿದ್ದು ಕಿಡ್ನಾಪರ್ ಪತ್ತೆಗೆ ಮುಂದಾಗಿದ್ದಾರಂತೆ