ಧಾರವಾಡ 11: ಪ್ಲಾಸ್ಟಿಕ್ ಬಳಕೆ ಎಲ್ಲೆಡೆ ನಿಷೇಧಿಸಲಾಗಿದೆ. ಪ್ರತಿಯೊಬ್ಬರೂ ಪರಿಸರ ಸ್ನೇಹಿ ಜೀವನ ನಡೆಸಬೇಕು. ಗಿಡಗಳನ್ನು ನೆಡೆವುದಲ್ಲದೇ ಅವುಗಳನ್ನು ಉತ್ತಮವಾಗಿ ಪೋಷಿಸಿ ಬೆಳೆಸವುದರ ಮೂಲಕ ಹಸಿರನ್ನು ಹೆಚ್ಚಿಸಬೇಕು ಎಂದು ಜಿ.ಪಂ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ಡಾ.ಬಿಸಿ.ಸತೀಶ
ಹೇಳಿದರು.
ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಬೆಂಗಳೂರಿನ ವಾಲ್ನಟ್ ಸಂಸ್ಥೆಯ ಸಹಯೋಗದಲ್ಲಿ ಇಂದು ರಾಯಾಪುರದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಜ್ಞಾನವಿಕಾಸ ತರಬೇತಿ ಕೇಂದ್ರದಲ್ಲಿ ಸ್ವಚ್ಛ ಭಾರತ ಮಿಶನ್(ಗ್ರಾಮೀಣ) ಯೋಜನೆಯಡಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಮಟ್ಟದ ಸ್ವಚ್ಛತಾ ರಸಪ್ರಶ್ನೆ ಸ್ಪಧರ್ೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜ್ಞಾನವಿಕಾಸ ತರಬೇತಿ ಕೇಂದ್ರದ ನಿದರ್ೇಶಕ ಡಾ.ಪ್ರಕಾಶ್ ಭಟ್ ಮಾತನಾಡಿ, ಸ್ವಚ್ಛತೆ ಎಂಬುದು ನಿತ್ಯದ ಪರಿಪಾಠವಾಗಬೇಕು. ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರು ಸ್ವಚ್ಛತೆ ಪರಿಕಲ್ಪನೆಗೆ ಪ್ರೇರಣೆಯಾಗಿದ್ದಾರೆ ಎಂದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷೆ ವಿಜಯಲಕ್ಷ್ಮಿ ಕೆಂಪೇಗೌಡ ಪಾಟೀಲ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ. ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಕಲ್ಲಪ್ಪ ಪುಡಕಲಕಟ್ಟಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿದರ್ೇಶಕ ಗಜಾನನ ಮನ್ನಿಕೇರಿ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿದರ್ೇಶಕಿ ಶಾರದಾ ಕಿರೇಸೂರ, ಜಿ.ಪಂ. ಯೋಜನಾ ನಿದರ್ೇಶಕ ಬಿ.ಎಸ್.ಮೂಗನೂರಮಠ, ಶಿಕ್ಷಣಾಧಿಕಾರಿ ಎನ್.ಕೆ.ಸಾವ್ಕಾರ, ಪ್ರಮೋದ ಮಹಾಲೆ, ಕ್ಷೇತ್ರ ಶಿಕ್ಷಣಾಧಿಕಾರಿ ಅಕ್ಬರ್ ಅಲಿ ಖಾಜಿ, ಉಮಾದೇವಿ ಬಸಾಪೂರ, ಸ್ವಾಮಿ ವಿವೇಕಾನಂದ ಯುತ್ ಮೂವ್ಮೆಂಟ್ನ ಜಯಂತ್ ಕೆ.ಎಸ್ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ರಾಯಾಪುರದ ಕೆಎಲ್ಇ ಪ್ರೌಢಶಾಲೆಯ ಮಕ್ಕಳು ಪ್ರಾಥರ್ಿಸಿದರು. ಶಿವಲೀಲಾ ಕಳಸಣ್ಣವರ ನಿರೂಪಿಸಿದರು.